ಕನ್ನಡದ ‘ಮಾಸ್ಟರ್ ಪೀಸ್’ ನಟಿ ಶಾನ್ವಿ (Shanvi Srivastava) ಬಿಕಿನಿ ಫೋಟೋ ಹಂಚಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಬಿಕಿನಿ (Bikini) ಧರಿಸಿ ನಟಿ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಮಾಲ್ಡೀವ್ಸ್‌ಗೆ ಶಾನ್ವಿ ಹಾರಿದ್ದಾರೆ. ವೈಟ್ ಕಲರ್ ಬಿಕಿನಿ ಧರಿಸಿ ನಟಿ ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ:ಗಾಯಕಿ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಜಯಂ ರವಿ?- ಸ್ಪಷ್ಟನೆ ನೀಡಿದ ನಟ
ಸದಾ ಸಿನಿಮಾ ಶೂಟಿಂಗ್ ಅಂತ ಬ್ಯುಸಿಯಿರುವ ‘ಮಾಸ್ಟರ್ ಪೀಸ್’ ನಟಿ ಬಿಡುವು ಸಿಕ್ಕಾಗಲೆಲ್ಲಾ ವೆಕೇಷನ್‌ಗೆ ತೆರಳುತ್ತಾರೆ. ಸದ್ಯ ಫ್ರೆಂಡ್ಸ್ ಜೊತೆ ಮಾಲ್ಡೀವ್ಸ್ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.
ಇನ್ನೂ ವಾರಣಾಸಿಯಲ್ಲಿ ಹುಟ್ಟಿ ಮುಂಬೈನಲ್ಲಿ ಬೆಳೆದಿರುವ ಶಾನ್ವಿಗೆ ಕನ್ನಡ ಭಾಷೆಯ ಮೇಲೆ ಗೌರವವಿದೆ. ಕನ್ನಡ ಸಿನಿಮಾ ಮಾಡುವುದರ ಜೊತೆಗೆ ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ. ಕನ್ನಡ, ತೆಲುಗು, ಮಲಯಾಳಂ, ಮರಾಠಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡದ ಮಾಸ್ಟರ್ ಪೀಸ್, ಚಂದ್ರಲೇಖ, ಮಫ್ತಿ, ಬ್ಯಾಂಗ್, ಸಾಹೇಬ, ತಾರಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕ ಅಮೆರಿಕ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.