ಚಂದ್ರಿಕಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಉತ್ತರ ಪ್ರದೇಶದ ಬೆಡಗಿ ಶಾನ್ವಿ ಶ್ರೀವಾತ್ಸವ್, ಆನಂತರ ಅವರು ಕನ್ನಡಿಗರಾಗಿಯೇ ಬೆಳೆದರು. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರು. ಕನ್ನಡ ಕಲಿತು, ಇಲ್ಲಿಯೇ ನೆಲೆಯೂರಿದರು. ಇಂತಹ ನಟಿ ಇದೀಗ ಬಹುಕೋಟಿ ಬಜೆಟ್ ನ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ‘ಮಹಾವೀರ್ಯರ್’ ಹೆಸರಿನಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ನಿವಿನ್ ಪೌಲಿ ಮತ್ತು ಆಸಿಫ್ ಅಲಿ ನಾಯಕರು ಎನ್ನುವುದು ವಿಶೇಷ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ
Advertisement
ನಿವಿನ್ ಅವರು ಹೋಂ ಬ್ಯಾನರ್ ನಲ್ಲಿಯೇ ಈ ಚಿತ್ರ ತಯಾರಾಗಿದ್ದು, ಫ್ಯಾಂಟಸಿ ಕಥೆ ಹಂದಾರ ಹೊಂದಿದೆ. ಈ ಸಿನಿಮಾದಲ್ಲಿ ಶಾನ್ವಿ ವಿಭಿನ್ನ ರೀತಿಯ ಪಾತ್ರ ಮಾಡಿದ್ದಾರಂತೆ. ಕಾನೂನು, ಕಟ್ಟಳೆಯ ಅನೇಕ ದೃಶ್ಯಗಳು ಈ ಸಿನಿಮಾದಲ್ಲಿ ಇರುವುದರಿಂದ, ಈ ಸಿನಿಮಾ ಮನರಂಜನೆಯ ಜತೆಗೆ ಒಂದೊಳ್ಳೆ ಸಂದೇಶವನ್ನು ಈ ಸಮಾಜಕ್ಕೆ ನೀಡಲಿದೆ ಎಂದಿದ್ದಾರೆ. ಇದನ್ನೂ ಓದಿ: RK ಹೌಸ್ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ
Advertisement
Advertisement
ಅಬ್ರಿದ್ ಶೈನ್ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ ನಿವಿನ್ ಜತೆ ಆಕ್ಷನ್ ಹೀರೋ ಬಿಜು ಮತ್ತು 1983 ರಂತಹ ಚಿತ್ರಗಳನ್ನು ಮಾಡಿದ್ದಾರೆ. ಹತ್ತು ವರ್ಷಗಳ ನಂತರ ಶೈನ್ ಮತ್ತು ನಿವಿನ್ ಮತ್ತೆ ಜತೆಯಾಗಿ ಮಾಡಿರುವಂತಹ ಸಿನಿಮಾ ಇದಾಗಿದೆ. ಹಾಗಾಗಿ ಸಾಕಷ್ಟು ನಿರೀಕ್ಷೆಯಂತೂ ಮೂಡಿಸಿದೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್
Advertisement
ಕೊರೋನಾ ಹಾವಳಿಯ ಮಧ್ಯೆಯೂ ಈ ಸಿನಿಮಾದ ಕೆಲಸಗಳು ನಡೆದಿವೆ. ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದರಿಂದ ಶೂಟಿಂಗ್ ಮಾಡುವುದು ಅನಿವಾರ್ಯವಾಗಿತ್ತು. ಹಾಗಾಗಿ ಸಾಕಷ್ಟು ರಿಸ್ಕ್ ತಗೆದುಕೊಂಡು ಈ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು. ಹೆಸರಾಂತ ತಾರಾ ಬಳಗವೇ ಈ ಸಿನಿಮಾದಲ್ಲಿದ್ದು, ಸಿದ್ದೀಕಿ, ವಿಜಯ್ ಮೆನನ್, ಮಲ್ಲಿಕಾ ಸುಕಮಾರನ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.