– ಮೈಸೂರು & ಬೆಂಗಳೂರಿನಿಂದ ತೆರಳಿದ್ದ 13 ಜನರ ತಂಡದಿಂದ ವಿಶೇಷ ಪೂಜೆ
ಶ್ರೀನಗರ: ಉಗ್ರರ ದಾಳಿ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ (Jammu & Kashmir) ಆದಿ ಶಂಕರಾಚಾರ್ಯ (Shankaracharya Jayanti) ಅವರ ಜಯಂತಿ ಆಚರಿಸಲಾಗಿದೆ.
ಸಿಆರ್‌ಪಿಎಫ್ ತಂಡದ ಸಹಾಯದಿಂದ ವಿಶೇಷ ಹೋಮ ನೆರವೇರಿಸಲಾಗಿದೆ. ಮೈಸೂರು ಮತ್ತು ಬೆಂಗಳೂರಿನಿಂದ ತೆರಳಿದ್ದ 13 ಜನರ ತಂಡ ಈ ವಿಶೇಷ ಪೂಜೆ ಮಾಡಿದೆ. ಇದನ್ನೂ ಓದಿ: ಶಿರಗಾವ್ ದೇವಸ್ಥಾನದಲ್ಲಿ ಕಾಲ್ತುಳಿತ; 6 ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ
ಜಮ್ಮು ಕಾಶ್ಮೀರದಲ್ಲಿ ಶಾಂತಿ, ನೆಮ್ಮದಿ ನೆಲೆಸಲೆಂದು ಪ್ರಾರ್ಥಿಸಲಾಗಿದೆ. ದೇಶ ರಕ್ಷಣೆಗಾಗಿ ಯೋಧರಿಗೆ ಹೆಚ್ಚು ಆರೋಗ್ಯ ಶಕ್ತಿ ಸಿಗಲೆಂದು ಆಶಿಸಿ ರುದ್ರಾಭಿಷೇಕ, ಮೃತ್ಯುಂಜಯ ಜಪ ಮಾಡಲಾಗಿದೆ.
ಜಮ್ಮು-ಕಾಶ್ಮೀರ ತಂಡದಿಂದ ವಿಶೇಷ ವಾದ್ಯಗೋಷ್ಠಿ ಕೂಡ ನಡೆಯಿತು. ಜಿಲ್ಲಾ ಆಡಳಿತದಿಂದ ವಿಶೇಷ ಪೂಜೆ, ಹೋಮ-ಹವನ ನಡೆದಿದೆ. ಡಾಕ್ಟರ್ ನಾಗಲಕ್ಷ್ಮಿ ನಾಗಾರ್ಜುನ್ ಮೈಸೂರು ತಂಡವು ಭರತನಾಟ್ಯದ ಮೂಲಕ ಶಂಕರಾಚಾರ್ಯ ಜೀವನ ಕಥೆಯನ್ನು ಪ್ರಸ್ತುತ ಪಡಿಸಿತು. ಇದನ್ನೂ ಓದಿ: ಕಾಂಗ್ರೆಸ್‍ಗೆ ವೋಟ್ ಹಾಕಿದ್ರೆ ತಾಲಿಬಾನ್ ಸರ್ಕಾರ ಬರತ್ತೆ ಅಂತ ಅವತ್ತೇ ಹೇಳಿದ್ದೆ: ಪ್ರತಾಪ್ ಸಿಂಹ