ಮಕ್ಕಳ ಅಭಿವೃದ್ಧಿಯೇ ನಮ್ಮ ಪ್ರಗತಿ- ಶಾಲೆಗಾಗಿಯೇ ಅರ್ಧ ಸಂಬಳ ಮೀಸಲಿಡ್ತಾರೆ ರೋಣಾದ ಶರಣಪ್ಪ ಮೇಷ್ಟ್ರು

Public TV
2 Min Read
PUBLiC HERO

ಗದಗ: ಸರ್ಕಾರಿ ಕೆಲಸ ತಿಂಗಳಿಗೆ ಸಂಬಳ ಎಣಿಸಿಕೊಂಡು ಮನೆಗೆ ಹೋಗೋವ್ರೇ ಜಾಸ್ತಿ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ರೋಣಾ ತಾಲೂಕಿನ ಕಳಕಾಪುರದ ಮೇಷ್ಟ್ರು ಶರಣಪ್ಪ ಅವರು ತಮ್ಮ ಅರ್ಧ ಸಂಬಳವನ್ನು ವಿದ್ಯಾರ್ಥಿಗಳಿಗಾಗಿ ಖರ್ಚು ಮಾಡ್ತಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಕಳಕಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಶರಣಪ್ಪ ಮೇಸ್ಟ್ರು ಕಾರ್ಯನಿರ್ವಹಿಸುತ್ತಿದ್ದಾರೆ. ತಮಗೆ ಬರುವ ಶೇಕಡಾ ಅರ್ಧದಷ್ಟು ಸಂಬಳ ಬಡಮಕ್ಕಳ ಶಿಕ್ಷಣ, ಪರಿಸರ, ಕ್ರೀಡೆ, ಗ್ರಾಮದ ಆರೋಗ್ಯಕರ ಕೆಲಸಕ್ಕೆ ಮೀಸಲಿಡುತ್ತಿದ್ದಾರೆ.

vlcsnap 2018 08 07 08h23m56s132

ಕಳೆದ ಎಂಟು ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಿ-ನಲಿ ಈ ಶರಣಪ್ಪ ಮೆಸ್ಟ್ರು, ಕೇವಲ ಶಾಲೆಗೆ ಸೀಮಿತರಾಗಿಲ್ಲ. ಊರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರಮಜೀವಿ. ಕ್ರೀಡಾ, ಸಂಗೀತ, ಶಿಕ್ಷಣ, ಪರಿಸರ, ಆರೋಗ್ಯ ಗ್ರಾಮ ಹೀಗೆ ನಾನಾ ಬಗೆಯ ಕಾರ್ಯಗಳ ಮೂಲಕ ಕಳಕಾಪುರ ಗ್ರಾಮಕ್ಕೆ ಕಳೆ ತುಂಬುತ್ತಿದ್ದಾರೆ. ತಮ್ಮ ಹಿರಿಯ ವಿದ್ಯಾರ್ಥಿ ಬಳಗ ಕಟ್ಟಿಕೊಂಡು “ಸ್ನೇಹಜೀವಿ ಕಲಾತಂಡ”ವನ್ನು ಸ್ಥಾಪಿಸಿದ್ದಾರೆ.

vlcsnap 2018 08 07 08h25m07s64

ಪ್ರತಿ ತಿಂಗಳಿಗೊಮ್ಮೆ ಗ್ರಾಮದ ಅಭಿವೃದ್ಧಿ, ಸ್ವಚ್ಛತೆ, ಆರೋಗ್ಯ ಬಗ್ಗೆ ಜನಜಾಗ್ರತಿ ಮೂಡಿಸುವ ವಿಶೇಷ ಶಿಬಿರ ಹಮ್ಮಿಕೊಳ್ಳುವ ಮೂಲಕ ಏನನ್ನಾದರೂ ಸಾಧನೆ ಮಾಡಬೇಕೆಂಬ ಬಯಕೆ ಶಿಕ್ಷಕ ಶರಣಪ್ಪ ಹೆಬ್ಬಳ್ಳಿಯವರದ್ದಾಗಿದೆ. ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಯ ಚಹರೆಯನ್ನೇ ಬದಲಿಸಿದ್ದಾರೆ. ಶಾಲಾ ಸೌಂದರ್ಯಕ್ಕೆ ಸುಣ್ಣ, ಬಣ್ಣ, ಚಿತ್ರಕಲೆ, ನಕಾಶೆ, ಮಕ್ಕಳ ಶಿಕ್ಷಣಕ್ಕೆ ಬೇಕಾದ ವಸ್ತುಚಿತ್ರ, ಪ್ರಾಜೆಕ್ಟರ್ ಹೀಗೆ ಅನೇಕ ವಿಷಯಕ್ಕೆ ತಮ್ಮ ಸ್ವಂತ ಹಣ ಖರ್ಚುಮಾಡಿದ್ದಾರೆ. ಪ್ರಾಥಮಿಕ ಮಕ್ಕಳಿಗೆ ಪ್ರೊಜೆಕ್ಟರ್ ಮೂಲಕ ಶಿಕ್ಷಣ, ಕುಳಿತುಕೊಳ್ಳಲು ರೌಂಡ್ ಟೆಬಲ್ ಹಾಗೂ ಖುರ್ಚಿಗೆ ಸರ್ಕಾರ ಹಾಗೂ ಸ್ಥಳೀಯರ ಸಹಾಯ ಬಯಸದೇ ತಾವೇ ಖರ್ಚುಮಾಡ್ತಾರೆ.

vlcsnap 2018 08 07 08h24m50s151

ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ಓದುವ ಮಕ್ಕಳ ಮನೆಗೆ ನಿತ್ಯ ಭೇಟಿ ನೀಡಿ ವಿಚಾರಿಸಿ ಓದಿನ ಉಪಚಾರ ಮಾಡ್ತಾರೆ. ಸಾಯಂಕಾಲ 6 ರಿಂದ 9 ಗಂಟೆವರೆಗೆ ಟಿವಿ ಹಾಕದಂತೆ ಪಾಲಕರಿಗೆ ಸೂಚನೆ ನೀಡ್ತಾರೆ. ಇವರು ಪ್ರಾಥಮಿಕ ಶಾಲೆ ಶಿಕ್ಷಕರಾದ್ರೂ ಗ್ರಾಮದ ಹೈಸ್ಕೂಲ್ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಿಹಿ ಉಣಬಡಿಸುವ ಮಹಾನ್ ಮೆಸ್ಟ್ರು. ಇವರ ಈ ಕಾರ್ಯ ಇಡೀ ಗ್ರಾಮದ ಪ್ರತಿಯೊಬ್ಬರ ಮೆಚ್ಚುಗೆ ಹಾಗೂ ಅಭಿಮಾನಕ್ಕೂ ಕಾರಣವಾಗಿದೆ.

ಮಕ್ಕಳು ದೇವರ ಸಮಾನ, ಮಕ್ಕಳಿಂದ ಬರುವ ವೇತನದಲ್ಲೆ ಮಕ್ಕಳಿಗಾಗಿ ಖರ್ಚು ಮಾಡಿದರೆ ತಮಗೆ ಒಳಿತಾಗುತ್ತೆ ಅನ್ನೋ ನಂಬಿಕೆ ಶರಣಪ್ಪ ಅವರದ್ದಾಗಿದ್ದು, ಶಿಕ್ಷಕ ರಾಷ್ಟ್ರ ರಕ್ಷಕ ಅನ್ನೋ ಮಾತು ಶರಣಪ್ಪ ಗುರುಗಳಿಗೆ ಹೇಳಿ ಮಾಡಿಸಿವೆ. ಶರಣಪ್ಪ ಅವರ ಶಿಕ್ಷಣ ಕಾಳಜಿ ಇತರ ಶಿಕ್ಷಕರಿಗೆ ಮಾದರಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

https://www.youtube.com/watch?v=ff_hhrXot4o

Share This Article
Leave a Comment

Leave a Reply

Your email address will not be published. Required fields are marked *