ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಬಿಜೆಪಿ (BJP) ಬಿಗ್ ವಿಕೆಟ್ ಪತನವಾಗುವ ಲಕ್ಷಣಗಳು ಕಾಣುತ್ತಿದೆ. ತಮ್ಮ ನೆಚ್ಚಿನ ಶಿಷ್ಯ ಬಿಜೆಪಿ ಮಾಜಿ ಸಚಿವ ಶಂಕರ್ ಪಾಟೀಲ್ ಮುನೆನಕೊಪ್ಪ ಅವರು ಕಾಂಗ್ರೆಸ್‍ಗೆ ಕರೆತರಲು ಶೆಟ್ಟರ್ ಹಾಕಿದ ಪ್ಲಾನ್ ಸಕಸ್ಸ್ ಆಗಿರುವ ಲಕ್ಷಣಗಳು ಕಾಣುತ್ತಿದ್ದು, ಸಂತೋಷ್ ಲಾಡ್ ಈ ಬಗ್ಗೆ ಪಬ್ಲಿಕ್ ಟಿವಿಗೆ ನೀಡಿರುವ ಸ್ಪಷ್ಟನೆ ಕುತೂಹಲ ಕೆರಳಿಸಿದ್ರೆ, ಈ ಬೆಳವಣಿಗೆ ಮಧ್ಯೆ ಮುನೇನಕೊಪ್ಪ ಕರೆದಿರುವ ದಿಢೀರ್ ಸುದ್ದಿಗೋಷ್ಠಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಧಾನ ಸಭಾ ಚುನಾವಣೆಯಲ್ಲಿ (Vidhanasabha Election) ನಡೆದ ರಾಜಕೀಯ ಚದುರಂಗದಾಟ ಲೋಕಸಭಾ ಚುನಾವಣೆಯಲ್ಲಿ (Loksabha Election) ಮುಂದುವರಿಯುವ ಲಕ್ಷಣಗಳು ಕಾಣುತ್ತಿವೆ. ಧಾರವಾಡ ಜಿಲ್ಲೆಯಿಂದ ಶೆಟ್ಟರ್ ಜಂಪ್‍ನಿಂದ ಆರಂಭವಾಗಿದ್ದ ಕುತೂಹಲ, ಈಗ ಅವರ ಶಿಷ್ಯ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಆಪ್ತ ಎಸ್.ಐ ಚಿಕ್ಕನಗೌಡರ ಮನೆ ಅಂಗಳ ತಲುಪಿದೆ. ಶೆಟ್ಟರ್ ಹಾದಿಯನ್ನು ಇಬ್ಬರೂ ಹಿಡಿದಿರುವ ಲಕ್ಷಣಗಳು ಕಾಣುತ್ತಿದ್ದು, ಧಾರವಾಡ ಜಿಲ್ಲೆಯಲ್ಲಿ ಲಿಂಗಾಯತ ಅಸ್ತ್ರವನ್ನು ಬಲಗೊಳಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ (Pralhad Joshi) ಟಾಂಗ್ ಕೊಡಲು ಕೈ ಬೆಟಾಲಿಯನ್ ಸನ್ನದ್ಧವಾಗಿದೆ. ಆಪರೇಷನ್ ಹಸ್ತಕ್ಕೆ ಹುಬ್ಬಳ್ಳಿಯಲ್ಲಿ ಚಾಲನೆಗೆ ವೇದಿಕೆ ಸಿದ್ಧವಾಗಿದ್ದು, ಶಂಕರ್ ಪಾಟೀಲ್ ಮುನೇನಕೊಪ್ಪ ಕರೆದಿರುವ ದಿಢೀರ್ ಸುದ್ದಿಗೋಷ್ಠಿ ರಾಜಕೀಯ ನಾಯಕರ ಹುಬ್ಬೆರುವಂತೆ ಮಾಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೇ ಮುನೇನಕೊಪ್ಪ (Shankar Patil Munenakoppa) ಕೈ ಹಿಡೀತಾರೆ ಎನ್ನುವ ಮಾತು ಕೇಳಿಬಂದಿದ್ದವು. ಒಳಗೊಳಗೆ ಚರ್ಚೆ ನಡೆಯುತ್ತಿದ್ದರೂ, ಇಷ್ಟು ದಿನ ಕಾಂಗ್ರೆಸ್ ನಾಯಕರು ಇದು ಹೊರಬರದಂತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಂದು ಸಚಿವ ಸಂತೋಷ್ ಲಾಡ್ ಹಾಕಿದ ಹೊಸ ಬಾಂಬ್ ಲೋಕಸಭಾ ಚುನಾವಣಾ ರಣಕಣದ ಆರಂಭಿಕ ರೋಚಕತೆಯನ್ನು ಹೆಚ್ಚಿಸಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿರುವ ಲಾಡ್ ಮುನೇನಕೊಪ್ಪ ಮತ್ತು ಚಿಕ್ಕನಗೌಡರ ಪಕ್ಷಕ್ಕೆ ಬರುವ ಮಾಹಿತಿಯಿದೆ ಎನ್ನುವ ಮೂಲಕ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಕುಟುಂಬದ ಯಜಮಾನನ ಕನಸಲ್ಲಿ ದೇವಿ- ದರ್ಗಾ ಪಕ್ಕದಲ್ಲೇ ದೇಗುಲ ನಿರ್ಮಿಸಿ, ಪೂಜೆ
ಈ ನಡವೆ 16 ಅಥವಾ 18 ಜನ ಇನ್ನು ಕಾಂಗ್ರೆಸ್‍ಗೆ (Congress) ಬರಬಹುದು ಅಂತ ನವಲಗುಂದ ಕೈ ಶಾಸಕ ಕೋನರೆಡ್ಡಿ ಹೇಳಿದ್ದಾರೆ. ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ಬಗ್ಗೆ ನನಗೇನೂ ಗೊತ್ತಿಲ್ಲ ಅದನ್ನೆಲ್ಲ ಪಾರ್ಟಿ ನೋಡಿಕೊಳ್ಳುತ್ತೆ. ಜೋಶಿ ಅವರು ಪಕ್ಷಕ್ಕೆ ಬರ್ತೀನಿ ಅಂದ್ರು ಬೇಡ ಅನ್ನಲ್ಲ. ಮುನೇನಕೊಪ್ಪ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ ಆಗಿಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ನಾಯಕರ ಮೇಲಿನ ಸೇಡು ತೀರಿಸಿಕೊಳ್ಳಲು ಶೆಟ್ಟರ್ ರೂಪಿಸಿರುವ ಮೊದಲ ಅಧ್ಯಾಯ ಇದು ಎಂದು ಹೇಳಲಾಗ್ತಿದೆ. ಲಿಂಗಾಯತ ಅಸ್ತ್ರ ಬಳಿಸಿಕೊಂಡು, ಒಂದು ಕಡೆ ಹಿತ ಶತ್ರು ಪ್ರಹ್ಲಾದ್ ಜೋಶಿ, ಮತ್ತೊಂದು ಕಡೆ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಟಕ್ಕರ್ ನೀಡಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ನಾಳೆ ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಶಂಕರ್ ಪಾಟೀಲ್ ಮುನೇನಕೊಪ್ಪ ಮಧ್ಯಾಹ್ನ 12 ಗಂಟೆಗೆ ಕರೆದಿರುವ ಸುದ್ದಿಗೋಷ್ಠಿಯತ್ತ ರಾಜ್ಯ ರಾಜಕೀಯ ವಲಯ ಮಾತ್ರವಲ್ಲದೆ, ಕೇಂದ್ರದ ನಾಯಕರ ಚಿತ್ತ ಇಡುವಂತಾಗಿದೆ.
Web Stories