ಬೀದರ್: ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾನ, ಮರ್ಯಾದೆ ಇದ್ರೆ ಕೂಡಲೇ ಮಂಜುನಾಥರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಬಿಜೆಪಿ ಶಾಸಕ ಶರಣು ಸಲಗರ್(Sharanu Salagar) ಕಿಡಿಕಾರಿದರು.
ಬೀದರ್‌ನಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್(Kothur Manjunath) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಸಿಂಧೂರ(Operation Sindoor) ಬಗ್ಗೆ ರೈತರು, ಕೂಲಿ ಕಾರ್ಮಿಕರು ಎಲ್ಲರಿಗೂ ಸಂತೋಷವಿದೆ. ಉಗ್ರವಾದವನ್ನ ಬುಡ ಸಮೇತ ಕಿತ್ತು ಹಾಕುವ ಕೆಲಸವನ್ನು ಆಪರೇಷನ್ ಸಿಂಧೂರ ಮಾಡಿದೆ ಎಂದರು. ಇದನ್ನೂ ಓದಿ: ಕೊತ್ತೂರು ಮಂಜುನಾಥ್ ಅಬ್‌ನಾರ್ಮಲ್ ಪರ್ಸನ್, ಕಾಂಗ್ರೆಸ್ ಸಸ್ಪೆಂಡ್ ಮಾಡ್ಬೇಕು: ಎನ್.ಮಹೇಶ್ ಆಗ್ರಹ
ಕಾಂಗ್ರೆಸ್ ಶಾಸಕರು ಮೂರ್ಖತನದ ಹೇಳಿಕೆ ಕೊಡುತ್ತಿದ್ದು, ಕಾಂಗ್ರೆಸ್‌ನ(Congress) ಮುಖವಾಡ ಕಳಚುತ್ತಿದೆ. ಇದು ಕೇವಲ ಶಾಸಕನ ಮಾತಲ್ಲ, ಇಡೀ ಕಾಂಗ್ರೆಸ್ ಪಕ್ಷದ ಹೇಳಿಕೆ. ಯಾಕಂದ್ರೆ, ಇದು ರಾಷ್ಟ್ರ ಕಟ್ಟುವ ಕೆಲಸವಾಗಿದ್ದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!
ಮುರ್ಖತನ, ದೇಶದ್ರೋಹದ ಹೇಳಿಕೆ ಕೊಟ್ಟಿರುವ ಕೊತ್ತೂರು ಮಂಜುನಾಥ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಂತಹ ದೇಶದ್ರೋಹಿ ಶಾಸಕರನ್ನ ಅಧಿವೇಶನದೊಳಗೆ ಕಾಲಿಡಲು ಬಿಡಲ್ಲ ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ನಾಯಕರು ಆಪರೇಷನ್ ಸಿಂಧೂರ ಬಗ್ಗೆ ಸಾಕ್ಷಿ ಕೇಳುತ್ತಿರುವ ವಿಚಾರವಾಗಿ ಮಾತನಾಡಿ, ಯುದ್ಧ ಮಾಡಬೇಕಾದ್ರೆ ಇವರೆಲ್ಲರಿಗೂ ಲೈವ್ ತೋರಿಸಿ ಯುದ್ಧ ಮಾಡೋಕೆ ಆಗಲ್ಲ. ಪ್ರಿಯಾಂಕ್ ಖರ್ಗೆಯವರ ಹೇಳಿಕೆಯಲ್ಲ ಇಡೀ ಕಾಂಗ್ರೆಸ್ ಹೇಳಿಕೆಯಾಗಿದೆ. ಪ್ರಿಯಾಂಕ್ ಖರ್ಗೆಯವರಿಗೆ ನಾಲಿಗೆಯ ಮೇಲೆ ಹಿಡಿತವಿರಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಕೂಗೋ ಮನಸ್ಥಿತಿ ಇರೋರನ್ನ ಸಂಸತ್ ನಿಯೋಗದಲ್ಲಿ ಸೇರಿಸಬೇಕಾ: ಕರಂದ್ಲಾಜೆ
ಇದು ಸಿಂಧೂರ ಅಷ್ಟೇ, ಕೆಲವೇ ದಿನಗಳಲ್ಲಿ ಆಪರೇಷನ್ ಸಂಹಾರ ಮಾಡಲಾಗುತ್ತದೆ. ನನಗೂ ಆದೇಶ ಬಂದ್ರೆ ಗನ್ ಹಿಡಿದು ಯುದ್ಧಕ್ಕೆ ಹೋಗ್ತೀನಿ. ನನಗೆ ಯಾವುದೇ ತರಬೇತಿ ಬೇಡ. ಅನುಮತಿ ಕೊಟ್ರೆ ಪಾಕಿಸ್ತಾನ ವಿರುದ್ಧ ಮುಗಿ ಬೀಳುತ್ತೇವೆ ಎಂದು ಹೇಳಿದರು.