ಬೆಂಗಳೂರು: ಕ್ರಿಸ್ಮಸ್ ಗೆ ಕೇವಲ ಎರಡೇ ದಿನಗಳು ಬಾಕಿ ಉಳಿದಿವೆ. ಕ್ರಿಸ್ಮಸ್ ಅಂದಾಕ್ಷಣ ನೆನಪಾಗೋದು ಕೇಕ್ ಶೋ (Cake Show). ಸಿಲಿಕಾನ್ ಸಿಟಿಯಲ್ಲಿ ಕೇಕ್‍ಗಳ ಲೋಕ ಧರೆಗಿಳಿದಿದ್ದು, ಎಲ್ಲರನ್ನೂ ಕೈ ಬೀಸಿ ಕರೆಯುತ್ತಿವೆ.
Advertisement
ಹೌದು. ಕ್ರಿಸ್ಮಸ್ (Christmas) ಹಾಗೂ ನ್ಯೂ ಇಯರ್ (New Year) ಅನ್ನು ಬರ ಮಾಡಿಕೊಳ್ಳೋಕೆ ಬೆಂಗಳೂರಿಗರು ಸಜ್ಜಾಗಿದ್ದಾರೆ. ಕ್ರಿಸ್ಮಸ್ ಹಬ್ಬದ ಅಂದ ತಕ್ಷಣ ಬೆಂಗಳೂರಿಗರಿಗೆ ನೆನಪಾಗೋದು ಕೇಕ್ ಶೋ. ಪ್ರತಿ ವರ್ಷದಂತೆ ಈ ವರ್ಷವೂ ಸಂತ ಜೋಸೆಫ್ ಸ್ಕೂಲ್ ಗ್ರೌಂಡ್ ನ ಆವರಣದಲ್ಲಿ 49ನೇ ವರ್ಷದ ಕೇಕ್ ಶೋ ಆರಂಭವಾಗಿದೆ. ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ ಸಂಸ್ಥೆಯ ವಿದ್ಯಾರ್ಥಿಗಳು ಕೇಕ್‍ಗೆ ಕಲಾ ರೂಪ ಕೊಟ್ಟಿದ್ದು, ಸುಮಾರು 25 ಕೇಕ್ ನ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಪ್ರಮುಖವಾಗಿ ಈ ಬಾರಿ ಸರ್ಕಾರದ ಪ್ರಮುಖ ಗ್ಯಾರಂಟಿಯಾದ ಶಕ್ತಿ ಯೋಜನೆ (Shakti Scheme), ಮಹಿಳೆಯರ ಉಚಿತ ಪ್ರಯಾಣದ ಫ್ರೀ ಬಸ್, ಸಂಸತ್ತು ಭವನ, ದುರ್ಗ ದೇವಿ, ಚಂದ್ರಯಾನ (Chandrayaan), ಶಿವಾಜಿ, ಶಾಂಪಿಗ್ ಒಂಟೆ, ಜಿರಾಫೆ ಹೀಗೆ ಹಲವು ಚಿತ್ರಣಗಳು ಕೇಕ್ ನಲ್ಲಿ ಮೂಡಿ ಬಂದಿವೆ. ಶಕ್ತಿ ಯೋಜನೆಯ ಕೇಕ್ ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವೀಕ್ಷಿಸಿದ್ರು.
Advertisement
Advertisement
ಒಂದಕ್ಕಿಂತ ಒಂದು ನೈಜತೆಯನ್ನೇ ಹೋಲುವ ಈ ಕೇಕ್ ಆರ್ಟ್ ಗಳು ಜನರನ್ನು ಆಕರ್ಷಿಸುವಂತಿವೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವೀಕ್ಷಿಸಲು ಅವಕಾಶವಿದೆ. ಈ ಶೋವನ್ನು ಮಕ್ಕಳು,ಮಹಿಳೆಯರು ನೋಡಿ ಪುಲ್ ಖುಷ್ ಆಗಿದ್ದಾರೆ. ಒಟ್ಟಿನಲ್ಲಿ ಈ ಕೇಕ್ ಶೋ ಕಣ್ಣಿಗೆ ಮುದ ನೀಡುವ ಜೊತೆಗೆ ಪ್ರಸ್ತುತ ವಿದ್ಯಮಾನಗಳನ್ನು ಮಕ್ಕಳಿಗೆ ತಿಳಿಸಿಕೊಡ್ತಿವೆ. ಇದನ್ನೂ ಓದಿ: ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ – ಮಾಸ್ಕ್ ಮರೆತ ಜನ