ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಶನಿ’ ಧಾರಾವಾಹಿಯನ್ನು ನೋಡುವವರಿಗೆ ಸೂರ್ಯದೇವನ ಪರಿಚಯ ಇದ್ದೇ ಇರುತ್ತೆ. ಈ ಧಾರಾವಾಹಿಯಲ್ಲಿ ಸೂರ್ಯದೇವ ಪಾತ್ರವನ್ನು ರಂಜಿತ್ ಕುಮಾರ್ ಅವರು ಮಾಡಿದ್ದಾರೆ.
ಶನಿ ಕಿರುತೆರೆ ಜಗತ್ತಿನ ನಂಬರ್ ಒನ್ ಸೀರಿಯಲ್ ಶೋವಾಗಿದ್ದು, ಪ್ರೇಕ್ಷಕರ ಮನವನ್ನು ಗೆದ್ದಿದೆ. ಇವತ್ತು ಪ್ರೇಕ್ಷಕರ ಮುಂದೆ ಸೂರ್ಯದೇವನಾಗಿ ನಿಲ್ಲುವುದಕ್ಕೆ ರಂಜಿತ್‍ಕುಮಾರ್ ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದಾರೆ.
ಹೈಟ್- ಪರ್ಸನಾಲಿಟಿ ಜೊತೆಗೆ ಟ್ಯಾಲೆಂಟ್ ಇದ್ದರೂ ರಂಜಿತ್ ಗೆ ಅವಕಾಶಗಳು ಸಿಗುತ್ತಿರಲಿಲ್ಲ. ಟ್ವಿಕ್ಲಿಂಗ್ ಬಜಾರ್ ನಲ್ಲಿ ಸಣ್ಣದೊಂದು ಚಾನ್ಸ್ ಗಾಗಿ ಸಿಕ್ಕಾಪಟ್ಟೆ ಸೈಕಲ್ ಹೊಡೆದಿದ್ದಾರೆ. ರಂಜಿತ್ ತೀರಾ ಕಡುಬಡತನದ ಮಗನೇನು ಅಲ್ಲ. ಇಂಡಿಗೋ ಏರ್ ಲೈನ್ಸ್ ಕಂಪನಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದರು. ಆದರೆ ರಂಜಿತ್ ಅವರಿಗೆ ಸಿನಿಮಾದಲ್ಲಿ ಅಭಿನಯಿಸುವ ಕನಸಿತ್ತು.
ರಂಜಿತ್ ಕುಮಾರ್ ಮಾತು
ನಾನು ಬಾಲ್ಯದಿಂದಲೂ ಕರಾಟೆ ಕಲಿತ್ತಿದ್ದೇನೆ. ಆದರೆ ನನಗೆ ಸಿನಿಮಾದಲ್ಲಿ ಮಾಡಬೇಕೆಂದು ಆಸೆ ಇರಲಿಲ್ಲ. ನನಗೆ ಏರ್ ಲೈನ್ಸ್ ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಅದೇ ರೀತಿ ಇಂಡಿಗೋ ಏರ್ ಲೈನ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಎರಡು ವರ್ಷ ಅಲ್ಲಿಯೇ ಇದ್ದೆ. ನಮ್ಮ ಅಕ್ಕ ನಟಿ ಮಾಲಾಶ್ರೀ ಅವರಿಗೆ ಬೌನ್ಸರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೂಡ ಒಳ್ಳೆಯ ಪರ್ಸನಾಲಿಟಿ ಇದೆ ಸಿನಿಮಾದಲ್ಲಿ ಅಭಿನಯಿಸು ಎಂದು ಹೇಳಿದರು.
ಸಿನಿಮಾದಲ್ಲಿ ಚಾನ್ಸ್ ಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದೇನೆ. ಬೆಳಗ್ಗೆ ಗಾಂಧಿನಗರಕ್ಕೆ ಹೋದರೆ ಸಂಜೆವರೆಗೂ ಕಾಯುತ್ತಿದ್ದೆ. ಯಾರು ಸಿಗುತ್ತಿರಲಿಲ್ಲ, ಎಲ್ಲರು ಹೈಟ್, ಪರ್ಸನಾಲಿಟಿ ಇದೆ ಸಿನಿಮಾದಲ್ಲಿ ಮಾಡಿ ಎಂದು ಹೇಳುತ್ತಿದ್ದರು. ಆದ್ದರಿಂದ ನಾನು ಸಿನಿಮಾದಲ್ಲಿ ಮಾಡಬೇಕು ಎಂದು ಪ್ರಯತ್ನ ಪಟ್ಟಿದ್ದೇನೆ. ಕೊನೆಗೆ ಸತತ ನಾಲ್ಕು ವರ್ಷ ಅಲೆದಾಡಿದ್ದೇನೆ. ಈ ಸಮಯದಲ್ಲಿ ಎಷ್ಟು ಚಪ್ಪಲಿ ಸವೆದಿದಿಯೋ ಗೊತ್ತಿಲ್ಲ ಎಂದ್ರು
ಸಿನಿಮಾ ಅವಕಾಶಕ್ಕಾಗಿ ಸಿನಿಮಾ ನಟರಿಗೆ ನಾನು ಬೌನ್ಸರ್ಸ್ ಕೆಲಸ ಮಾಡಿದ್ದೇನೆ. ನಾನು ನಟಿ ಮಾಲಾಶ್ರೀ ಅವರಿಂದ ಸಿನಿಮಾಗೆ ಬಂದೆ. ಮೊದಲ ಬಾರಿ ನಾನು ದರ್ಶನ್ ಅಭಿನಯದ ‘ಪೊರ್ಕಿ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದೆ. ಅಲ್ಲಿಂದ ಅಣ್ಣಾಬಾಂಡ್, ಜಾಕಿ ಮತ್ತು ತಮಸ್ಸು ಹೀಗೆ ಸ್ಟಾರ್ ನಟರುಗಳ ಸಿನಿಮಾದಲ್ಲಿ ಅಭಿನಯಸಿದ್ದೇನೆ ಎಂದು ಹೇಳಿದ್ದಾರೆ.
ಶನಿ ಧಾರಾವಾಹಿ:
ನಾನು ಡಾ. ರಾಜ್ ಕುಮಾರ್ ಅವರನ್ನು ನೋಡಿ ಕಮರ್ಷಿಯಲ್ ಸಿನಿಮಾಗಳಿಗಿಂತ ಪೌರಾಣಿಕ ಪಾತ್ರಗಳನ್ನ ಮಾಡಿ ಸೈ ಎನಿಸಿಕೊಳ್ಳಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದೆ. ಇದೇ ವೇಳೆ ಶನಿ ಧಾರಾವಾಹಿಯ ಅವಕಾಶ ಬಂತು. ಬಳಿಕ ಸಿನಿಮಾದ ಅವಕಾಶಗಳನ್ನು ಬಿಟ್ಟು ಶನಿ ಧಾರಾವಾಹಿಗೆ ಹೋದೆ. ಡಾ. ರಾಜ್ ಕುಮಾರ್ ಅವರಿಂದ ಪ್ರೇರೇಪಣೆ ಪಡೆದುಕೊಂಡು ಪೌರಾಣಿಕ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ರಂಜಿತ್ ಕುಮಾರ್ ಅವರಿಗೆ ಸೂರ್ಯದೇವನ ಪಾತ್ರವನ್ನ ನೋಡಿ ಹಲವು ಅವಕಾಶಗಳು ಬರುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv