ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಬಿಜೆಪಿ ಬೆಂಬಲಿಸಿದ ಬಳಿಕ ಎನ್‍ಸಿಪಿ (NCP) ವರಿಷ್ಠ ಶರದ್ ಪವಾರ್ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕೈಕುಲುಕಿದ್ದಾರೆ. ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಉಭಯ ನಾಯಕರು ಕೈ ಜೋಡಿಸಿರುವುದು ಹಲವು ಊಹಾಪೂಹಗಳಿಗೆ ಕಾರಣವಾಗಿದೆ.
Prime Minister Narendra Modi tweets, "Humbled to receive the Lokmanya Tilak National Award in Pune." pic.twitter.com/ArdRdL0Jom
— ANI (@ANI) August 1, 2023
ಹೌದು. ಉಗ್ರ ರಾಜಕೀಯ ಎದುರಾಳಿಗಳಾದ ಪ್ರಧಾನಿ ನರೇಂದ್ರ ಮೋದಿ (Narendra Modi), ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಪರಸ್ಪರ ಕೈ ಕುಲುಕಿ ಮುಗುಳು ನಗೆ ನಕ್ಕಿದ್ದಾರೆ. ಇದರ ವೀಡಿಯೋ ಈಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಶರದ್ ವಿಪಕ್ಷಗಳ ಜೊತೆಗೂಡಿ ಮೋದಿ ಸೋಲಿಗೆ ಹಗಲಿರುಳ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಅಜಿತ್ ಪವಾರ್ ದೊಡ್ಡ ಶಾಸಕರ ಬಳಗದೊಂದಿಗೆ ಎನ್‍ಸಿಪಿ ಬಿಟ್ಟು ಬಿಜೆಪಿ ಸೇರಿದ ಬಳಿಕವಂತೂ ಶರದ್ ಪವಾರ್, ಮೋದಿ ವಿರುದ್ಧ ಕೆಂಡಕಾರುತ್ತಿದ್ದಾರೆ. ಇಂತಹ ಬೆಳವಣಿಗೆ ನಡುವೆ ಶರದ್ ಪವಾರ್ ಮೋದಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಪ್ರಧಾನಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಅವಾರ್ಡ್ – ಪ್ರಶಸ್ತಿ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಿದ ಮೋದಿ
ಅಂದಹಾಗೇ ಈ ಇಬ್ಬರು ನಾಯಕರು ಒಂದುಗೂಡಲು ಕಾರಣ ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ. ಈ ಸ್ಮಾರಕದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಘೋಷಿಸಿಲಾಗಿತ್ತು. ಅದರ ಪ್ರದಾನ ಕಾರ್ಯಕ್ರಮ ಇಂದು ಪುಣೆಯ ಎಸ್ ಪಿ ಕಾಲೇಜು ಮೈದಾನದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಆಹ್ವಾನಿಸಲಾಗಿತ್ತು. ಮೋದಿ ಕಾರ್ಯಕ್ರವಾಗಿದ್ದ ಹಿನ್ನೆಲೆ ಶರದ್ ಪವಾರ್ ಉಪಸ್ಥಿತಿ ಕುತೂಹಲ ಮೂಡಿಸಿತ್ತು.
ಅಚ್ಚರಿ ಎನ್ನುವಂತೆ ಮುಖ್ಯ ಅತಿಥಿಯಾಗಿ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಕಾರ್ಯಕ್ರಮದಲ್ಲಿ ಭಾಗಿಯಾದರು. ವೇದಿಕೆ ಮೇಲೆ ಶರದ್ ಪವಾರ್ ಮತ್ತು ಪ್ರಧಾನಿ ಮೋದಿಯವರು ಭೇಟಿಯಾದಾಗ ಪರಿಸ್ಪರ ಕೈಕುಲುಕಿದರು. ವೇದಿಕೆಯ ಒಂದೇ ಬದಿಯಲ್ಲಿ ಕುಳಿತು ಅಚ್ಚರಿ ಮೂಡಿಸಿದರು.
Web Stories