Bengaluru CityCinemaDistrictsKarnatakaLatestMain Post

ಯುವ ಸಾಹಿತ್ಯ ರತ್ನ ಪ್ರಶಸ್ತಿಗೆ ಶರಣು ಹುಲ್ಲೂರು ಆಯ್ಕೆ

ಬೆಂಗಳೂರು: ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘ ನೀಡುವ ‘ಯುವ ಸಾಹಿತ್ಯ ರತ್ನ’ ಪ್ರಶಸ್ತಿಗೆ ಡಾ.ಶರಣು ಹುಲ್ಲೂರು ಅವರ ‘ಅನಂತವಾಗಿರು’ ಕೃತಿ ಆಯ್ಕೆಯಾಗಿದೆ.

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2021ನೇ ಸಾಲಿನ ಪ್ರಶಸ್ತಿಯನ್ನು ಘೋಷಿಸಿದ್ದು, ಡಾ. ಶರಣು ಹುಲ್ಲೂರು ಅವರು ಸೇರಿದಂತೆ ಗಜಾನನ ಶರ್ಮಾ, ಡಾ.ವಿಜಯಮ್ಮ, ಜಮೀಲ್ ಸಾವಣ್ಣ ಅವರು ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ನಾನು ಚೇತರಿಸಿಕೊಂಡಿದ್ದೇನೆ: ಸರ್ಜರಿ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ದಿಗಂತ್

ಸಾಹಿತ್ಯ ರತ್ನ ಪ್ರಶಸ್ತಿಗೆ ಗಜಾನನ ಶರ್ಮಾ ಅವರ ‘ಚನ್ನಭೈರಾದೇವಿ’ ಆಯ್ಕೆಯಾಗಿದೆ. ಪುಸ್ತಕ ರತ್ನ ಪ್ರಶಸ್ತಿಗೆ ಜಮೀಲ್ ಸಾವಣ್ಣ ಅವರ ‘ಸಾವಣ್ಣ ಪ್ರಕಾಶನ’, ಮುದ್ರಣ ರತ್ನ ಪ್ರಶಸ್ತಿಗೆ ಲೇಖಕಿ ವಿಜಯಾ ಅವರ ‘ಇಳಾ ಗ್ರಾಫಿಕ್ಸ್’ ಆಯ್ಕೆಯಾಗಿದೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಬೆತ್ತಲೆ ಚಿತ್ರಕ್ಕೆ ಭಾರತದಾದ್ಯಂತ ತಾಪಮಾನ ಹೆಚ್ಚಿದೆ ಎಂದ ನಟಿ ಅನನ್ಯ ಪಾಂಡೆ

ಈ ಪ್ರಶಸ್ತಿಗಳು ತಲಾ 10 ಸಾವಿರ ರೂಪಾಯಿ ನಗದು ಒಳಗೊಂಡಿವೆ. ಪುಸ್ತಕ ಸಂಸ್ಕೃತಿಗೆ ಪೂರಕವಾಗಿ ಬರಹಗಾರರು, ಪ್ರಕಾಶಕರು ಹಾಗೂ ಮುದ್ರಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದೇವೆ. 2021ನೇ ಸಾಲಿನ ಪ್ರಶಸ್ತಿಗಳನ್ನು ಜುಲೈ 30ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟ ಸ್ವಾಮಯ್ಯ ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button