ನವದೆಹಲಿ: 2016ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವೇಗಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಮತ್ತು ಮಹಿಳಾ ಟೀಂ ಇಂಡಿಯಾ ಆಟಗಾರ್ತಿ ಪೂನಂ ಯಾದವ್ ಅವರ ಹೆಸರನ್ನ ಬಿಸಿಸಿಐ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಕ್ರೀಡಾ ರಂಗದಲ್ಲಿ ವಿಶೇಷ ಪ್ರತಿಭೆಗಳನ್ನು ಗೌರವಿಸಿ ಅರ್ಜುನ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕೇಂದ್ರ ಕ್ರೀಡಾ ಇಲಾಖೆ ಪ್ರಶಸ್ತಿಗೆ ಅರ್ಹ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗುತ್ತದೆ. 2018 ರಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ಸ್ಮೃತಿ ಮಂದಾನ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
Advertisement
Advertisement
ವಿಶ್ವಕಪ್‍ಗೆ ಬುಮ್ರಾ ಸೇರಿದಂತೆ ಮೂವರು ಆಟಗಾರರು ಆಯ್ಕೆ ಆಗಿದ್ದು, ಮೇ 30 ರಿಂದ ಟೂರ್ನಿ ಆರಂಭವಾಗಲಿದೆ. ಇತ್ತ 2016ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಬುಮ್ರಾ ಸದ್ಯ ತಂಡದ ಪ್ರಮುಖ ಕೀ ಬೌಲರ್ ಎನಿಸಿಕೊಂಡಿದ್ದಾರೆ. 2018ರಲ್ಲಿ ಟೆಸ್ಟ್ ಆಡಿದ್ದ ಬುಮ್ರಾ 9 ಪಂದ್ಯಗಳಲ್ಲಿ 48 ವಿಕೆಟ್ ಪಡೆದು ಮಿಂಚಿದ್ದರು. 2013 ರಲ್ಲಿ ತಂಡದ ಪರ ಪಾದಾರ್ಪಣೆ ಮಾಡಿದ್ದ ಶಮಿ ಕೂಡ ಕಳೆದ 1 ವರ್ಷದಿಂದ ಉತ್ತಮ ಫಾರ್ಮ್ ಮುಂದುವರಿಸಿದ್ದಾರೆ. 2018 ರಲ್ಲಿ ಶಮಿ ಟೆಸ್ಟ್ ಕ್ರಿಕೆಟ್‍ನಲ್ಲಿ 68 ವಿಕೆಟ್ ಕಬಳಿಸಿದ್ದಾರೆ.
Advertisement
2009 ರಲ್ಲಿ ತಂಡದಲ್ಲಿ ಆಡಿದ್ದ ಜಡೇಜಾ ತಮ್ಮ ಆಲ್‍ರೌಂಡರ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ ಉತ್ತಮ ಫಿಲ್ಡರ್ ಕೂಡ ಆಗಿದ್ದಾರೆ. ಜಡೇಜಾ ಐಸಿಸಿ ಪ್ರಕಟಿಸುವ ವಿಶ್ವದ ಟಾಪ್ ಟೆಸ್ಟ್ ಕ್ರಿಕೆಟ್ ಆಟಗಾರರು ಹಾಗೂ ಅಲ್‍ರೌಂಡರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಮಹಿಳಾ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಪೂನಂ ಯಾದವ್ ಐಸಿಸಿ ಟಾಪ್ 10 ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.