ಬೆಳಗಾವಿ: ಹಾಸನ ಸಹಕಾರ ಬ್ಯಾಂಕ್ ಒಂದು ವಂಶಾಡಳಿತ ಕಪಿಮುಷ್ಠಿಯಲ್ಲಿದೆ. ಈ ವಂಶಾಡಳಿತವನ್ನು ಕೊನೆಗಾಣಿಸಬೇಕು ಎಂದು ಹೆಸರು ಹೇಳದೇ ಪರೋಕ್ಷವಾಗಿ ದೇವೇಗೌಡ ಕುಟುಂಬದ ಬಗ್ಗೆ ಎಸ್.ರವಿ ಅವರು ಪ್ರಸ್ತಾಪ ಮಾಡಿದ ಘಟನೆ ವಿಧಾನ ಪರಿಷತ್‌ನಲ್ಲಿ ನಡೆಯಿತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಪರಿಷತ್ ಸದಸ್ಯ ಶಂಬುಲಿಂಗಯ್ಯ ರವಿ ಅವರು, ದೇವೇಗೌಡ ಕುಟುಂಬದ ಬಗ್ಗೆ ಪರೋಕ್ಷವಾಗಿ ಆರೋಪ ಮಾಡಿದರು.ಇದನ್ನೂ ಓದಿ: ವಿಜಯ್ ಮಲ್ಯ, ನೀರವ್ ಮೋದಿ ಅವರ 15,000 ಕೋಟಿ ಆಸ್ತಿ ಬ್ಯಾಂಕ್‌ಗಳಿಗೆ ವಾಪಸ್: ಕೇಂದ್ರ ಸರ್ಕಾರ
ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದ ಅವರು, ಹಾಸನ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಸಾಲ ನೀಡಿರುವುದರಲ್ಲಿ ದೊಡ್ಡ ಅಕ್ರಮವಾಗಿದೆ. ಇದು ಚನ್ನರಾಯಪಟ್ಟಣ ತಾಲೂಕಿನಲ್ಲೇ ನಡೆದ ದೊಡ್ಡ ಅಕ್ರಮವಾಗಿದೆ. ಯಾರದ್ದೋ ದಾಖಲಾತಿ ಮೇಲೆ ಸಾಲ ಮಂಜೂರಾಗಿದೆ. ಸಾಲ ಪಡೆಯದೇ ಇದ್ದರೂ ಬೇರೆಯವರ ಜಮೀನಿನ ಮೇಲೆ ಅವರಿಗೆ ಸಾಲ ನೀಡಿದ್ದಾರೆ. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಹಾಸನ ಜಿಲ್ಲೆಯಲ್ಲಿ ವಂಶಾಡಳಿತವಾಗಿದೆ. ಹಾಸನ ಸಹಕಾರ ಬ್ಯಾಂಕ್ ವಂಶಾಡಳಿತದ ಕಪಿಮುಷ್ಠಿಯಿಂದ ಮುಕ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸಚಿವ ರಾಜಣ್ಣ ಉತ್ತರ ನೀಡಿ, ಚನ್ನರಾಯಪಟ್ಟಣ ಸಹಕಾರ ಬ್ಯಾಂಕ್‌ನಲ್ಲಿ ಹೆಚ್ಚು ಫೈನಾನ್ಸ್ ನೀಡಿರುವುದು ಸತ್ಯ. ಯಾರದ್ದೋ ಹೆಸರಿನ ಪಹಣಿಗೆ ಸಾಲ ಕೊಟ್ಟಿರುವುದು ಗಮನಕ್ಕೆ ಬಂದಿದೆ. ಸಾಲ ಕೊಡದೇ ಹೋದರೂ ರೈತರ ಆರ್‌ಟಿಸಿಯಲ್ಲಿ ಸಾಲ ಕೊಡಲಾಗಿದೆ ಎಂದು ನಮೂದು ಆಗಿದೆ. ಇನ್ನೂ ಕೂಡಾ ಅಕ್ರಮ ಆಗುತ್ತಿವೆ. ಈ ತಿಂಗಳ ಕೊನೆ ವಾರ ಅಥವಾ ಮುಂದಿನ ತಿಂಗಳ ಮೊದಲ ವಾರದ ಒಳಗೆ ಎಲ್ಲಾ ಮಾಹಿತಿ ಪಡೆದು ಸಭೆ ಮಾಡುತ್ತೇನೆ. ಏನಾದರೂ ಅಕ್ರಮ ಆಗಿದ್ದರೆ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೀವಿ ಎಂದು ತಿಳಿಸಿದರು.ಇದನ್ನೂ ಓದಿ: ದೇಶಿಯ ಕುರಿ ತಳಿ ಸಂರಕ್ಷಣೆ ಮಾಡಲು ವಿಶೇಷ ಅನುದಾನ ಕೊಡಿ – ಯತೀಂದ್ರ ಸಿದ್ದರಾಮಯ್ಯ