ಬ್ಯಾಂಕಾಕ್: ಆಸ್ಟ್ರೇಲಿಯಾದ ನಿವೃತ್ತ ಲೆಗ್‍ಸ್ಪಿನ್ನರ್ ಶೇನ್ ವಾರ್ನ್ ಥಾಯ್ಲೆಂಡ್‍ನ ಕೋ ಸೆಮೈನಲ್ಲಿನ ಬಂಗಲೆಯಲ್ಲಿ ಶುಕ್ರವಾರ ನಿಶ್ತೇಜರಾಗಿ ಪತ್ತೆಯಾಗಿದ್ದರು. ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂತು. ಆದರೆ ಇವರ ಸಾವಿನ ನಂತರ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ಕುರಿತಾ ಥಾಯ್ಲೆಂಡ್ ಪೊಲೀಸರು ತನಿಖೆ ನಡೆಸಿದ್ದಾರೆ.
Advertisement
ವಾರ್ನ್ ಮಾರ್ಚ್ 3 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಥಾಯ್ಲೆಂಡ್‍ನ ವಿಲ್ಲಾದಲ್ಲಿದ್ದ ವಾರ್ನ್‍ಗೆ ಏಕಾಏಕಿ ಹೃದಯಘಾತವಾಗಿದೆ. ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದರೂ ಕೂಡ ಬದುಕುಳಿದಿರಲಿಲ್ಲ. ಇದನ್ನೂ ಓದಿ: ಶೇನ್ ವಾರ್ನ್ ಕೋಣೆ, ಟವೆಲ್‍ನಲ್ಲಿ ರಕ್ತದ ಕಣ ಇತ್ತು: ಥಾಯ್ಲೆಂಡ್ ಪೊಲೀಸ್
Advertisement
Advertisement
ವಾರ್ನ್ ಮೃತದೇಹದ ಪರೀಕ್ಷೆ ನಡೆಸಿದ ವೈದ್ಯರು ಇದೊಂದು ಸ್ವಾಭಾವಿಕ ಕಾರಣಗಳಿಂದ ಉಂಟಾಗಿರುವ ಸಾವು ಎಂದು ಕುಟುಂಬ ಮತ್ತು ಆಸ್ಟ್ರೇಲಿಯಾದ ರಾಯಭಾರಿಗೆ ವರದಿ ಸಲ್ಲಿಸಿದ್ದಾರೆ. ಥಾಯ್ಲೆಂಡ್‍ನ ವಿಲ್ಲಾಗೆ ರಜಾದಿನಗಳನ್ನು ಕಳೆಯಲು ಗೆಳೆಯರೊಂದಿಗೆ ತೆರಳಿದ್ದ 52 ವರ್ಷದ ವಾರ್ನ್ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಕೂಡ ಒಪ್ಪಿಕೊಂಡಿದೆ. ಇದನ್ನೂ ಓದಿ: ಒಟ್ಟು 65 ದಿನ ಐಪಿಎಲ್ ಕಲರವ – ಆರ್ಸಿಬಿಗೆ ಪಂಜಾಬ್ ಮೊದಲ ಎದುರಾಳಿ
Advertisement
ವಾರ್ನ್‍ಗೆ ಆಸ್ತಮಾವಿತ್ತು, ಹೀಗಾಗಿ ಅವರು ಇತ್ತೀಚೆಗೆ ಎದೆನೋವಿಗಾಗಿ ವೈದ್ಯರನ್ನೂ ಸಂಪರ್ಕಿಸಿದ್ದರು ಎಂದು ಥಾಯ್ಲೆಂಡ್ ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‍ನಲ್ಲಿ ಶೇನ್ ವಾರ್ನ್ ಅವರ ಅಂತ್ಯಸಂಸ್ಕಾರ ಸರ್ಕಾರಿ ಗೌರವಗಳೋಂದಿಗೆ ನಡೆಯಲಿದೆ. ಸರಿಸುಮಾರು 1 ಲಕ್ಷ ಜನರು ಸೇರುವ ನೀರಿಕ್ಷೆ ಇದೆ. ಅಂತ್ಯಸಂಸ್ಕಾರಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.