ಬೆಂಗಳೂರು: ತಾಲೂಕಿನ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಹಾಗು ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದವರನ್ನು ಗುರುತಿಸಿ ಅವರಿಗೆ ನಗರಸಭೆ ಚುನಾವಣೆಯ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ಕ್ಷೇತ್ರದಲ್ಲಿ ನಗರಸಭೆ ಚುನಾವಣೆಯ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆ ಬಳಿಕ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ನೀರು ಸರಬರಾಜುಗುತ್ತಿದ್ದ ಪೈಪನ್ನು ಒಡೆದು ಕೋರ್ ಕಮುಟಿಯಲ್ಲಿ ವಾರ್ಡ್‍ನವರು ವ್ಯವಸ್ಥೆಯನ್ನು ಕೆಡಿಸುತ್ತಿದ್ದಾರೆ. ಇದನ್ನೆಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಮಾಡುತ್ತಿರುವುದು ನಮಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ ಎಂದರು.
Advertisement
ಈ ಬಗ್ಗೆ ಈ ಸಮಿತಿಯಲ್ಲಿ ತಿರ್ಮಾನಿಸಲಾಗುವುದು. ಇದಕ್ಕೆಲ್ಲ ನಾವು ಹೆದರದೆ ಕೆಲಸ ಒಗ್ಗಟ್ಟಿನಿಂದ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಕೆಲಸ ಮಾಡಬೇಕು. ನಗರಸಭೆಯ ಚುನಾವಣೆಯಲ್ಲಿ ಸರ್ವಸಮ್ಮತವಾಗಿ ಅಭ್ಯರ್ಥಿಗಳನ್ನು ಕಣಕ್ಕೆ ತಂದು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ತರಬೇಕು. ಹೊಸಕೋಟೆ ಕ್ಷೇತ್ರದಲ್ಲಿ ಷಡ್ಯಂತರ ಮಾಡುತ್ತಿರುವವರಿಗೆ ತಕ್ಕ ಪಾಠವನ್ನು ತಾಲೂಕಿನ ಮತದಾರರು ಸ್ವಾಭಿಮಾನದ ಪಕ್ಷಕ್ಕೆ ಮತ ನೀಡಿ ಅಭಿವೃದ್ಧಿಯ ಮೂಲಕ ತೋರಿಸಬೇಕಾಗಿದೆ ಎಂದರು.