ದಾವಣಗೆರೆ: ವಿಶ್ವಕರ್ಮ ಮಂಡಳಿ (Vishwakarma Board) ಮಾಡಿ ಸರ್ಕಾರ ಮರೆತಂತಿದೆ ಎಂದ ಶಂಕರಾತ್ಮಾನಂದ ಸರಸ್ವತಿ ಶ್ರೀ ಸ್ವಾಮೀಜಿ (Shankaratmananda Swamiji) ಕಿಡಿಕಾರಿದ್ದಾರೆ.
ವಡ್ನಾಳ ವಿಶ್ವಕರ್ಮ ಮಠದ ಗುರು ಕುಟೀರದಲ್ಲಿ ನಡೆದ ವಿಶ್ವಕರ್ಮ ಸಮಾಜದ ಮಹಾಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ರಾಜ್ಯ ಸರ್ಕಾರದಿಂದ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಳಂಬದ ಬಗ್ಗೆ ಗಮನಸೆಳೆದರು. ವಿಶ್ವಕರ್ಮ ನಿಗಮ ಮಂಡಳಿಯನ್ನು ಸರ್ಕಾರ ಮರೆತು ಕುಳಿತಿದೆ. ವಿಶ್ವಕರ್ಮ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಕ್ಕೆ ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾರವಾರ| ಜಿಲ್ಲಾಸ್ಪತ್ರೆ ಹೊಸ ಕಟ್ಟಡದ ರೂಫಿಂಗ್ ಷೀಟ್ ಕುಸಿತ
ಸಮಾಜದ ಜನರ ಆರ್ಥಿಕ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ನಿಗಮ ಮಂಡಳಿ ಪ್ರಾರಂಭ ಮಾಡಿದೆ. ಎಲ್ಲಾ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಆದರೆ ನಮ್ಮ ಸಮಾಜದ ನಿಗಮ ಮಂಡಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿಲ್ಲ. ಸರ್ಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಜಾತಿ ಜನಗಣತಿಯಲ್ಲಿ ಧರ್ಮ ಹಿಂದೂ, ಜಾತಿ ವಿಶ್ವಕರ್ಮ ಎಂದು ಬರೆಯಿಸಿ ಎಂದು ಸಮಾಜದ ಜನರಿಗೆ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕದಲ್ಲಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

