ಬೆಂಗಳೂರು: ಅಧ್ಯಕ್ಷ ಎಂಬ ಚಿತ್ರದ ಮೂಲಕವೇ ನಾಯಕನಾಗಿ ದೊಡ್ಡ ಮಟ್ಟದ ಗೆಲುವು ಗಿಟ್ಟಿಸಿಕೊಂಡಿರುವವರು ಶರಣ್. ಈ ಶೀರ್ಷಿಕೆ ಅವರ ಪಾಲಿಗೆ ಲಕ್ಕಿ ಎಂಬ ನಂಬಿಕೆಯೂ ಇದೆ. ಅದೇ ನಂಬಿಕೆಯೊಂದಿಗೇ ಅವರ ಹೊಸಾ ಚಿತ್ರಕ್ಕೆ ಅಮೆರಿಕಾ ಇನ್ ಅಧ್ಯಕ್ಷ ಎಂಬ ನಾಮಕರಣವನ್ನೂ ಮಾಡಿ ಅದು ಈ ವಾರ ಅದ್ದೂರಿಯಾಗಿ ತೆರೆಗಾಣಲು ರೆಡಿಯಾಗಿದೆ. ಖುದ್ದು ಶರಣ್ ಅವರೇ ಭಾರೀ ಭರವಸೆ ಹೊಂದಿರೋ ಈ ಸಿನಿಮಾ ಮೇಲೆ ಪ್ರೇಕ್ಷಕರಲ್ಲಿಯೂ ಅಂಥಾದ್ದೇ ಭಾವನೆ ಇದೆ. ಆದ್ದರಿಂದಲೇ ಅಮೆರಿಕ ಸೇರಿಕೊಂಡ ಅಧ್ಯಕ್ಷನನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.
Advertisement
ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯ ಮೂಲಕ ಟಿಜಿ ವಿಶ್ವಪ್ರಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯೋಗಾನಂದ ನಿರ್ದೇಶನದ ಮೊದಲ ಚಿತ್ರವಾಗಿಯೂ ಅಧ್ಯಕ್ಷ ಇನ್ ಅಮೆರಿಕಾ ಮೂಡಿ ಬಂದಿದೆ. ಹಲವಾರು ವರ್ಷಗಳ ಕಾಲ ಕಿರುತೆರೆ ಲೋಕದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾ, ಸಿನಿಮಾ ಬಗ್ಗೆ ಕನಸಿಟ್ಟುಕೊಂಡಿದ್ದ ಯೋಗಾನಂದ್ ಪಾಲಿಗೆ ಶರಣ್ ಅವರಿಗಾಗಿ ಸಿನಿಮಾ ಮಾಡಬೇಕೆಂಬುದು ಹಲವಾರು ವರ್ಷಗಳ ಕನಸಾಗಿತ್ತಂತೆ. ಆ ಅವಕಾಶ ಈ ಸಿನಿಮಾ ಮೂಲಕ ಅವರ ಪಾಲಿಗೆ ತಾನೇ ತಾನಾಗಿ ಕೂಡಿ ಬಂದಿದೆ.
Advertisement
Advertisement
ಇದು ಮೇಲುನೋಟಕ್ಕೆ ರೀಮೇಕ್‍ನಂತೆ ಕಂಡರೂ ನಿರ್ದೇಶಕರು ಇದನ್ನು ಸಂಪೂರ್ಣವಾಗಿಯೇ ಇಲ್ಲಿನ ನೇಟಿವಿಟಿಗೆ ಒಗ್ಗಿಸಿಕೊಂಡು ರೂಪಿಸಿದ್ದಾರಂತೆ. ಮಜವಾದ ಕಥೆ ಹೊಂದಿರೋ ಅಧ್ಯಕ್ಷನ ವೃತ್ತಾಂತಕ್ಕೂ ಮೈಸೂರು ಸೀಮೆಯ ಹಳ್ಳಿಗೂ ನೇರಾನೇರ ಸಂಬಂಧಗಳಿವೆಯಂತೆ. ಆದರೆ ಈ ಬಗ್ಗೆ ಹೆಚ್ಚಿನ ಯಾವ ಮಾಹಿತಿಯನ್ನೂ ಕೂಡಾ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಆದರೆ, ಈವರೆಗೆ ಸದರಿ ಸಿನಿಮಾ ಬಗ್ಗೆ ಯಾವ ಥರದ ನಿರೀಕ್ಷೆಗಳು ಮೂಡಿಕೊಂಡಿವೆಯೋ, ಅದೆಲ್ಲವನ್ನು ಮೀರಿಸುವಂಥಾ ಸೊಗಸಿನೊಂದಿಗೆ ಇಡೀ ಚಿತ್ರ ಮೂಡಿ ಬಂದಿದೆ ಅನ್ನೋ ಭರವಸೆ ಚಿತ್ರತಂಡದಲ್ಲಿದೆ.