ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಅವರು ದರ್ಶನ್ ನಟನೆಯ ‘ದಿ ಡೆವಿಲ್’ (The Devil) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ. ಇದನ್ನೂ ಓದಿ:ಗೋಲ್ಡ್ ಸ್ಮಗ್ಲಿಂಗ್ ಕೇಸ್; ನಟಿ ರನ್ಯಾ ಜಾಮೀನು ಭವಿಷ್ಯ ಇಂದು ನಿರ್ಧಾರ
ಮಿಲನಾ ಪ್ರಕಾಶ್ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿರುವ ‘ದಿ ಡೆವಿಲ್’ ಚಿತ್ರಕ್ಕೆ ಶರ್ಮಿಳಾ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ತಾವು ಇರುವ ಕ್ಯಾರವಾನ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಹೇಗಿದೆ? ಎಂಬುದು ರಿವೀಲ್ ಆಗಿಲ್ಲ.
ಶರ್ಮಿಳಾ ಅಷ್ಟೇ ಅಲ್ಲ, ‘ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ ವಿನಯ್ ಗೌಡ (Vinay Gowda) ‘ಡೆವಿಲ್’ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಡೆವಿಲ್‌ನಲ್ಲಿ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ದರ್ಶನ್ (Darshan), ಶರ್ಮಿಳಾ, ವಿನಯ್ ಇರುವ ಚಿತ್ರೀಕರಣದ ಸ್ಥಳದಲ್ಲಿ ಭಾರೀ ಬಿಗಿ ಭದ್ರತೆ ಕೊಡಲಾಗಿದೆ. ಪೊಲೀಸ್ ಮತ್ತು ಬೌನ್ಸರ್ ಇಟ್ಟುಕೊಂಡು ನಿರ್ದೇಶಕ ಶೂಟಿಂಗ್ ಶುರು ಮಾಡಿದ್ದಾರೆ.
ಇನ್ನೂ ಈ ಹಿಂದೆ ‘ನವಗ್ರಹ’ (Navagraha) ಸಿನಿಮಾದಲ್ಲಿ ದರ್ಶನ್ (Darshan) ಜೊತೆ ಶರ್ಮಿಳಾ ತೆರೆಹಂಚಿಕೊಂಡಿದ್ದರು. ಇದೀಗ 2ನೇ ಬಾರಿ ದರ್ಶನ್ ಜೊತೆ ನಟಿ ಸಿನಿಮಾ ಮಾಡ್ತಿದ್ದಾರೆ.