ನವದೆಹಲಿ: ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಅವರು ತಮ್ಮ ಪಕ್ಷ ಲೋಕತಾಂತ್ರಿಕ್ ಜನತಾ ದಳವನ್ನು (ಎಲ್‍ಜೆಡಿ) ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದೊಂದಿಗೆ ವಿಲೀನಗೊಳಿಸಿದ್ದಾರೆ.
ಶರದ್ ಯಾದವ್ ಅವರ ದೆಹಲಿಯ ನಿವಾಸದಲ್ಲಿ ಪಕ್ಷಗಳ ವಿಲೀನದ ಬಗ್ಗೆ ಭಾನುವಾರ ಘೋಷಿಸಿದ್ದಾರೆ.
Advertisement
Advertisement
ಲಾಲು ಪ್ರಸಾದ್ ಯಾದವ್ ಹಾಗೂ ಶರದ್ ಯಾದವ್ ಬಿಜೆಪಿಯನ್ನು ಮಣಿಸಲು 25 ವರ್ಷಗಳ ನಂತರ ಒಂದಾಗಿದ್ದಾರೆ. 1997ರಲ್ಲಿ ಬೇರೆಯಾಗಿದ್ದರು. ಇದಾದ ನಂತರ 2018ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಶರದ್ ಯಾದವ್, ನಂತರ ಎಲ್‍ಜೆಡಿ ರಚಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಎಲ್‍ಜೆಡಿಯಿಂದ ಮಾಧೇಪುರ ಕ್ಷೇತ್ರದಲ್ಲಿ ಪ್ರತಿನಿಧಿಸಿದ್ದರು. ಇದೀಗ ಮತ್ತೆ ರಾಷ್ಟ್ರೀಯ ಜನತಾ ದಳದೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದ್ದಾರೆ. ಇದನ್ನೂ ಓದಿ: ಭಿಕ್ಷುಕನ ಜೊತೆ ಪತ್ನಿ ರೋಮ್ಯಾನ್ಸ್ ನೋಡಿ ಬೆಚ್ಚಿಬಿದ್ದ ಪತಿ
Advertisement
Advertisement
ಈ ಕುರಿತು ಮಾತನಾಡಿರುವ ಶರದ್ ಯಾದವ್, ನಮ್ಮ ಪಕ್ಷವನ್ನು ವಿಲೀನಗೊಳಿಸಿರುವುದು ಪ್ರತಿಪಕ್ಷಗಳು ಒಗ್ಗಟ್ಟಾಗುವುದರ ಮೊದಲ ಹಂತ. ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಭಾರತದಾದ್ಯಂತ ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಾಗಬೇಕಿದೆ. ಸದ್ಯಕ್ಕೆ ಇದು ನಮ್ಮ ಆದ್ಯತೆಯಾಗಿದೆ. ಆಮೇಲೆ ಪ್ರತಿಪಕ್ಷಗಳ ಮೈತ್ರಿಕೂಟವನ್ನು ಯಾರು ಮುನ್ನಡೆಸಬಹುದು ಎಂಬ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದಾರೆ.