ಧೋನಿಯನ್ನು ಟೀಕಿಸೋ ಮಂದಿಗೆ ಶೇನ್ ವಾರ್ನ್ ಟಾಂಗ್!

Public TV
1 Min Read
DHONE WARN

ಚೆನ್ನೈ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತಂಡದಲ್ಲಿ ಅನುಭವಿ ಆಟಗಾರ ಎಂಎಸ್ ಧೋನಿ ಇರಲೇ ಬೇಕು ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಶೇನ್ ವಾರ್ನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಂಡ ಕಠಿಣ, ಒತ್ತಡದ ಸನ್ನಿವೇಶಗಳನ್ನು ಎದುರಿಸಲು ಅನುಭವಿ ಆಟಗಾರ ಧೋನಿ ಅವರ ಅಗತ್ಯವಿದೆ. ನನ್ನ ಪ್ರಕಾರ ಧೋನಿ ಅದ್ಭುತ ಆಟಗಾರ. ಧೋನಿ ತಂಡದಲ್ಲಿ ಇರುವುದು ಅಷ್ಟೇ ಉತ್ತಮ ಎಂದು ವಾರ್ನ್ ಹೇಳಿದ್ದಾರೆ.

ಇದೇ ವೇಳೆ ಧೋನಿ ಅವರನ್ನು ಟೀಕೆ ಮಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶೇನ್ ವಾರ್ನ್, ಧೋನಿ ಅವರನ್ನು ಟೀಕೆ ಮಾಡುವವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬುವುದೇ ತಿಳಿದಿರುವುದಿಲ್ಲ. ವಿಶ್ವಕಪ್ ಎದುರಿಸಲಿರುವ ಟೀಂ ಇಂಡಿಯಾ ತಂಡಕ್ಕೆ ಧೋನಿ ಅವರ ಅನುಭವ, ನಾಯಕತ್ವದ ತಂತ್ರಗಾರಿಕೆ ಅಗತ್ಯವಿದೆ ಎಂದರು.

dhoni 3

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ನಿರೀಕ್ಷೆಯ ತಂಡಗಳಾಗಿವೆ. ಏಕೆಂದರೆ ಇತ್ತಂಡಗಳು ಕಳೆದ ಒಂದು ವರ್ಷದಲ್ಲಿ ಅಂತಹ ಉತ್ತಮ ಪ್ರದರ್ಶನಗಳನ್ನು ನೀಡಿದೆ. ಆದರೆ ಆಸೀಸ್ ತಂಡವೂ ಕೂಡ ವಿಶ್ವಕಪ್ ವಿನ್ನಿಂಗ್ ರೆಸ್‍ನಲ್ಲಿದೆ ಎಂದು ತಿಳಿಸಿದರು.

ಬಹು ನಿರೀಕ್ಷೆಯ ವಿಶ್ವಕಪ್ ಟೂರ್ನಿ ಮೇ 30 ರಿಂದ ಜುಲೈ 14ರ ವರೆಗೂ ನಡೆಯಲಿದೆ. ಟೀಂ ಇಂಡಿಯಾ ಜೂನ್ 5 ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್ ಜರ್ನಿ ಆರಂಭಿಸಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *