Connect with us

Cinema

ಅಧ್ಯಕ್ಷ ಇನ್ ಅಮೆರಿಕಾ: ಗೆದ್ದು ಬೀಗಿತು ಶರಣ್-ರಾಗಿಣಿ ಜೋಡಿ!

Published

on

ಬೆಂಗಳೂರು: ಶರಣ್ ವರ್ಷಾಂತರಗಳ ಹಿಂದೆ ಅಧ್ಯಕ್ಷ ಎಂಬ ಚಿತ್ರದಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿಯೇ ಗೆದ್ದಿದ್ದರು. ಅವರು ಅಧ್ಯಕ್ಷ ಇನ್ ಅಮೆರಿಕಾ ಚಿತ್ರದಲ್ಲಿ ನಟಿಸೋ ಸುದ್ದಿ ಬಂದಾಗ ಪ್ರೇಕ್ಷಕರಿಗೆಲ್ಲ ನೆನಪಾಗಿದ್ದದ್ದು ಅಧ್ಯಕ್ಷನ ಗೆಲುವಿನ ಫ್ಲೇವರ್. ಈ ಸಿನಿಮಾ ಕೂಡಾ ಅಂಥಾದ್ದೇ ಗೆಲುವು ದಾಖಲಿಸುತ್ತೆ ಎಂಬ ನಂಬಿಕೆಯ ಹಿಮ್ಮೇಳದಲ್ಲಿಯೇ ಅಧ್ಯಕ್ಷ ಇನ್ ಅಮೆರಿಕಾ ತೆರೆ ಕಂಡಿತ್ತು. ಮೊದಲ ದಿನದಿಂದಲೇ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಈ ಸಿನಿಮಾ ಇದೀಗ ದಸರೆಯ ಸಂಭ್ರಮದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಶರಣ್ ಮತ್ತು ರಾಗಿಣಿ ಜೋಡಿಯೂ ಮೋಡಿ ಮಾಡಿದೆ.

ಇದು ಯೋಗಾನಂದ್ ಮುದ್ದಾನ್ ನಿರ್ದೇಶನ ಮಾಡಿರೋ ಚೊಚ್ಚಲ ಚಿತ್ರ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಸಿನಿಮಾ ಭರಪೂರ ಕ್ರೇಜ್ ಹುಟ್ಟು ಹಾಕಿತ್ತು. ಇದರ ಪ್ರಧಾನ ಆಕರ್ಷಣೆಯಾಗಿದ್ದದ್ದು ಶರಣ್ ಮತ್ತು ರಾಗಿಣಿ ಜೋಡಿ. ಮೊದಲ ಸಲ ರಾಗಿಣಿ ಶರಣ್ ಜೋಡಿಯಾಗಿ ನಟಿಸಿದ್ದಾರೆ. ಇದರಲ್ಲಿ ರಾಗಿಣಿ ಈ ಹಿಂದೆಂದೂ ಕಾಣಿಸಿಕೊಳ್ಳದಿರೋ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಗಿಣಿ ಈವರೆಗೂ ಬಬ್ಲಿ ಹುಡುಗಿಯ ಪಾತ್ರ ಮಾತ್ರವಲ್ಲದೇ ಮಾಸ್ ಅವತಾರದಲ್ಲಿಯೂ ಮಿಂಚಿದ್ದಾರೆ. ಅವರು ಈ ಚಿತ್ರದಲ್ಲಿ ಕಾಮಿಡಿಯನ್ನೂ ಮಾಡಿದ್ದಾರೆ. ಈ ಕಾರಣದಿಂದಲೇ ರಾಗಿಣಿ ಮತ್ತು ಶರಣ್ ಜೋಡಿ ಪ್ರೇಕ್ಷಕರ ಮನಗೆದ್ದಿದೆ.

ನಿರ್ದೇಶಕ ಯೋಗಾನಂದ್ ಮುದ್ದಾನ್ ಅವರ ಮೊದಲ ಪ್ರಯತ್ನವಾದ ಅಧ್ಯಕ್ಷ ಇನ್ ಅಮೆರಿಕಾ ಇದೀಗ ಎಲ್ಲ ಸೆಂಟರುಗಳಲ್ಲಿಯೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾಮಾನ್ಯವಾಗಿ ದಸರೆ ಸೇರಿದಂತೆ ಯಾವ ರಜೆಗಳು ಬಂದಾಗಲೂ ಜನ ಕುಟುಂಬ ಸಮೇತರಾಗಿ ಹೋಗಿ ನೋಡುವಂಥಾ ಚೆಂದದ ಚಿತ್ರಕ್ಕಾಗಿ ಹುಡುಕಾಡುತ್ತಾರೆ. ಆದರೆ ಈ ಬಾರಿ ಹುಡುಕೋ ಗೋಜೇ ಇಲ್ಲದಂತೆ ದಸರೆಗೆ ಗಿಫ್ಟ್ ಎಂಬಂತೆ ಅಧ್ಯಕ್ಷ ಇನ್ ಅಮೆರಿಕಾ ಚಿತ್ರ ತೆರೆಕಂಡಿತ್ತು. ರಜೆಯ ಸಂದರ್ಭದಲ್ಲಿ ಹೆಚ್ಚೆಚ್ಚು ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರದತ್ತ ಧಾವಿಸಿದ್ದರಿಂದಾಗಿ ಈ ಸಿನಿಮಾ ಕಲೆಕ್ಷನ್ನಿನಲ್ಲಿಯೂ ಮಿರುಗುವಂತಾಗಿದೆ. ಈ ಮೂಲಕ ಚಿತ್ರತಂಡದ ಪರಿಶ್ರಮಕ್ಕೂ ಗೆಲುವು ಸಿಕ್ಕಿದೆ.

Click to comment

Leave a Reply

Your email address will not be published. Required fields are marked *