– ನಿನ್ನ ಬಾಯಿಗೆ ನೀನೇ ಬೀಗ ಹಾಕಿಕೋ, ಇಲ್ಲಾಂದ್ರೆ ನಾವೇ ಹಾಕ್ತೀವಿ
ದಾವಣಗೆರೆ: ನಿನ್ನ ಬಾಯಿಗೆ ನೀನೇ ಬೀಗ ಹಾಕಿಕೋ, ಇಲ್ಲಾಂದ್ರೆ ನಾವೇ ಬೀಗ ಹಾಕ್ತೇವೆ ಎಂದು ಶಾಸಕ ಯತ್ನಾಳ್ (Basangouda Patil Yatnal) ಅವರಿಗೆ ಕಾಂಗ್ರೆಸ್‍ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಎಚ್ಚರಿಕೆ ನೀಡಿದ್ದಾರೆ.
Advertisement
ದಾವಣಗೆರೆಯಲ್ಲಿ (Davanagere) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಸವಣ್ಣನವರ ಹೆಸರು ಬಳಸಿ ನೀಡಿದ್ದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ವಿಶ್ವಗುರು ಬಸವಣ್ಣನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಹುಷಾರ್. ನಿಮ್ಮ ಬಾಯಿಗೆ ನೀವೇ ಬೀಗ ಹಾಕಿಕೊಂಡರೆ ಒಳ್ಳೆಯದು. ಇಲ್ಲದೇ ಹೋದರೆ ನಾವೇ ಬೀಗ ಹಾಕುತ್ತೇವೆ ಎಂದು ಗುಡುಗಿದ್ದಾರೆ.
Advertisement
Advertisement
ಬಸವಣ್ಣ ಹೊಳೆಗೆ ಹಾರಿ ಸತ್ತರು ಎಂದು ಹೇಳುತ್ತೀರಿ. ಇನ್ನೊಂದೆಡೆ ವೀರಶೈವ ಮಹಾಸಭಾ ಎಂದರೆ ಭೀಮಣ್ಣ ಖಂಡ್ರೆ, ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಎನ್ನುತ್ತೀರಿ. ಮಹಾಸಭಾ ಎಂದರೆ ಏನೆಂದುಕೊಂಡಿದ್ದೀರಿ? ನಿಮ್ಮ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
Advertisement
ಬಸವಣ್ಣನವರು ಹೊಳೆಗೆ ಹಾರಿದರು ಎನ್ನುವ ನಿಮ್ಮನ್ನೇ ಹೊಳೆಗೆ ಹಾರಿಸಬೇಕಾಗುತ್ತದೆ. ನಿಮ್ಮ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.