– ಸಿದ್ದರಾಮಯ್ಯ ಒಳ್ಳೆಯ ಆಡಳಿತ ಮಾಡ್ತಿದ್ದಾರೆ
ದಾವಣಗೆರೆ: ಸಿಎಂ ಬದಲಾವಣೆ ಪ್ರಸಂಗ ಬಂದ್ರೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಕಾಂಗ್ರೆಸ್‍ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಬದಲಾವಣೆ ವಿಚಾರದ ಬಗ್ಗೆ ಸಚಿವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಸಿಎಂ ಸ್ಥಾನ ಖಾಲಿ ಇಲ್ಲ. ಆದರೆ ಲಿಂಗಾಯತ ಸಿಎಂ ಆಗಬೇಕು ಎಂದು ಬಂದರೆ ಸೆಡ್ಡು ಹೊಡೆಯುತ್ತೇವೆ ಎಂದಿದ್ದಾರೆ.
ಸಿದ್ದರಾಮಯ್ಯ (Siddaramaiah) ಒಳ್ಳೆಯ ಅಡಳಿತ ಮಾಡುತ್ತಿದ್ದಾರೆ. ಅವರ ಅವಧಿ ಮುಗಿದ ಮೇಲೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದಕ್ಕೂ ಮೊದಲು ನಮ್ಮ ಎಂಎಲ್‍ಎಗಳು ಯಾರನ್ನು ಆಯ್ಕೆ ಮಾಡ್ತಾರೋ ಅವರನ್ನು ಹೈಕಮಾಂಡ್ ಸಿಎಂ ಮಾಡ್ತಾರೆ. ಸಚಿವರಿಗೆ ಸಿಎಂ ಆಗಬೇಕು ಎನ್ನುವ ಆಸೆ ಜಾಸ್ತಿ ಇದೆ. ಆಸೆ ಇದ್ದವರಿಗೆ ನಿರಾಸೆ ಆಗಲಿದೆ. ಕೆಲವರು ಬಾಯಿಗೆ ಬಂದಂತೆ ಮಾತಾಡಿಕೊಂಡು ಹೋಗೋದ್ರಿಂದ ಏನು ಪ್ರಯೋಜನ ಆಗಲ್ಲ. ಅವರೇ ಹಗುರ ಆಗ್ತಾರೆ ಅಷ್ಟೇ ಎಂದು ಎಚ್ಚರಿಸಿದ್ದಾರೆ.
ಸಚಿವ ಎಂ.ಬಿ ಪಾಟೀಲ್, ರಾಯರೆಡ್ಡಿ, ಡಿಕೆಶಿ ಎಲ್ಲಾರೂ ರೇಸ್‍ನಲ್ಲಿ ಇದ್ದಾರೆ. ಹೆಸರು ಇದ್ದವರು ಇಲ್ಲದವರು ಕೂಡ ಸಿಎಂ ರೇಸ್‍ನಲ್ಲಿ ಇರ್ತಾರೆ. ರಾಜಕೀಯದಲ್ಲಿ ಜೂನಿಯರ್ ಸೀನಿಯರ್ ಎಂಬ ಪ್ರಶ್ನೆ ಬರೋದಿಲ್ಲ. ನಮ್ಮ ಕುರ್ಚಿ ಇನ್ನು ಐದು ವರ್ಷ ಭದ್ರವಾಗಿದೆ ಎಂದಿದ್ದಾರೆ.