ಭುವನ್ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ (Kodlu Ramakrishna) ‘ಶಾನುಭೋಗರ ಮಗಳು’ (Shanubhogara Magalu ) ಚಿತ್ರವು ಸ್ವತಂತ್ರ ಪೂರ್ವ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಭಾಗ್ಯ ಕೆ ಮೂರ್ತಿ ಅವರು ಕೃತಿಯನ್ನು ಬರೆದಿದ್ದಾರೆ.
ಚಿತ್ರದಲ್ಲಿ ಬ್ರಿಟಿಷರು, ಟಿಪ್ಪು ಸುಲ್ತಾನ್ ಹಾಗೂ ಮೈಸೂರಿನ ಮಹಾರಾಜರುಗಳೊಂದಿಗಿನ ಸನ್ನಿವೇಶಗಳು ಹೆಚ್ಚಿವೆ. ಶಾನುಭೋಗರ ಮಗಳ ಪಾತ್ರ ನಿರ್ವಹಿಸುತ್ತಿರುವ ರಾಗಿಣಿ ಪ್ರಜ್ವಲ್ (Ragini Prajwal) ನಾಲ್ಕಾರು ಬ್ರಿಟಿಷರನ್ನು ಗುಂಡಿಟ್ಟು ಸಾಯಿಸುವ ದೃಶ್ಯವನ್ನು ಇತ್ತೀಚೆಗೆ ಶ್ರೀರಂಗಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟದ ಸುತ್ತಮುತ್ತ ಚಿತ್ರೀಕರಿಸಲಾಯಿತು.
ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಕಿಶೋರ್ (Kishor) ಅಭಿನಯಿಸುತ್ತಿದ್ದು, ರಮೇಶ್ ಭಟ್, ಸುಧಾ ಬೆಳವಾಡಿ, ಪದ್ಮಾ ವಾಸಂತಿ, ವಾಣಿಶ್ರೀ, ಭಾಗ್ಯಶ್ರೀ, ಕುಮಾರಿ ಅನನ್ಯ, ಟಿ.ಎನ್. ಶ್ರೀನಿವಾಸ ಮೂರ್ತಿ, ನಿರಂಜನ ಶೆಟ್ಟಿ ಪ್ರಧಾನ ಪಾತ್ರದಲ್ಲಿದ್ದಾರೆ. ಇದನ್ನೂ ಓದಿ:ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಜೊತೆ ಕನ್ನಡಿಗ ಡ್ಯಾನಿಶ್ ನಟನೆ
ಸಂಗೀತ ನಿರ್ದೇಶನ ಶಮಿತಾ ಮಲ್ನಾಡ್, ಚಿತ್ರಕತೆ-ಸಂಭಾಷಣೆ ಬಿ.ಎ. ಮಧು, ಛಾಯಾಗ್ರಹಣ ಜೈ ಆನಂದ್, ಸಂಕಲನ ಕೆಂಪರಾಜ್, ನಿರ್ಮಾಣ ನಿರ್ವಹಣೆ ಕರುಣ್ ಮಯೂರ್, ಸಹ ನಿರ್ದೇಶನ ರಘು ಕುಮಾರ್, ನಾಗರಾಜ ರಾವ್ ಹಾಸನ್ ಹಾಗೂ ಸುನೀಲ್ ಅವರದು.
Web Stories