ಲಕ್ನೋ: ಶಂಖ್ ಏರ್ ಎಂಬ ಹೊಸ ವಿಮಾನಯಾನ ಸಂಸ್ಥೆ ಗಗನಕ್ಕೇರಲು ಸಿದ್ಧವಾಗಿದ್ದು, ಇದು ಉತ್ತರ ಪ್ರದೇಶದ (Uttar Pradesh) ಮೊದಲ ವಿಮಾನಯಾನ ಸಂಸ್ಥೆಯಾಗಿದೆ.
ಶಂಖ್ ಏರ್ (Shankh Air) ವಿಮಾನಯಾನ ಸಂಸ್ಥೆಯು ನಾಗರಿಕ ವಿಮಾನಯಾನ ಸಚಿವಾಲಯದಿಂದ (Ministry of Civil Aviation) ಅನುಮೋದನೆ ಪಡೆದುಕೊಂಡಿದ್ದು, ಭಾರತದ ವಾಯುಯಾನ ಕ್ಷೇತ್ರದಲ್ಲಿ ಹೊಸ ಪ್ರವೇಶಕ್ಕಾಗಿ ಸಜ್ಜಾಗಿದೆ.ಇದನ್ನೂ ಓದಿ: ಮೇಲ್ನೋಟಕ್ಕೆ ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ – ಪ್ರಹ್ಲಾದ್ ಜೋಶಿ
Advertisement
UP’s first scheduled airline, Shankh Air, gets NOC from Civil Aviation Ministry
✈️Shankh Air will have its hub in Lucknow & Noida with three proposed Boeing 737-800NG aircraft.
✈️Airline aims to connect major cities across India from its hubs.
✈️It has proposed to… pic.twitter.com/i1c889AALS
— Lucknow Development Index (@lucknow_updates) September 24, 2024
Advertisement
ಈ ಮೂಲಕ ಚೊಚ್ಚಲ ಹೆಜ್ಜೆಯನ್ನು ಇಡಲು ಶಂಖ್ ವಿಮಾನಯಾನ ಸಂಸ್ಥೆ ಸಿದ್ಧವಾಗಿದೆ. ಇದು ಉತ್ತರಪ್ರದೇಶದ ಲಕ್ನೋ (Lucknow) ಮತ್ತು ನೋಯ್ಡಾದಲ್ಲಿ (Noida) ಕೇಂದ್ರಗಳನ್ನು ಹೊಂದಿದೆ.
Advertisement
Advertisement
ಶಂಖ್ ಏರ್ ಇದು ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಜೊತೆಗೆ ಅಂತರರಾಜ್ಯಗಳಿಗೂ ಸೇವೆ ಸಲ್ಲಿಸಲು ಸಿದ್ಧವಾಗಿದೆ. ಇದು ಪ್ರಮುಖ ನಗರಗಳನ್ನು ಸಂಪರ್ಕಿಸುವುದು, ಕಡಿಮೆ ಪ್ರದೇಶಗಳಲ್ಲಿ ವಾಯು ಸಂಪರ್ಕವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ.
ಈ ವಿಮಾಂನಯಾನ ಸಂಸ್ಥೆಯು ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ 63 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ ಮತ್ತು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಶಂಖ್ ಏರ್ ಹೊಚ್ಚ ಹೊಸ ಬೋಯಿಂಗ್ 737-800 ವಿಮಾನದೊಂದಿಗೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.ಇದನ್ನೂ ಓದಿ: 10 ತಿಂಗಳ ಮಗುವನ್ನು ಹೊತ್ತೊಯ್ದು ಅತ್ಯಾಚಾರ – ಆರೋಪಿಯನ್ನು ಬಡಿದು ಪೊಲೀಸರಿಗೊಪ್ಪಿಸಿದ ಜನ