BollywoodCinemaDistrictsKarnatakaLatestMain Post

ಸ್ತನ ಕ್ಯಾನ್ಸರ್ ಚಿಕಿತ್ಸೆ ನಂತರ ಫೋಟೋ ಶೇರ್ ಮಾಡಿ ಅನುಭವ ಹಂಚಿಕೊಂಡ ಛವಿ ಮಿತ್ತಲ್

ಕೆಲ ತಿಂಗಳ ಹಿಂದೆಯಷ್ಟೇ ತಮಗೆ ಸ್ತನ ಕ್ಯಾನ್ಸರ್ ಆಗಿರುವ ವಿಚಾರ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು ಬಾಲಿವುಡ್ ಮತ್ತು ಕಿರುತೆರೆ ನಟಿ ಛವಿ ಮಿತ್ತಲ್. ಕ್ಯಾನ್ಸರ್ ಮೊದಲ ಹಂತದಲ್ಲೇ ಇರುವಾಗಲೇ ತಮಗೆ ತಿಳಿದಿದ್ದರಿಂದ, ಅದಕ್ಕೆ ಅಗತ್ಯ ಸರ್ಜರಿ ಮಾಡಿಸಿಕೊಳ್ಳುವುದಾಗಿಯೂ ಹೇಳಿದ್ದರು. ಮೊದಲ ಹಂತದಲ್ಲೇ ತಮಗೆ ತಿಳಿದಿದ್ದಕ್ಕೆ ದೇವರಿಗೆ ಧನ್ಯವಾದ ಕೂಡ ಅರ್ಪಿಸಿದ್ದರು. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

ಇದೀಗ ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದಿರುವ ಛವಿ, ಸರ್ಜರಿಯ ನಂತರದ ಫೋಟೋವನ್ನೂ ಶೇರ್ ಮಾಡಿದ್ದಾರೆ. ಆರು ತಾಸುಗಳ ಕಾಲ ಈ ಚಿಕಿತ್ಸೆ ನಡೆದಿದ್ದು, ತಮಗೆ ಮರುಜೀವ ಬಂದಿದೆ ಎನ್ನುವ ಅರ್ಥದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಅಲ್ಲದೇ, ಚಿಕಿತ್ಸೆ ನೀಡಿದ ವೈದ್ಯರಿಗೆ ಅವರು ಧನ್ಯವಾದಗಳನ್ನೂ ತಿಳಿಸಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

ವೈದ್ಯರು ಆರು ತಾಸುಗಳ ಸರ್ಜರಿ ವಿಚಾರವನ್ನು ನನ್ನೊಂದಿಗೆ ಹಂಚಿಕೊಂಡರು. ಅರವಳಿಕೆ ತಜ್ಞರು ಮದ್ದು ನೀಡಿ, ಒಳ್ಳೆಯ ವಿಚಾರಗಳನ್ನು ಯೋಚಿಸುತ್ತಾ ಕಣ್ಣು ಮುಚ್ಚಿಕೊಳ್ಳಲು ಹೇಳಿದರು. ವೈದ್ಯರು ಹೇಳಿದ ಎಲ್ಲ ಸಲಹೆಗಳನ್ನೂ ಪಾಸಿಟಿವ್ ಆಗಿಯೇ ತಗೆದುಕೊಂಡು ಕಣ್ಣು ಮುಚ್ಚಿಕೊಂಡೆ. ಆರು ಗಂಟೆಗಳ ನಂತರ ಸ್ತನ ಸರ್ಜರಿ ಆದ ವಿಚಾರ ನನಗೆ ಗೊತ್ತಾಯಿತು. ವೈದ್ಯರು ಆಗ ಕ್ಯಾನ್ಸರ್ ಮುಕ್ತವಾಗಿರುವ ಬಗ್ಗೆ ತಿಳಿಸಿದರು ಎಂದು ಛವಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

ಸ್ತನ ಕ್ಯಾನ್ಸರ್ ಇರುವವರು ಭಯ ಪಡಬೇಕಿಲ್ಲ. ಎಲ್ಲದಕ್ಕೂ ಈಗ ಚಿಕಿತ್ಸೆಯಿದೆ. ಧೈರ್ಯವೇ ಎಲ್ಲದಕ್ಕೂ ಮದ್ದು. ಹಾಗಾಗಿ ಧೈರ್ಯದಿಂದ ಏನೇ ಬಂದರೂ ಎದುರಿಸಿ. ನಿಮ್ಮೆಲ್ಲರ ಪ್ರಾರ್ಥನೆಯಿಂದ ನಾನು ಈಗ ಕ್ಯಾನ್ಸರ್ ಗೆದ್ದು ಬಂದಿದ್ದೇನೆ. ನಿಮ್ಮ ಪ್ರೀತಿಗೆ ನಾನು ಋಣಿ ಎಂದು ಅವರು ಬರೆದುಕೊಂಡಿದ್ದಾರೆ.

Leave a Reply

Your email address will not be published.

Back to top button