ನವದೆಹಲಿ: ಬಿಹಾರದಲ್ಲಿ ಬಿಜೆಪಿಯೊಂದಿಗೆ ಮೃತ್ರಿ ಮಾಡಿಕೊಳ್ಳುವ ಪಕ್ಷದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಶರದ್ ಯಾದವ್‍ರನ್ನು ಜೆಡಿಯು ರಾಜಸಭ್ಯಾ ನಾಯಕ ಸ್ಥಾನದಿಂದ ವಜಾ ಮಾಡಿ, ಅವರ ಸ್ಥಾನಕ್ಕೆ ಪಕ್ಷದ ಹಿರಿಯ ಮುಖಂಡ ಆರ್‍ಸಿಪಿ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.
Advertisement
ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರನ್ನ ಸಂಸದರು ಭೇಟಿ ಮಾಡಿ ಮೇಲ್ಮನೆಯಲ್ಲಿ ಜೆಡಿಯು ನಾಯಕರಾಗಿ ಸಿಂಗ್ ಅವರನ್ನ ನೇಮಿಸಿರುವ ಬಗ್ಗೆ ಪತ್ರ ನೀಡಿದ್ದಾರೆ. ಆರ್‍ಸಿಪಿ ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಂಬಿಕಸ್ಥ ನಾಯಕರಾಗಿದ್ದಾರೆ.
Advertisement
ರಾಜ್ಯಸಭೆಯಲ್ಲಿ ಜಡಿಯು 10 ಸದಸ್ಯರನ್ನ ಹೊಂದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿದ್ದ ವಿರೋಧ ಪಕ್ಷದ ಸಭೆಯಲ್ಲಿ ಭಾಗವಹಿಸಿದ ಕಾರಣ ಕಳೆದ ರಾತ್ರಿ ಪಕ್ಷದ ರಾಜ್ಯಸಭಾ ಸದಸ್ಯ ಅನಿಲ್ ಅನ್ವರ್ ಅನ್ಸಾರಿ ಅವರನ್ನ ಅಮಾನತು ಮಾಡಲಾಗಿತ್ತು.
Advertisement
ಬಿಜಾರದಲ್ಲಿ ಕಳೆದ ತಿಂಗಳು ನಿತೀಶ್ ಕುಮಾರ್ ಸರ್ಕಾರ ರಚಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಶರದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರ ನಡುವೆ ಅಂತರ ಶುರುವಾಗಿತ್ತು.
Advertisement
ಸದ್ಯ ಬಿಹಾರ ಪ್ರವಾಸದಲ್ಲಿರುವ ಶರದ್ ಯಾದವ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನು ಇನ್ನೂ ಆರ್‍ಜೆಡಿ ಹಾಗೂ ಕಾಂಗ್ರೆಸ್ ಮಹಾಮೃತ್ರಿಯ ಭಾಗವಾಗಿದ್ದೇನೆ ಎಂದು ನಂಬಿದ್ದೇನೆ. ಜೆಡಿಯು ಕೇವಲ ನಿತೀಶ್ ಕುಮಾರ್ ಪಕ್ಷವಲ್ಲ. ನನ್ನ ಪಕ್ಷವೂ ಹೌದು ಎಂದಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿತೀಶ್ ಕುಮಾರ್ ಅವರನ್ನ ಎನ್‍ಡಿಎಗೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
कल JD(U) के राष्ट्रीय अध्यक्ष श्री @NitishKumar जी से अपने निवास पर भेंट हुई। मैंने उन्हें JD(U) को NDA में शामिल होने के लिए आमंत्रित किया।
— Amit Shah (@AmitShah) August 12, 2017
आज मैंने बिहार के मुख्यमंत्री श्री @NitishKumar जी को अपने आवास पर जलपान के लिए आमंत्रित किया है।
— Amit Shah (@AmitShah) August 11, 2017
Met Chief Minister of Bihar Shri @NitishKumar. pic.twitter.com/gUnIRzSxf4
— Amit Shah (@AmitShah) August 11, 2017