Connect with us

Karnataka

ಮೂರು ರಾಶಿಗೆ ಶನಿ ಪ್ರವೇಶ – ಶನಿಕಾಟದಿಂದ ಮುಕ್ತಿ ಪಡೆಯೋದು ಹೇಗೆ?

Published

on

ಬೆಂಗಳೂರು: ಪ್ರಬಲ ಗ್ರಹವಾದ ಶನಿ ಇಂದು ಅಮಾವಾಸ್ಯೆಯ ದಿನ ಮಧ್ಯಾಹ್ನ 12.05ಕ್ಕೆ ಧನಸ್ಸು ರಾಶಿಯಿಂದ ಮಕರ ರಾಶಿಗೆ ಚಲಿಸಲಿದ್ದಾನೆ. ಶನಿ ಪಥ ಬದಲಾವಣೆ ಮನುಷ್ಯನ ಹನ್ನೆರಡು ರಾಶಿ- ನಕ್ಷತ್ರದ ಮೇಲೆ ಪರಿಣಾಮ ಬೀರಲಿದ್ದಾನೆ. ಇದನ್ನೂ ಓದಿ: 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?

ಅದರಲ್ಲೂ ಧನಸ್ಸು, ಮಕರ ಹಾಗೂ ಕುಂಭ ರಾಶಿಗೆ ಸಾಡೇ ಸಾತಿ ಶುರುವಾಗಲಿದೆ. ಶನಿ ಹೆಗಲೇರಲಿದ್ದಾನೆ, 2020 ರಿಂದ 2022 ರವರೆಗೆ ಶನಿಪ್ರಭಾವ ಇರಲಿದೆ. ಹಾಗಾಗಿ ಈ ಮೂರು ರಾಶಿಯವರ ಮೇಲಂತೂ ಶನಿ ಆಟ ಶುರುವಾಗಲಿದೆ. ಧನಸ್ಸು ರಾಶಿಯಿಂದ ಮಕರಕ್ಕೆ ಪ್ರವೇಶಿಸಲಿರುವ ಶನಿಯ ಪಥ ಬದಲಾವಣೆ ಕೆಲ ರಾಶಿಗಳ ಮೇಲಂತೂ ಗಾಢ ಪರಿಣಾಮ ಬೀರಲಿದೆ. ಕೆಲ ರಾಶಿಗೆ ಮಿಶ್ರಫಲ, ಇನ್ನೂ ಕೆಲ ರಾಶಿಯವರಿಗೆ ಶನಿ ಪಥ ಬದಲಾವಣೆ ಶುಭ ಫಲವನ್ನು ತರಲಿದೆ.

ಪರಿಹಾರ: ಶನೇಶ್ಚರನ ಈ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಶನಿಕಾಟದಿಂದ ಮುಕ್ತಿ ಪಡೆಯಬಹುದು. ಶನಿಕಾಟದಿಂದ ಸಂಪೂರ್ಣ ಮುಕ್ತಿ ಹೊಂದುವುದು ಕಷ್ಟ. ಆದರೆ ಬೆಟ್ಟದಷ್ಟು ಬರುವ ಕಷ್ಟವನ್ನು ಕೊಂಚ ನಿವಾರಿಸಲು ಶಿವಸ್ಮರಣೆ, ಶಿವನ ಪೂಜೆ ಮಾಡಬೇಕು. ಬಡ ಬಗ್ಗರಿಗೆ, ದಾನ-ಧರ್ಮ ಮಾಡಿದರೆ ಶನಿಯನ್ನು ಸಂತೃಪ್ತಿಗೊಳಿಸಬಹುದು. ಶನಿವಾರ ಆಂಜನೇಯ ದರ್ಶನ, ಭಜರಂಗಿಗೆ ವಿಶೇಷ ಪೂಜೆ ಮಾಡಿದರೆ ಸಮಸ್ಯೆ ನೀಗಲಿದೆ. ಆಯಾಯ ನಕ್ಷತ್ರ ರಾಶಿಯವರಿಗೆ ಜ್ಯೋತಿಷಿಗಳ ಸಲಹೆ ಮೇರೆಗೆ ಶನಿದೋಷ ನಿವಾರಣೆಯ ಹೋಮ-ಹವನ ನಡೆಸಬೇಕಾಗುತ್ತೆ.

ದೋಷವಿರುವ ರಾಶಿಗಳು ಮತ್ತು ಪರಿಹಾರ

1. ವೃಶ್ಚಿಕ: ಸಾಡೇಸಾತಿ ಸಂಪೂರ್ಣ ಬಿಡುಗಡೆಯಾಗುವುದರಿಂದ ವಿಶೇಷವಾಗಿ ಶನೇಶ್ಚರಸ್ವಾಮಿಗೆ ಪಂಚಾಮೃತ ಅಭಿಷೇಕ, ತೈಲಾಭಿಷೇಕ, ಸಂಕಲ್ಪ ಹೋಮ, ಇತ್ಯಾದಿಗಳನ್ನು ಮಾಡಿಸುವುದರಿಂದ ಇನ್ನು 30 ವರ್ಷಕಾಲ ಶನೇಶ್ಚರ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು.

2. ಧನಸ್ಸು: ಸಾಡೇಸಾತಿ ಕೊನೆಯ ಹಂತವಾದ್ದರಿಂದ (ಎರಡೂವರೆ ವರ್ಷ) ಈ ದೋಷವಿರೋ ರಾಶಿಯವರು ಶನೇಶ್ಚರ ಸ್ವಾಮಿಗೆ ತೈಲಾಭಿಷೇಕ, ಸಂಕಲ್ಪ ಹೋಮ ಇತ್ಯಾದಿಗಳನ್ನು ಮಾಡಿಸಿದರೆ ಶತ್ರುಭಯ, ವಿದ್ಯಾಹೀನತೆ, ಗೃಹ ಕಲಹ, ದುಷ್ಟ ಮಿತ್ರರ ಸಹವಾಸ ಇತ್ಯಾದಿಗಳು ಪರಿಹಾರವಾಗುತ್ತೆ.

3. ಮಕರ: ಜನ್ಮದಲ್ಲಿ ಎರಡೂವರೆ ವರ್ಷ ಶನಿ ನೆಲೆಸುವುದರಿಂದ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ ಜನ್ಮ ಶನಿ ಕಾಡುವಾಗ ಸುಳ್ಳು ಹೇಳುವಿಕೆ, ಮೋಸ, ವಂಚನೆ ಮಾಡುವ ಬುದ್ಧಿ, ಒರಟುತನ, ಚಂಚಲ ಬುದ್ಧಿ, ಅತಿಕೋಪ, ಕೆಟ್ಟ ಜನರ ಸಹವಾಸ ಮಾಡುವಂತಹ ಬುದ್ಧಿಯನ್ನು ಕೊಡುವುದರಿಂದ ತೈಲಾಭಿಷೇಕ ಮಾಡಿಸಿದರೆ ದೋಷಗಳಿಂದ ಮುಕ್ತರಾಗಬಹುದು.

4. ಕುಂಭ: ಸಾಡೇಸಾತಿ ಪ್ರಾರಂಭವಾಗುವುದರಿಂದ ತೈಲಾಭಿಷೇಕ, ಸಂಕಲ್ಪ ಹೋಮ, ಪಂಚಾಮೃತ ಅಭಿಷೇಕ ಮುಂತಾದ ಕಾರ್ಯಗಳಲ್ಲಿ ಪಾಲ್ಗೊಂಡು ಶನಿ ದೋಷ ನಿವಾರಣೆ ಮಾಡಿಕೊಳ್ಳಬಹುದು.

ಶನಿಯ ವಕ್ರದೃಷ್ಟಿ ಇದ್ದ ನಕ್ಷತ್ರ ರಾಶಿಯವರಿಗೆ ಈ ಶನಿಪಥ ಬದಲಾವಣೆ ದೊಡ್ಡ ಕಂಟಕವಾಗಲಿದೆ. ಯಾಕೆಂದರೆ ಶನಿಯ ಕಾಟ ಮಾತ್ರವಲ್ಲ ಶನಿಯ ತಂದೆ ಸೂರ್ಯನ ವಕ್ರದೃಷ್ಟಿಯೂ ಇರಲಿದೆ. ರಾಜಕೀಯಕ್ಕೆ ಅಧಿಪತಿಯಾದ ಸೂರ್ಯನ ವಕ್ರದೃಷ್ಟಿಯಿಂದ ಮಕರ, ಧನಸ್ಸು, ಕುಂಭ ರಾಶಿಯ ರಾಜಕೀಯದವರಿಗೆ ಈ ಬಾರಿ ಸಾಕಷ್ಟು ತೊಂದರೆ ಹಿನ್ನೆಡೆಯಾಗಲಿದೆ ಎಂದು ಜ್ಯೋತಿಷಿಗಳಾದ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in