ಬೀಜಿಂಗ್: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಚೀನಾದ ಶಾಂಘೈ ನಗರದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಪ್ರಾರಂಭಿಸಿ 3 ವಾರಗಳು ಕಳೆದಿವೆ. ಇಂದಿಗೂ ಶಾಂಘೈ ನಗರದ ಜನರು ಕಳೆದ 3 ವಾರಗಳಿಂದ ತಮ್ಮ ಮನೆಗಳಿಂದ ಹೊರ ಇಣುಕಲೂ ಸಾಧ್ಯವಾಗುತ್ತಿಲ್ಲ. ಇದೀಗ ನಗರದ ಎರಡೂವರೆ ಕೋಟಿ ಜನರು ಆಹಾರ, ಔಷಧಗಳಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಶಾಂಘೈ ನಗದ ಕಟ್ಟುನಿಟ್ಟಿನ ಲಾಕ್‌ಡೌನ್ ನಡುವೆ ನಗರದ ನಿವಾಸಿಗಳು ತಮ್ಮ ಮನೆಗಳಿಂದ ಕಿರುಚಾಟ, ಅರಚಾಟಗಳನ್ನು ಪ್ರಾರಂಭಿಸಿದ್ದಾರೆ. ಜನರು ತಮ್ಮ ಕಿಟಕಿಗಳಿಂದ ಕಿರುಚುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಜನರ ಆಕ್ರಂದನವೇ ಅವರ ಕಷ್ಟದ ಕ್ಷಣಗಳನ್ನು ಬಯಲುಮಾಡುತ್ತಿದೆ. ಇದನ್ನೂ ಓದಿ: ಒಟ್ಟು 34 ಕೇಸ್ – ಬೆಂಗ್ಳೂರು ಹೊರತು ಪಡಿಸಿ ಏಕೈಕ ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್
Advertisement
What the?? This video taken yesterday in Shanghai, China, by the father of a close friend of mine. She verified its authenticity: People screaming out of their windows after a week of total lockdown, no leaving your apartment for any reason. pic.twitter.com/iHGOO8D8Cz
— Patrick Madrid ✌???? (@patrickmadrid) April 9, 2022
Advertisement
ಟ್ವಿಟ್ಟರ್ ಬಳಕೆದಾರ ಪ್ಯಾಟ್ರಿಕ್ ಮ್ಯಾಡ್ರಿಡ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಶಾಂಘೈ ನಿವಾಸಿಗಳು ತಮ್ಮ ಅಪಾರ್ಟ್ಮೆಂಟ್‌ಗಳಿಂದ ಕಿರುಚಾಡುವ ಸನ್ನಿವೇಶವನ್ನು ಕಾಣಬಹುದು. ವೀಡಿಯೋ ಬಗ್ಗೆ ವಿವರಿಸಿರುವ ಮ್ಯಾಡ್ರಿಡ್, ಇದು ನನ್ನ ಆತ್ಮೀಯ ಸ್ನೇಹಿತನ ತಂದೆ ತೆಗೆದಿರುವ ವೀಡಿಯೋ. ಶಾಂಘೈ ಜನರ ಕಷ್ಟದ ಸತ್ಯಾಸತ್ಯತೆಯನ್ನು ಅವರು ಸೆರೆಹಿಡಿದಿದ್ದಾರೆ. ಲಾಕ್‌ಡೌನ್ ಪ್ರಾರಂಭವಾಗಿ ವಾರಗಳ ಬಳಿಕ ಅಲ್ಲಿನ ಜನರು ತಮ್ಮ ಕಿಟಕಿಗಳ ಹೊರಗೆ ಕಿರುಚಾಡುತ್ತಿದ್ದಾರೆ. ಯಾವ ಕಾರಣಕ್ಕೂ ಅವರು ತಮ್ಮ ಅಪಾರ್ಟ್ಮೆಂಟ್ ತೊರೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶಲ್ಲಿ ಜೆಸಿಬಿ ಘರ್ಜನೆ – ರಾಮನವಮಿ ಕಲ್ಲುತೂರಾಟ, 20 ಅಕ್ರಮ ಕಟ್ಟಡಗಳು ನೆಲಸಮ
Advertisement
This is not a new phenomenon. This is from several days ago. Absolutely appalling. pic.twitter.com/643Thw8fOa
— Gary Paul Hermit ن (@enternoon) April 9, 2022
Advertisement
ಶಾಂಘೈ ನಗರದಲ್ಲಿ ಭಾನುವಾರ 25 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದೆ. ಕೋವಿಡ್ ಪ್ರಕರಣಗಳು ಕಡಿಮೆಯಿರುವ ನಗರದ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಅನ್ನು ತೆಗೆದುಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.