ಕೊಪ್ಪಳ: ಪಂಪಾ ಸರೋವರವನ್ನು ಸಂಪೂರ್ಣ ಕಿತ್ತು ಹಾಕಿದ್ದು ಸರಿಯಲ್ಲ ಎಂದು ಇತಿಹಾಸ ತಜ್ಞ ಶರಣಬಸಪ್ಪ ಕೋಲ್ಕಾರ್ ವಿರೋಧ ವ್ಯಕ್ತಪಡಿಸಿದರು.
ಪಂಪಾಸರೋವರ ಮರು ನಿರ್ಮಾಣ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಪಾ ಕಿಷ್ಕಿಂದ ಪ್ರದೇಶದ ಸ್ಮಾರಕಗಳು ಪ್ರಾಚೀನತೆ ಇರುವುದರಿಂದ ಪ್ರವಾಸಿರನ್ನು ಸೆಳೆಯುತ್ತಿವೆ. ಇವುಗಳನ್ನು ನಾಶ ಮಾಡಿ ಆಧುನೀಕರಣ ಮಾಡುವುದು ಸರಿಯಲ್ಲ. ಇದರಿಂದ ಸ್ಮಾರಕದ ಸಾಂಸ್ಕೃತಿಕ ಮಹತ್ವ, ಚಾರಿತ್ರಿಕ ಮೌಲ್ಯ ಇಲ್ಲದಾಗುತ್ತದೆ. ಇವು ಯಾತ್ರಾತ್ರಿಗಳಿಗೆ ಆಕರ್ಷಣೆಯ ಸ್ಥಳ ಆಗಿ ಉಳಿಯುವುದಿಲ್ಲ. ಇದರಿಂದ ಇವುಗಳ ಮೂಲ ಸ್ವರೂಪ ಉಳಿಸಿಕೊಳ್ಳಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ
Advertisement
Advertisement
ಆನೆಗುಂದಿ ಪ್ರದೇಶದಲ್ಲಿ ಶೌಚಾಲಯ ಕಟ್ಟಲು ಸರ್ಕಾರ ಆಕ್ಷೇಪಿಸುತ್ತೆ. ಪಂಪಾ ಸರೋವರವನ್ನು ಸಂಪೂರ್ಣ ಕಿತ್ತು ಹಾಕಿದ್ದು ಸರಿಯಲ್ಲ. ಈ ಬಗ್ಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಏನು ವಿವರಣೆ ನೀಡತ್ತೆ ಕಾದು ನೋಡಬೇಕಿದೆ. ಅಭಿವೃದ್ಧಿ ಮಾಡಬೇಕಾದರೆ ಸಂಬಂಧಿಸಿದ ಮೂಲ ನಕ್ಷೆ ನೋಡಿ ಅಭಿವೃದ್ಧಿ ಮಾಡಬೇಕು. ತಮಗೆ ತಿಳಿದಂತೆ ನಾಶ ಮಾಡಿರೋದು ಆಕ್ಷೇಪಾರ್ಹ. ಸಿಮೆಂಟ್ ಹಾಕಿ ಕಟ್ಟುವುದು ಸಹಿಸುವದಿಲ್ಲ ಎಂದು ಕಿಡಿಕಾರಿದರು.
Advertisement
Advertisement
ಈ ರೀತಿ ಮಾಡುವುದು ಚರಿತ್ರೆಗೆ ಮಾಡಿದ ಅಪಚಾರ. ಈ ಎಲ್ಲ ಸ್ಮಾರಕ ಅಲ್ಲಿನ ಪರಿಸರಕ್ಕೆ ಪೂರಕವಾಗಿ ನಿರ್ಮಾಣ ಆಗಿದೆ. ತಿರುಪತಿಯ ಟಿಟಿಡಿ ಅವರು ಹನುಮಂತ ಹುಟ್ಟಿದ್ದು, ತಿರುಪತಿಯ ಅಂಜಾದ್ರಿಯಲ್ಲಿ ಅಂತಾ ಹೇಳಿದ್ದಾರೆ. ಈ ವೇಳೆ ಇಂಥ ಐತಿಹಾಸಿಕ ಸ್ಮಾರಕ ನಾಶ ಮಾಡಿದ್ದು, ಅನುಮಾನ ಹುಟ್ಟಿಸಿದೆ. ಕೂಡಲೇ ಇಲ್ಲಿ ನಡೆಯುತ್ತಿರುವ ಕೆಲಸ ನಿಲ್ಲಬೇಕು ಎಂದು ವಿರೋಧ ವ್ಯಕ್ತಪಡಿಸಿದರು.
ಇಲ್ಲಿ ಯುನೆಸ್ಕೋ ಮಾರ್ಗಸೂಚಿಯಂತೆ ಕೆಲಸ ನಡೆಯುತ್ತಿಲ್ಲ. ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಅಭಿವೃದ್ಧಿ ಮಾಡಿದ್ದು, ಖಂಡನಾರ್ಹವಾಗಿದೆ. ಸರ್ಕಾರ ಕೂಡಲೇ ತನಿಖೆ ಮಾಡಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.