‘ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಸಿನಿಮಾದ ಸಕ್ಸಸ್ ಬಳಿಕ ಕನ್ನಡದ ಮತ್ತೊಂದು ಬಿಗ್ ಪ್ರಾಜೆಕ್ಟ್‌ಗೆ ಕುಡ್ಲದ ಬೆಡಗಿ ಶರಣ್ಯಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್‌ಗೆ (Lovely Star Prem) ಹೊಸ ಸಿನಿಮಾಗೆ ಶರಣ್ಯಾ ಹೀರೋಯಿನ್ ಆಗಿದ್ದಾರೆ. ಇದನ್ನೂ ಓದಿ:‘ದೋಸ್ತಾ ನೀ ಮಸ್ತಾ’: ಗೆಳೆಯನ ಗೆಲುವುವನ್ನು ಸಂಭ್ರಮಿಸಿದ ಧನರಾಜ್ ಆಚಾರ್
ನೆನಪಿರಲಿ ಪ್ರೇಮ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ಶರಣ್ಯಾ (Sharanya Shetty) ಸೆಲೆಕ್ಟ್ ಆಗಿದ್ದು, ಅವರು ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಪವರ್‌ಫುಲ್ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.
ಇನ್ನೂ ಈ ಸಿನಿಮಾದ ಜೊತೆಗೆ ತೆಲುಗಿನಲ್ಲಿ ಚಿತ್ರವೊಂದಕ್ಕೆ ಶರಣ್ಯಾ ಆಯ್ಕೆಯಾಗಿದ್ದಾರೆ. ಇಬ್ಬರೂ ಸ್ಟಾರ್ ನಟರಿರುವ ಸಿನಿಮಾ ಅವರು ನಾಯಕಿಯಾಗಿದ್ದು, ಈ ಚಿತ್ರದ ಕುರಿತು ಮತ್ತಷ್ಟು ವಿವರ ಇನ್ನೂ ರಿವೀಲ್ ಆಗಬೇಕಿದೆ.
ಇನ್ನೂ ‘ಗಟ್ಟಿಮೇಳ’ (Gattimela) ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಚೆಲುವೆ ಆ ನಂತರ 1980, ನಗುವಿನ ಹೂಗಳೇ, ಫಾರೆಸ್ಟ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೊತೆಯಾಗಿ ನಟಿಸಿ ಸೈ ಎನಿಸಿಕೊಂಡರು. ಈ ಚಿತ್ರ ಅವರಿಗೆ ಬಿಗ್ ಬ್ರೇಕ್ ಕೊಟ್ಟಿದೆ.