ಗದಗ: ಶಕ್ತಿ ಯೋಜನೆಯಿಂದ (Shakti Scheme) ಬಸ್ (Bus) ಫುಲ್ ರಶ್ ಆಗಿದ್ದು, ಹತ್ತುವ ವೇಳೆ ನೂಕುನುಗ್ಗಲಿನಿಂದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದು ಗಾಯಗೊಂಡ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಶ್ರಾವಣ ಮಾಸದ ಕೊನೆಯ ವಾರದ ಸಂದರ್ಭದಲ್ಲಿ ದೇವಸ್ಥಾನಕ್ಕೆ ತೆರಳುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಬಸ್‌ಗಳೆಲ್ಲಾ ಫುಲ್ ರಶ್ ಆಗುತ್ತಿವೆ. ಈ ಸಂದರ್ಭದಲ್ಲಿ ಲಕ್ಷ್ಮೇಶ್ವರದಿಂದ ಗದಗ ಮಾರ್ಗವಾಗಿ ಯಲಬುರ್ಗಾ ತೆರಳುತ್ತಿದ್ದ ಮಹಿಳೆ ಹುಸೇನಬಿ ಅಲಿಸಾಬ್ ಬಳಿಗಾತಗೆ ಗಾಯವಾಗಿದೆ. ಇದನ್ನೂ ಓದಿ: ರೈಲು ಪ್ರಯಾಣದ ವೇಳೆ 8 ಯುವಕರಿಗೆ ಮತ್ತು ಬರೋ ಚಾಕ್ಲೇಟ್ ನೀಡಿ ದರೋಡೆ
Advertisement
Advertisement
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದ ನಿವಾಸಿ ಲಕ್ಷ್ಮೇಶ್ವರ ದೂದಪೀರ ನಾನ ದರ್ಗಾಗೆ ಬಂದಿದ್ದರು. ಬಸ್ ರಶ್ ಇದ್ದರೂ ಚಲಿಸುವ ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ. ಆದರೆ ಸ್ವಲ್ಪದರಲ್ಲೇ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
ಗಾಯಾಳು ಮಹಿಳೆಯನ್ನು ಕೂಡಲೆ ಲಕ್ಷ್ಮೇಶ್ವರ ತಾಲೂಕಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವಿಚ್ಛೇದಿತ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ – ಆರೋಪಿಗೆ ಗುಂಡು ಹಾರಿಸಿ ಅರೆಸ್ಟ್
Advertisement
Web Stories