ಧಾರವಾಡ: ತನ್ನ ವಿರುದ್ಧ ಮಾತನಾಡಿದ ಗೃಹ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಮತ್ತೆ ಕಿಡಿಕಾರಿ ತಿರುಗೇಟು ನೀಡಿದ್ದಾರೆ.
ಎಂ.ಬಿ ಪಾಟೀಲ್‍ಗೆ ಕೆಲವು ವಿಚಾರಗಳು ಗೊತ್ತಿಲ್ಲ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾನೆ. ಆತನನ್ನು ನಿರ್ಲಕ್ಷ್ಯ ಮಾಡಿ ಬಿಡಬೇಕು ಅಂತ ನಾವೆಲ್ಲ ನಿರ್ಧರಿಸಿದ್ದೇವೆ. ನಾನು ಹಿರಿಯನಾಗಿ ಮಾತನಾಡಿದ ಮಾತನ್ನು ಎಂ.ಬಿ ಪಾಟೀಲ್ ಸುಧಾರಿಸಿಕೊಳ್ಳಬೇಕಿತ್ತು. ಹಿಂದೆ ಎಂ.ಬಿ ಪಾಟೀಲ್ ಏನಾಗಿದ್ದ ಅಂತ ಗೊತ್ತಾ. ಅವನಿಗೆ ನಾನು ಹಾಗೂ ಪ್ರಭಾಕರ್ ಕೋರೆ ಅವರು ಬಹಳ ಸಹಾಯ ಮಾಡಿದ್ದೇವೆ ಅದನ್ನ ಅವನು ಮರೆತಿದ್ದಾನೆ ಎಂದು ಹೇಳಿದರು. ಇದನ್ನೂ ಓದಿ:ಅವನೊಬ್ಬ ಮಂಗ, ಅವನಿಗೇನು ಗೊತ್ತು; ಎಂ.ಬಿ ಪಾಟೀಲ್ ವಿರುದ್ಧ ಶಾಮನೂರು ಶಿವಶಂಕರಪ್ಪ ಕಿಡಿ
Advertisement
Advertisement
ನಾನು ಎಂ.ಬಿ ಪಾಟೀಲ್ ವಿಚಾರವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಈ ಬಗ್ಗೆ ಮಾತನಾಡಬಾರದು ಅಂತ ವಿಷಯವನ್ನು ಕೈಬಿಟ್ಟಿದ್ದೇನೆ ಎಂದರು. ಬಳಿಕ ನನಗೆ ಸಚಿವ ಸ್ಥಾನ ಏನೂ ಬೇಕಾಗಿಲ್ಲ. ಅದರ ಅಪ್ಪನಂಗೆ ನಾನು ಇದ್ದೇನೆ. ಸಚಿವ ಸ್ಥಾನಕ್ಕಿಂತ ಚೆನ್ನಾಗಿದ್ದೇನೆ. ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ವಿಚಾರ ಅವರಿಗೆ ಇರಲಿ ನಮಗೆ ಬೇಡ ಎಂದರು. ಇದನ್ನೂ ಓದಿ:ಮಾಜಿ ಸಚಿವ ಶಾಮನೂರು ವಿರುದ್ಧ ಎಂ.ಬಿ ಪಾಟೀಲ್ ಕಿಡಿ
Advertisement
Advertisement
ಬಿಜೆಪಿಯವರು ಸುಮ್ಮನೆ ಬಾಯಿ ಮಾತಿಗೆ ರೆರ್ಸಾಟ್ ರಾಜಕಾರಣ ಅಂತ ಹೇಳ್ತಾರೆ. ಬಿಜೆಪಿಯವರಿಂದ ಏನೂ ಆಗುವುದಿಲ್ಲ. ಅವರು ಏನು ಮಾಡಲ್ಲ. ನಮ್ಮ ಪಕ್ಷದಿಂದ ಯಾರೂ ಬಿಜೆಪಿಗೆ ಹೋಗುವುದಿಲ್ಲ. ಇದೆಲ್ಲ ಊಹೆ ಮಾತು ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ. ಶಾಮನೂರು ಶಿವಶಂಕರಪ್ಪ, ಎಂ.ಬಿ ಪಾಟೀಲ್, ಟಾಂಗ್, ಧಾರವಾಡ, ಪಬ್ಲಿಕ್ ಟಿವಿ,
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv