ಮಂಗಳೂರು: ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಶಾರೀಕ್ (Shariq) ಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಎಂಟು ಮಂದಿ ವೈದ್ಯರು ದಿನದ 24 ತಾಸು ನಿಗಾ ವಹಿಸುತ್ತಿದ್ದಾರೆ.
Advertisement
ದಿನದಿಂದ ದಿನಕ್ಕೆ ಶಾರೀಕ್ ಆರೋಗ್ಯ (Shariq Health) ಸ್ಥಿತಿ ಬಿಗಡಾಯಿಸುತ್ತಿದೆ. ಕುಕ್ಕರ್ ಬಾಂಬು ಸ್ಫೋಟದ ವೇಳೆ ಭಾರೀ ಪ್ರಮಾಣದ ಹೊಗೆ ಕಂಡುಬಂದಿತ್ತು. ಸ್ಪೋಟದ ಹೊಗೆ ಶಾರೀಕ್ ಶ್ವಾಸಕೋಶದಲ್ಲಿ ತುಂಬಿಕೊಂಡ ಕಾರಣ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪೋಟದ ವೇಳೆ ಕುಕ್ಕರ್ ನ ಮುಚ್ಚಳ ಕುತ್ತಿಗೆಗೆ ಬಡಿದು ಗಂಭೀರ ಗಾಯಗಳಾಗಿವೆ. ಹೀಗಾಗಿ ಕುತ್ತಿಗೆಯ ಗಾಯಗಳಿಗೆ ವೈದ್ಯರ ತಂಡ ವಿಶೇಷ ಚಿಕಿತ್ಸೆ ನೀಡುತ್ತಿದೆ.
Advertisement
Advertisement
ಇನ್ನು ಮೂರು ವಾರಗಳ ಕಾಲ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ. 8 ಮಂದಿ ವೈದ್ಯರಿಂದ ದಿನದ 24 ತಾಸು ನಿಗಾ ವಹಿಸಲಾಗುತ್ತಿದೆ. ಶಾರೀಕ್ ಎಳೆಯ ಪ್ರಾಯವಾಗಿರುವುದರಿಂದ ಚಿಕಿತ್ಸೆಗೆ ಅನುಕೂಲವಾಗುತ್ತಿದೆ ಎಂದು ಪಬ್ಲಿಕ್ ಟಿವಿಗೆ ಆಸ್ಪತ್ರೆಯ ವೈದ್ಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕದ್ರಿ ದೇಗುಲಕ್ಕೆ IRCಯಿಂದ ಬೆದರಿಕೆ ಪತ್ರ – ದೇಗುಲದ ಮಂಡಳಿಯಿಂದ ದೂರು