ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಗಳು ಗರಿಗೆದರಿವೆ.
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು, ನಂಬಿಸಿ ಕುತ್ತಿಗೆ ಕುಯ್ಯಬೇಡಿ. ಈಗ ನೀವು ಟಿಕೆಟ್ ಕೊಡಲ್ಲ ಅಂದ್ರೆ ಹೇಗೆ ಎಂದು ಇಂದು ಯಡಿಯೂರಪ್ಪ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ನನಗೆ ಮೂರು ದಿನ ಟೈಂ ಕೊಡಿ. ಶುಕ್ರವಾರ ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧರಿಸುತ್ತೇನೆ ಎಂದು ಹೇಳುವ ಮೂಲಕ ಎಂಟಿಬಿ ನಾಗರಾಜ್ ರನ್ನು ಬಿಎಸ್‍ವೈ ಮನವೊಲಿಕೆ ಮಾಡಲು ಯತ್ನಿಸಿದ್ದಾರೆ. ಆದರೆ ಯಡಿಯೂರಪ್ಪ ಮಾತಿಗೆ ಎಂಟಿಬಿ ಫುಲ್ ಗರಂ ಆಗಿದ್ದು, ನೀವು ಟಿಕೆಟ್ ಕೊಡದೇ ಇದ್ದರೆ ಏನ್ ಮಾಡಬೇಕು ಎಂದು ಗೊತ್ತಿದೆ ಎಂದು ಹೇಳಿ ಅರ್ಧದಿಂದಲೇ ಎದ್ದು ಎಂಟಿಬಿ ನಾಗರಾಜ್ ಹೊರನಡೆದಿದ್ದಾರೆ ಎನ್ನಲಾಗಿದೆ.
Advertisement
ಇತ್ತ ಎಂಟಿಬಿ ನಾಗರಾಜ್‍ಗೆ ಟಿಕೆಟ್ ನೀಡದಂತೆ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಬೆಂಬಲಿಗರು ಸಿಎಂ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಪಕ್ಷ ಕಟ್ಟಿದವರನ್ನ ಬಿಟ್ಟು ಎಲ್ಲಿಂದಲೋ ಬಂದವರಿಗೆ ಟಿಕೆಟ್ ನೀಡುವುದು ಸರಿಯಲ್ಲ. ಎಂಟಿಬಿ ಡೌನ್ ಡೌನ್ ಎಂದು ಶರತ್‍ಗೌಡ ಬೆಂಬಲಿಗರ ಧಿಕ್ಕಾರ ಕೂಗಿದ್ದಾರೆ.