ಬೆಂಗಳೂರು: ಶಕ್ತಿ ಯೋಜನೆಯಲ್ಲಿ(Shakti Scheme) ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. 5 ವರ್ಷ ಯೋಜನೆ ಮುಂದುವರೆಯಲಿದೆ. ಮುಂದಿನ ಅವಧಿಯಲ್ಲಿ ಕಾಂಗ್ರೆಸ್ (Congress) ಮತ್ತೆ ಅಧಿಕಾರಕ್ಕೆ ಬರುತ್ತದೆ ಅಗಲೂ ಶಕ್ತಿ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.
ಅಶ್ವಮೇಧ ಕ್ಲಾಸಿಕ್ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿಯಿಂದ(KSRTC)100 ಹೊಸ ಬಸ್ ಗೆ ಚಾಲನೆ ನೀಡ್ತಿದ್ದೇವೆ, ಏಪ್ರಿಲ್ ಹೊತ್ತಿದೆ 1000 ಬಸ್ ಬರಲಿದೆ. ಶಕ್ತಿ ಯೋಜನೆ ಬಂದಾಗಿನಿಂದ 1 ಕೋಟಿ 10 ಲಕ್ಷ ಜನ ನಿತ್ಯ 4 ನಿಗಮದಿಂದ ಓಡಾಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ಶಕ್ತಿಯಿಂದ ಸಮಸ್ಯೆ ಆಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದರು. ಇದನ್ನೂ ಓದಿ: ನಮ್ಮ ಗ್ಯಾರಂಟಿಗಳನ್ನು ನೋಡಿಕೊಂಡು ಬಿಜೆಪಿ ಮೋದಿ ಗ್ಯಾರಂಟಿ, ಮೋದಿ ಗ್ಯಾರಂಟಿ ಅಂತಾರೆ: ಸಿದ್ದರಾಮಯ್ಯ
Advertisement
Advertisement
Advertisement
4 ವರ್ಷಗಳಿಂದ ಒಂದು ಬಸ್ ಖರೀದಿ ಮಾಡಿರಲಿಲ್ಲ. ನಾವು ಈಗ ಸುಮಾರು 5 ಸಾವಿರ ಬಸ್ ಗಳು ಖರೀದಿಗೆ ನಿರ್ಧಾರ ಮಾಡುತ್ತಿದ್ದೇವೆ. ಹಿಂದಿನ ಸರ್ಕಾರದಲ್ಲಿ ಖಾಲಿ ಹುದ್ದೆ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ 9 ಸಾವಿರ ಹುದ್ದೆ ನೇಮಕಕ್ಕೆ ಸಿಎಂ ಒಪ್ಪಿದ್ದಾರೆ. ಪ್ರಕ್ರಿಯೆ ಶುರುವಾಗಿದೆ. ಆದಷ್ಟು ಬೇಗ 9 ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ. ಇಲ್ಲಿಯವರಗೆ 146 ಕೋಟಿ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಓಡಾಡಿದ್ದಾರೆ. ಶಕ್ತಿ ಯೋಜನೆ ಯಶಸ್ವಿಯಾಗಿದೆ. ಬಿಜೆಪಿಗಿಂತ ಉತ್ತಮವಾಗಿ ಇಲಾಖೆ ನಾವು ನಡೆಸಿದ್ದೇವೆ. ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಶಕ್ತಿ ಯೋಜನೆ ಮುಂದೆವರೆಸುತ್ತೇವೆ ಎಂದು ಹೇಳಿದರು.
Advertisement