ನವದೆಹಲಿ: ಮಹಾರಾಷ್ಟ್ರದ ರಾಜಕಾರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಮಹಾರಾಷ್ಟ್ರದ ಬಹುತೇಕ ರಾಜಕೀಯ ಮುಖಂಡರು ದೆಹಲಿ ತಲುಪಿದ್ದು, ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ದೆಹಲಿಗೆ ತೆರಳಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಹಂಗಾಮಿ ಸಿಎಂ ದೇವೇಂದ್ರ ಫಡ್ನವೀಸ್ ಸಹ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಫಲಿತಾಂಶ ಬಂದು 10 ದಿನವಾದರೂ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಗೆ ಹಿಂದೇಟು ಹಾಕುತ್ತಿವೆ. ಶಿವಸೇನೆ ಸಿಎಂ ಪದವಿಗಾಗಿ ಪಟ್ಟು ಹಿಡಿದಿದ್ದು, ಇತ್ತ ಬಿಜೆಪಿ ತನ್ನ ಬಿಗುವನ್ನು ಸಡಿಲಗೊಳಿಸುತ್ತಿಲ್ಲ.
Advertisement
Delhi: Chief Minister of Maharashtra Devendra Fadnavis met Union Home Minister Amit Shah. https://t.co/Z3LWzhNFqK pic.twitter.com/3iK3HuA4oF
— ANI (@ANI) November 4, 2019
Advertisement
ಶಿವಸೇನೆ ಬಿಜೆಪಿಯೇತರ ಸರ್ಕಾರ ರಚನೆಯತ್ತ ಮುಖ ಮಾಡುತ್ತಿದ್ದು, ಎನ್‌ಸಿಪಿ ಮತ್ತು ಕಾಂಗ್ರೆಸ್ ಕಡೆ ಒಲವು ತೋರಿಸುತ್ತಿದೆ. ನಾವು ವಿರೋಧ ಪಕ್ಷದಲ್ಲಿಯೇ ಕುಳಿತುಕೊಳ್ಳುತ್ತೇವೆ ಎಂದು ಎನ್‌ಸಿಪಿ ಸ್ಪಷ್ಟಪಡಿಸಿದೆ. ಶಿವಸೇನೆ ಮಾತ್ರ ನಮಗೆ 170 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡು, ಎನ್‌ಸಿಪಿ ಶಾಸಕರನ್ನು ಸಂಪರ್ಕಿಸುವ ಪ್ರಯತ್ನಕ್ಕೆ ತೆರೆಮರೆಯನ್ನು ಪ್ರಯತ್ನಿಸಿದೆ ಎಂದು ವರದಿಯಾಗಿದೆ.
Advertisement