Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶರಣಬಸಪ್ಪ ಅಪ್ಪ ಲಿಂಗೈಕ್ಯ – ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ನೇರವೇರಿದ ಅಂತ್ಯಸಂಸ್ಕಾರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಶರಣಬಸಪ್ಪ ಅಪ್ಪ ಲಿಂಗೈಕ್ಯ – ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ನೇರವೇರಿದ ಅಂತ್ಯಸಂಸ್ಕಾರ

Districts

ಶರಣಬಸಪ್ಪ ಅಪ್ಪ ಲಿಂಗೈಕ್ಯ – ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ನೇರವೇರಿದ ಅಂತ್ಯಸಂಸ್ಕಾರ

Public TV
Last updated: August 15, 2025 7:45 pm
Public TV
Share
3 Min Read
Sharanabasappa appa 2 1
SHARE

ಕಲಬುರಗಿ: ಇಲ್ಲಿನ ಮಹಾ ದಾಸೋಹಿ, ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾಗಿದ್ದ ಡಾ. ಶರಣಬಸಪ್ಪ ಅಪ್ಪ (Sharanabasappa Appa) ಅವರು ನಿನ್ನೆ ರಾತ್ರಿ ಲಿಂಗೈಕ್ಯರಾದರು. ಇಂದು ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ದೇವಸ್ಥಾನ ಮುಂಭಾಗದಲ್ಲಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯ್ತು.

ಇಂದು ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಡಾ. ಶ್ರೀ ಶರಣಬಸವಪ್ಪ ಅಪ್ಪ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದೆ. ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಎಲ್ಲರ ಹೃದಯ ಗೆದ್ದ ಅವರ ಜನಸೇವೆ ಅವಿಸ್ಮರಣೀಯ. ಅವರ ಅಗಲಿಕೆ ನಮ್ಮೆಲ್ಲರಿಗೂ ತುಂಬಲಾರದ ನಷ್ಟ.

ಅಪ್ಪನವರ ಆದರ್ಶ ಮತ್ತು ಪರಂಪರೆಯನ್ನು ಕಾಪಾಡುವುದು ನಮ್ಮೆಲ್ಲರ… pic.twitter.com/hKirghc2Zx

— DK Shivakumar (@DKShivakumar) August 15, 2025

ಅಂತ್ಯಸಂಸ್ಕಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಪಾಲ್ಗೊಂಡಿದ್ರು. ಅಂತ್ಯ ಸಂಸ್ಕಾರಕ್ಕೂ ಮುನ್ನ ಶರಣಬಸವೇಶ್ಚರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ – ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ, 5050 ವಿಭೂತಿ ಸಿದ್ಧತೆ

ಸಾಗರೋಪಾದಿಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಡಾ.ಶರಣಬಸಪ್ಪ ಅಪ್ಪ ಅವರ ಅಂತಿಮ ದರ್ಶನ ಪಡೆದ್ರು. ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರ ಸಚಿವರು, ಶಾಸಕರು ಹಾಗೂ ನೂರಾರು ಮಠಾಧೀಶರು, ಗಣ್ಯರು ಅಂತಿಮ ದರ್ಶನ ಪಡೆದ್ರು. ಇದನ್ನೂ ಓದಿ: ಮಹಾದಾಸೋಹಿ ಶರಣಬಸಪ್ಪ ಅಪ್ಪ ಅಂತಿಮ ದರ್ಶನ ಪಡೆದ ಡಿಕೆಶಿ

ಇನ್ನೂ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ಡಾ.ಶರಣಬಸಪ್ಪ ಅವರ ಪುತ್ರ ಚಿರಂಜೀವಿ ದೊಡಪ್ಪ ಅಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯ್ತು. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ; ಸಚಿವ ಶರಣಪ್ರಕಾಶ್ ಪಾಟೀಲ್ ಸಂತಾಪ

ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ
ಶರಣಬಸಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ರಾಂತಿಯ ಹರಿಕಾರ. ಶರಣರ ನಾಡು ಕಲಬುರಗಿಯ ಮಹಾದಾಸೋಹಿ, ಕಲಬುರಗಿ ಜನರ ಆರಾಧ್ಯ ದೈವ ಎಂದೇ ಖ್ಯಾತಿಯಾಗಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಡಿ ಕಳೆದ 4 ದಶಕಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ವಿದ್ಯಾಭ್ಯಾಸಕ್ಕೆ ಮಹತ್ವಕೊಟ್ಟಿದ್ದ ಅಪ್ಪ ಖುದ್ದು ಶರಣಬಸವೇಶ್ವರ ವಿಶ್ವವಿದ್ಯಾಲಯ ಆರಂಭಿಸಿ, ಆ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದರು.

1935ರ ನವೆಂಬರ್‌ 14ರಂದು ಜನಿಸಿದ ಡಾ.ಶರಣಬಸಪ್ಪ ಅಪ್ಪ, ಸಂಸ್ಥಾನದ 7ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಹಾಗೂ ಗೋದುತಾಯಿ ಅವರ ಪುತ್ರ. 1957ರ ಫೆಬ್ರವರಿ 17ರಂದು ಕೋಮಲಾದೇವಿ ಅವರೊಂದಿಗೆ ವಿವಾಹವಾದರು. 1983ರಲ್ಲಿ ಸಂಸ್ಥಾನದ 8ನೇ ಪೀಠಾಧಿಪತಿಯಾಗಿ ನೇಮಕವಾದರು. 1993ರ ಮಾರ್ಚ್‌ 23ರಂದು ಕೋಮಲಾದೇವಿ ಅನಾರೋಗ್ಯದಿಂದ ನಿಧನ ಹೊಂದಿದರು. ಅದಾದ ಬಳಿಕ ಅಪ್ಪ ಅವರು 1993ರ ನ.30ರಂದು ಡಾ.ದ್ರಾಕ್ಷಯಣಿ ಅವ್ವಾಜಿ ಅವರೊಂದಿಗೆ 2ನೇ ವಿವಾಹವಾದರು.

DK Shivakumar Sharanabasappa appa 

ಇದರ ಹೊರತಾಗಿ ಧಾರವಾಡ ಕರ್ನಾಟಕ ವಿವಿಯ ಎಮ್.ಎ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದ ಅಪ್ಪ ಅವರು ಧಾರವಾಡ ಕರ್ನಾಟಕ ವಿವಿಯ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. 1980ರಲ್ಲಿ ಗುಲಿ ವಿವಿಯ ಮೂಲಸೌಕರ್ಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ವಿವಿಗೆ ಭದ್ರ ಭೂನಾದಿ ಹಾಕಿಕೊಟ್ಟರು. 2003ರ ಏಪ್ರಿಲ್ 28ರಲ್ಲಿ ಸಂಸದ ಭವನದಲ್ಲಿ ಬಸವೇಶ್ವರ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. 2017ರಲ್ಲಿ ಕರ್ನಾಟಕ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆ ಅಡಿ ಶರಣಬಸವ ವಿಶ್ವವಿದ್ಯಾಲಯ ಆರಂಭಿಸಿದ್ದರು. ಸದ್ಯ ಅಪ್ಪಾಜಿ ನಿರ್ಮಿಸಿದಂತಹ ಶಿಕ್ಷಣ ಸಂಸ್ಥೆಗಳಲ್ಲಿ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ವಿದ್ಯಾಭ್ಯಾಸ ನಡೆಯುತ್ತಿದೆ. 1991ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

Sharanabasappa appa 1

ಪ್ರಶಸ್ತಿ, ಗೌರವಗಳು
* ಕರ್ನಾಟಕ ಸರ್ಕಾರದಿಂದ 1988ರಲ್ಲಿ ಕರ್ನಾಟಕ ರಾಜ್ಯೋ ಪ್ರಶಸ್ತಿ
* 1999ರಲ್ಲಿ ಗುಲಬರ್ಗಾ ವಿವಿ ಇಂದ ಗೌರವ ಡಾಕ್ಟರೇಟ್ ಪ್ರಧಾನ
* ಹಲವಾರು ವರ್ಷಗಳ ಕಾಲ ಧಾರವಾಡ ವಿವಿ ಸಿಂಡಿಕೇಟ್ ಸದಸ್ಯರಾಗಿ ಸೇವೆ
* ಲಲಿತ ಕಲಾ ಅಕಾಡೆಮಿ ವತಿಯಿಂದ ಕಲಾ ಪೋಷಿತ್ ಪ್ರಶಸ್ತಿ ಪ್ರಧಾನ

TAGGED:DK ShivakumarKalaburagiSharana BasappaTemplesharanabasappa appaಡಿಕೆ ಶಿವಕುಮಾರ್ಶರಣಬಸಪ್ಪ ಅಪ್ಪ
Share This Article
Facebook Whatsapp Whatsapp Telegram

Cinema news

Jayamala
ಫಿಲ್ಮ್ ಚೇಂಬರ್‌ ಚುನಾವಣೆ – ಅಧ್ಯಕ್ಷೆ ಪಟ್ಟಕ್ಕೇರಿದ ನಟಿ ಜಯಮಾಲಾ
Bengaluru City Cinema Latest Main Post Sandalwood
Aishwarya Rajesh
ತುಂಡು ಬಟ್ಟೆ ಕೊಟ್ಟು ನಿನ್ನ ಬಾಡಿ ನೋಡ್ಬೇಕು ಅಂದ್ರು – ಕಹಿ ಘಟನೆ ಬಿಚ್ಚಿಟ್ಟ ಐಶ್ವರ್ಯ ರಾಜೇಶ್
Cinema Latest South cinema Top Stories
Mohanlal CJ Roy 1
ಸಿಜೆ ರಾಯ್‌ ‘ಸ್ನೇಹಿತನಿಗೂ ಮಿಗಿಲು’ – ನಟ ಮೋಹನ್ ಲಾಲ್ ಭಾವನಾತ್ಮಕ ಪೋಸ್ಟ್‌
Bengaluru City Cinema Latest South cinema Top Stories
yash mother pushpa compound demolition 1
ನಟ ಯಶ್‌ ತಾಯಿ ಹಾಸನ ಸೈಟ್‌ ಜಟಾಪಟಿ – ಕಾಂಪೌಂಡ್‌ ಕೆಡವಿದ್ದ ಮಾಲೀಕನ ಜೊತೆ ವಾಗ್ವಾದ
Cinema Hassan Latest Main Post Sandalwood

You Might Also Like

Price Hike 3
Bengaluru City

ಬೇಸಿಗೆಗೂ ಮುನ್ನವೇ ಬೆಲೆ ಏರಿಕೆ ಹೊಡೆತ – ಅಕ್ಕಿ, ಬೇಳೆಕಾಳುಗಳ ಬೆಲೆ ಹೆಚ್ಚಳ!

Public TV
By Public TV
52 minutes ago
Team India 3
Cricket

ಸಿಡಿಲಬ್ಬರದ ಬ್ಯಾಟಿಂಗ್‌, ಬೆಂಕಿ ಬೌಲಿಂಗ್‌ – ರನ್‌ ಮಳೆಯಲ್ಲಿ ಗೆದ್ದ ಭಾರತ, 4-1 ರಲ್ಲಿ ಸರಣಿ ಜಯ

Public TV
By Public TV
2 hours ago
Inspector Govindaraju Lokayukta Trap
Bengaluru City

ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್ ಗೋವಿಂದರಾಜು – ವಿಚಾರಣೆಯಲ್ಲಿ ಮತ್ತಷ್ಟು ವಿಚಾರ ಬೆಳಕಿಗೆ

Public TV
By Public TV
2 hours ago
Suryakumar Yadav and Ishan Kishan
Cricket

ಸಿಕ್ಸರ್‌, ಬೌಂಡರಿಯಿಂದಲೇ 84 ರನ್‌ – ಇಶಾನ್‌ ಕಿಶನ್‌ ಸಿಡಿಲಬ್ಬರದ ಶತಕ, ಕಿವೀಸ್‌ ಕಂಗಾಲು

Public TV
By Public TV
2 hours ago
Nikhil Kumaraswamy
Districts

ನಾನು ಯಾವ ಕ್ಷೇತ್ರದಲ್ಲಿ ನಿಲ್ಲಬೇಕು, ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ: ನಿಖಿಲ್

Public TV
By Public TV
2 hours ago
Epstein files
Latest

ಅಮೆರಿಕದ ಎಪ್‌ಸ್ಟೀನ್ ಲೈಂಗಿಕ ಕೇಸ್‌ನ ಮತ್ತೊಂದು ಫೈಲ್ ರಿಲೀಸ್; ಟ್ರಂಪ್ ಹೆಸರು, ಮೋದಿ ಇಸ್ರೇಲ್ ಭೇಟಿಯ ಉಲ್ಲೇಖ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?