ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‍ನಲ್ಲಿ ಬ್ರೋ ಗೌಡ ಫುಲ್ ಮಿಂಚಿಂಗ್

Public TV
2 Min Read
shamanth

ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಖ್ಯಾತಿಯ ಬ್ರೋ ಗೌಡ ಶಮಂತ್ ಸದಾ ವಿಭಿನ್ನವಾದ ಲುಕ್‍ನಲ್ಲಿ ಆಗಾಗ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಮಿಂಚುತ್ತಿದ್ದಾರೆ.

shamanth

ಬಿಗ್‍ಬಾಸ್ ಸೀಸನ್-8 ಆರಂಭದಿಂದ ಕೊನೆಯವರೆಗೂ ಸದಾ ವೆರೈಟಿ ಡ್ರೆಸ್‍ಗಳನ್ನು ತೊಡುವ ಮೂಲಕ ಶಮಂತ್ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದರು. ಅಲ್ಲದೇ ಬಿಗ್‍ಬಾಸ್ ವಾರದ ಪಂಚಾಯತಿ ಕಟ್ಟೆಯಲ್ಲಿ ಶಮಂತ್ ಹೇರ್ ಸ್ಟೈಲ್ ಹಾಗೂ ಉಡುಪಿನ ಬಗ್ಗೆ ಹಲವು ಭಾರೀ ಚರ್ಚೆಗಳು ಕೂಡ ನಡೆದಿದೆ. ಜೊತೆಗೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ವೇಳೆ ವೇದಿಕೆ ಮೇಲೆ ಎಂಟ್ರಿ ಕೊಟ್ಟಾಗ ಶಮಂತ್ ಧರಿಸಿದ್ದ ಯೆಲ್ಲೋ ಡ್ರೆಸ್ ಭಾರೀ ಸದ್ದು ಮಾಡಿತ್ತು. ಇದನ್ನೂ ಓದಿ: ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದ ಬ್ರೊ ಗೌಡ

ಬಿಗ್‍ಬಾಸ್ ನಂತರ ಇತ್ತೀಚೆಗಷ್ಟೇ ಕೆಂಪು ಬಣ್ಣದ ನ್ಯೂ ಸ್ಟೈಲ್ ಕುರ್ತಾ ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದ ಶಮಂತ್ ಇದೀಗ ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್ ತೊಟ್ಟು ಫೋಟೋಗೆ ಪೋಸ್ ಕೊಡುತ್ತಾ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಫೋಟೋವನ್ನು ಶಮಂತ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಅರ್ಧ ಭಾಗ ಕಪ್ಪು ಹಾಗೂ ಇನ್ನೂ ಅರ್ಧ ಭಾಗ ಬಿಳಿ ಬಣ್ಣದ ಜಾಕೆಟ್ ಧರಿಸಿದ್ದಾರೆ. ಜೊತೆಗೆ ಅದಕ್ಕೆ ಸೂಟ್ ಆಗುವಂತೆ ಅರ್ಧ ಭಾಗ ಬಿಳಿ ಮತ್ತೆ ಅರ್ಧ ಭಾಗ ಕಪ್ಪು ಬಣ್ಣದ ಪ್ಯಾಂಟ್‍ನನ್ನು ಧರಿಸಿದ್ದಾರೆ. ಅಷ್ಟಲ್ಲದೇ ಬ್ಲಾಕ್ ಆ್ಯಂಡ್ ವೈಟ್ ಜೀವನ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಸೀಸನ್-15 – 350 ಕೋಟಿ ಸಂಭಾವಣೆ ಪಡೆಯಲಿದ್ದಾರೆ ಸಲ್ಮಾನ್ ಖಾನ್!

ಒಟ್ಟಾರೆ ಶಮಂತ್ ಹೊಸ ಡ್ರೆಸ್‍ಗೆ ಕೆಲವರು ಸೂಪರ್ ಅಂತ ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಜಾತ್ರೆಯಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Share This Article