ಬೆಂಗಳೂರು: ಶಾಮನೂರು ಶಿವಶಂಕರಪ್ಪನವರು (Shamanur Shivashankarappa) ದೇಶಕ್ಕೆ ಒಂದೊಳ್ಳೆ ಸಂದೇಶ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರನ್ನು ಒಪ್ಪಿದ್ದಾರೆ. ಮೋದಿ ಮತ್ತೆ ಪ್ರಧಾನಿ ಆಗಬೇಕು ಅನ್ನೋದನ್ನ ಸೂಕ್ಷ್ಮವಾಗಿ ಹೇಳಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ (CT Ravi) ಶ್ಲಾಘಿಸಿದ್ದಾರೆ.
Advertisement
ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace Ground) ಬಿಜೆಪಿ ರಾಜ್ಯಘಟಕದ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಬಿಜೆಪಿ ನಾಯಕರ ಫ್ಲೆಕ್ಸ್, ಬ್ಯಾನರ್‌ಗಳ ಅಬ್ಬರ ಜೋರಾಗಿದ್ದು, ಅರಮನೆ ಮೈದಾನ ಕೇಸರಿ ಮಯವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮೊದಲ ಕಾರ್ಯಕಾರಿಣಿ ಸಭೆಯೂ ಇದಾಗಿದೆ. ಸಭೆಯಲ್ಲಿ ಮತ್ತೆ ಬಿಜೆಪಿ ಸೇರ್ಪಡೆಯಾದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಭೂಪೇಂದ್ರ ಯಾದವ್, ಭಗವಂತ ಖೂಬಾ, ನಾರಾಯಣ ಸ್ವಾಮಿ, ಹಾಲಿ-ಮಾಜಿ ಸಂಸದರು, ಶಾಸಕರು, ಪರಿಷತ್ ಸದಸ್ಯರು, ಪಕ್ಷದ ಪ್ರಮುಖರು, ಪದಾಧಿಕಾರಿಗಳು 900ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
Advertisement
Advertisement
ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ ಅವರು ಬಿ.ವೈ ರಾಘವೇಂದ್ರ (BY Raghavendra) ಅವರನ್ನು ಗೆಲ್ಲಿಸಬೇಕು ಎನ್ನುವ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: Loksabha Elections: ಬಿಜೆಪಿ ರಾಜ್ಯವಾರು ಚುನಾವಣಾ ಉಸ್ತುವಾರಿಗಳ ಪಟ್ಟಿ ಪ್ರಕಟ
Advertisement
ಶಾಮನೂರು ಶಿವಶಂಕರಪ್ಪನವರು ದೇಶಕ್ಕೆ ಒಂದೊಳ್ಳೆ ಸಂದೇಶ ಕೊಟ್ಟಿದ್ದಾರೆ. ದೇಶದ ಹಿತದೃಷ್ಟಿಯಿಂದ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕು ಎಂಬ ಸಂದೇಶ ಕೊಟ್ಟಿದ್ದಾರೆ. ಅವರ ಹೇಳಿಕೆಯನ್ನ ಸ್ವಾಗತ ಮಾಡ್ತೀನಿ ಎಂದಿದ್ದಾರೆ.
ಶಾಮನೂರು ಅವರು ಮೋದಿಯನ್ನು ಒಪ್ಪಿದ್ದಾರೆ. ಮತ್ತೆ ಮೋದಿ (Narendra Modi) ಪ್ರಧಾನಿ ಆಗಲಿ ಎಂಬುದನ್ನ ಪರೋಕ್ಷವಾಗಿ ಮತ್ತು ಅಷ್ಟೇ ಸೂಕ್ಮವಾಗಿ ಹೇಳಿದ್ದಾರೆ. ಶಾಮನೂರು ಅವರ ಹೇಳಿಕೆಯಂತೆ ಮೋದಿಗೆ ಎಲ್ಲರೂ ಮತ ಹಾಕಬೇಕು, ಬಿಜೆಪಿಯನ್ನ ಗೆಲ್ಲಿಸಬೇಕು. ಅಭಿವೃದ್ಧಿ ಆಗಬೇಕು ಎಂದರೆ ಮೋದಿ ಬೇಕು. ಹಾಗಾಗಿ ಪ್ರತಿಯೊಬ್ಬರೂ ಬಿಜೆಪಿಗೆ ಮತ ಹಾಕಿ, ಮೋದಿಯನ್ನ ಮತ್ತೊಮ್ಮೆ ಪ್ರಧಾನಿ ಮಾಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಯತ್ನಾಳ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಗೆ ನೋಟಿಸ್; ಕೇಸ್ ದಾಖಲಿಸಿ ಕ್ರಮಕ್ಕೆ ಸೂಚನೆ!
ಲಕ್ಷ್ಮಣ ಸವದಿ ಸಹ ಬಿಜೆಪಿಗೆ ಬರ್ತಾರಾ ಅನ್ನೋ ಹೇಳಿಗೆ ಪ್ರತಿಕ್ರಿಯಿಸಿ, ಲಕ್ಷ್ಮಣ ಸವದಿ ಜೊತೆಗೆ ಸ್ನೇಹ ಇದೆ. ಅವರು ನಮ್ಮ ಪಕ್ಷವನ್ನ ಬಿಟ್ಟಿದ್ದಾರೆಯೇ ಹೊರತು ಸ್ನೇಹ ಬಿಟ್ಟಿಲ್ಲ. ಅವರು ಪಾರ್ಟಿ ಬಿಡುವಾಗ, ಬೇಡ ಎಂದು ಹೇಳಿದ್ದೆ. ಮುಂದೆ ಅವರಿಗೆ ಪಶ್ಚಾತಾಪಾ ಆದಾಗ, ಕಾಲ ಕೂಡಿಬಂದಾಗ ಅವರೇ ಬರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್ – ಕೇಜ್ರಿವಾಲ್ ಹೊಸ ಬಾಂಬ್