ಮತ್ತೊಂದು ಗೋಲ್ಡನ್‌ ಚಾನ್ಸ್‌ ಗಿಟ್ಟಿಸಿಕೊಂಡ ಶರಣ್ಯ ಶೆಟ್ಟಿ

Public TV
2 Min Read
sharanya shetty 1 2

1980, ಹುಟ್ಟುಹಬ್ಬದ ಶುಭಾಶಯಗಳು, ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ‘ಗಟ್ಟಿಮೇಳ’ (Gattimela) ನಟಿ ಶರಣ್ಯ ಶೆಟ್ಟಿ ಅವರು ಇತ್ತೀಚಿಗೆ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಟನೆಯ ಸಿನಿಮಾಗೆ ನಾಯಕಿಯಾಗುವ ಮೂಲಕ ಸಿಹಿಸುದ್ದಿ ನೀಡಿದ್ರು. ಈಗ ‘ಅಕಿರ’ ಹೀರೋ ಅನೀಶ್ ತೇಜೇಶ್ವರ್‌ಗೆ (Anish Tejeshwar) ಹೀರೋಯಿನ್ ಆಗಿದ್ದಾರೆ.

sharanya shetty 1 1

ಕಿರುತೆರೆಯ ಜನಪ್ರಿಯ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ವಿಲನ್ ಆಗಿ ವೇದಾಂತ್- ಅಮೂಲ್ಯಗೆ ಟಕ್ಕರ್ ಕೊಡ್ತಿದ್ದರು. ಅವರ ಪಾತ್ರ ಮುಕ್ತಾಯವಾಗುತ್ತಿದ್ದಂತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾಗಿದ್ದರು. ಪ್ರಿಯಾಂಕಾ ಉಪೇಂದ್ರ ಅವರ ಜೊತೆ ‘1980’ ಚಿತ್ರದಲ್ಲಿ ನಟಿ ಗಮನ ಸೆಳೆದರು. ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ನಟಿ ಒಪ್ಪಿಕೊಳ್ತಿದ್ದಾರೆ. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಡಿಫರೆಂಟ್ ರೋಲ್‌ಗಳನ್ನ ನಟಿ ಓಕೆ ಅಂತಿದ್ದಾರೆ.

sharanya shetty 2

‘ಕೃಷ್ಣಂ ಪ್ರಣಯ ಸಖಿ’ ಗೋಲ್ಡನ್ ಹೀರೋಗೆ ಸೆಕೆಂಡ್ ಹೀರೋಯಿನ್ ಆಗಿದ್ದರು ಶರಣ್ಯ ಪಾತ್ರಕ್ಕೆ ಮಹತ್ವವಿದೆ. ಮಾಡ್ರನ್ ಅವತಾರದಲ್ಲಿ ಶರಣ್ಯ ನಟಿಸಿದ್ದಾರೆ. ಗಣೇಶ್‌ಗೆ ಮಾಲಿವುಡ್ ನಟಿ ಮಾಳವಿಕಾ ಮತ್ತು ಶರಣ್ಯ ಶೆಟ್ಟಿ (Sharanya Shetty) ನಾಯಕಿಯರಾಗಿದ್ದಾರೆ. ಭಿನ್ನವಾಗಿರುವ ತ್ರಿಕೋನ ಪ್ರೇಮಕಥೆಯನ್ನ ಇಲ್ಲಿ ನೋಡಬಹುದಾಗಿದೆ. ಈ ಬೆನ್ನಲ್ಲೇ ಮತ್ತೊಂದು ಬ್ರೇಕಿಂಗ್ ಅಪ್‌ಡೇಟ್ ಸಿಕ್ಕಿದೆ. ಇದನ್ನೂ ಓದಿ:‘ಲೈಗರ್‌’ ನಟಿ ಜೊತೆ ಆದಿತ್ಯ ಕಪೂರ್ ಕಣ್ ಕಣ್ ಸಲಿಗೆ

sharanya shetty 1

ಅಕಿರ, ರಾಮಾರ್ಜುನ, ವಾಸು ನಾನು ಪಕ್ಕಾ ಕಮರ್ಷಿಯಲ್, ಚಿತ್ರಗಳ ಮೂಲಕ ಸಂಚಲನ ಮೂಡಿಸಿರುವ ಅನೀಶ್ ತೇಜೇಶ್ವರ್‌ಗೆ ನಾಯಕಿಯಾಗಿ ಶರಣ್ಯ ಶೆಟ್ಟಿ ಸೆಲೆಕ್ಟ್ ಆಗಿದ್ದಾರೆ. ಈ ಸಿನಿಮಾದಲ್ಲಿ ಪಕ್ಕಾ ಸಂಪ್ರಾದಾಯಿಕ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ನಟನೆಗೆ ಹೆಚ್ಚು ಒತ್ತಿರುವ ವಿಭಿನ್ನ ರೋಲ್‌ಗೆ ನಟಿ ಜೀವತುಂಬುತ್ತಿದ್ದಾರೆ. ಹೆಸರಿಡದ ಈ ಹೊಸ ಪ್ರಾಜೆಕ್ಟ್, ಜುಲೈ 18ರಿಂದ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಸಾಂಗ್ ಶೂಟ್ ಥೈಲ್ಯಾಂಡ್‌ನಲ್ಲಿ ನಡೆಯಲಿದೆ. ‘ಬ್ರಹ್ಮಚಾರಿ’ ಸಿನಿಮಾ ನಿರ್ದೇಶಕ ಚಂದ್ರ ಮೋಹನ್‌ (Chandra Mohan) ಈ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ.

ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾಗುವ ಮೂಲಕ ಶರಣ್ಯ ಶೆಟ್ಟಿ ಬಂಪರ್ ಆಫರ್ಸ್ ಗಿಟ್ಟಿಸಿಕೊಳ್ತಿದ್ದಾರೆ. ಚಿತ್ರರಂಗದಲ್ಲಿ ಮೊದಲೇ ಶೆಟ್ರ ಹವಾ ಜೋರಾಗಿದೆ. ಶರಣ್ಯ ಶೆಟ್ಟಿ ಅವರು ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ ಅಂತಾ ಕಾಯಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article