ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Guarantee) ದ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ ಇಂದು ಚಾಲನೆ ದೊರಕಿದ್ದು, ಮೊದಲ ಬಸ್ ಮಂಜುನಾಥನ ಸನ್ನಿಧಿ ಧರ್ಮಸ್ಥಳ (First Bus To Dharmasthala) ಕ್ಕೆ ತೆರಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಧರ್ಮಸ್ಥಳಕ್ಕೆ ಹೊರಡುವ ಬಸ್ಸಿಗೆ ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿಯಲ್ಲಿ ಚಾಲನೆ ನೀಡುವ ಮೂಲಕ ‘ಶಕ್ತಿ’ ಯೋಜನೆಯನ್ನು ರಾಜ್ಯದಲ್ಲಿ ಪ್ರಾರಂಭಿಸಿದರು. ಎರಡನೇ ಬಸ್ ಮೈಸೂರು ಕಡೆಗೆ ತೆರಳಿದ್ದು, ಮೂರನೇ ಬಸ್ ಕಲಬುರುಗಿ ಹಾಗೂ ನಾಲ್ಕನೇ ಬಸ್ ಬೆಳಗಾವಿ ಕಡೆಗೆ ಹೊರಟಿದೆ. ಇದನ್ನೂ ಓದಿ: ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ: ಸಿದ್ದರಾಮಯ್ಯ ಶಪಥ
Advertisement
Advertisement
ಎಲ್ಲರ ಪ್ರಯಾಣ ಸುಖವಾಗಿರಲಿ ಎಂದು ವಿಷ್ ಮಾಡಿ ಸ್ವೀಟ್ ಹಂಚಿಕೆ ಮಾಡಲಾಯಿತು. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಮೆಜೆಸ್ಟಿಕ್ ನತ್ತ ಪ್ರಯಾಣ ಬೆಳೆಸಿದರು. ಇಂದು ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಕ್ಕಿದೆ. 18,609 ಬಸ್‍ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ. 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಫಲಾನುಭವಿಗಳು ಎಂದು ಅಂದಾಜಿಸಲಾಗಿದೆ.