ಬೆಂಗಳೂರು/ಹೊಸಕೋಟೆ: ಉಪಚುನಾವಣೆಯಲ್ಲಿ ಗೆದ್ದಿರುವ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರನ್ನ ಪಕ್ಷಕ್ಕೆ ಸೇರಿಸಲ್ಲ ಎಂದು ಬಿಜೆಪಿ ಮುಖಂಡ ಜಯರಾಜ್ ಹೇಳಿದ್ದಾರೆ.
ಹೊಸಕೋಟೆಯಲ್ಲಿರುವ ಎಂಟಿಬಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯರಾಜ್, ಮಂತ್ರಿ ಸ್ಥಾನ ತ್ಯಾಗ ಮಾಡಿ ಬಿಜೆಪಿ ಸರ್ಕಾರ ರಚಿಸಲು ಪ್ರಮುಖ ಕಾರಣವಾಗಿರುವ ಎಂಟಿಬಿ ನಾಗರಾಜ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು. ಬಿಜೆಪಿ ಸರ್ಕಾರಕ್ಕೆ ಎಂಟಿಬಿ ಮಂತ್ರಿ ಸ್ಥಾನ ತ್ಯಾಗ ಮಾಡಿದವರು. ಅವರ ತ್ಯಾಗಕ್ಕೆ ಸಿಎಂ ಕೈ ಹಿಡಿಯಬೇಕು. ಎಂಟಿಬಿ ಅವರ ಅಭಿವೃದ್ಧಿ ಯೋಜನೆಗೆ ಕುತ್ತು ಬಾರದಂತೆ ಸಿಎಂ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
Advertisement
Advertisement
ಸೋತವರಿಗೆ ಮಂತ್ರಿ ಸ್ಥಾನ ಕೊಡಬಾರದು ಅಂತ ಈಶ್ವರಪ್ಪರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಯರಾಜ್, ಎಂಟಿಬಿ ಶಾಸಕ ಸ್ಥಾನದ ಜೊತೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವರು. ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಿ ಮತ್ತು ಕಾನೂನು ತೊಡಕು ಸರಿಪಡಿಸಿ ಎಂಟಿಬಿ ಅವರನ್ನ ಮಂತ್ರಿ ಮಾಡಬೇಕು. ಈ ಬಗ್ಗೆ ಕ್ಷೇತ್ರದ ಐದು ಸಾವಿರ ಜನ ಸಿಎಂ ಭೇಟಿ ಮಾಡಿ ಮನವಿ ಮಾಡುತ್ತೇವೆ. ಕಾಂಗ್ರೆಸ್ ನಲ್ಲಿ ಎಂಟಿಬಿ ಅಭಿಮಾನಿಗಳಿದ್ದಾರೆ ಪಕ್ಷ ಬಿಡೋಕೆ ಸಿದ್ಧರಿರಲಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದರು.