ಮುಂಬೈ: ಬಿಟೌನ್ ಬೆಡಗಿ ಶ್ರದ್ಧಾ ಕಪೂರ್ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಸದ್ಯ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಈ ಸುದ್ದಿ ಕೇಳಿ ಸ್ವತಃ ಶ್ರದ್ಧಾರ ತಂದೆ ಶಕ್ತಿ ಕಪೂರ್ ಶಾಕ್ ಆಗಿದ್ದು, ಮದುವೆಗೆ ನನ್ನನ್ನು ಕರೆಯಲು ಮರೆಯಬೇಡಿ ಎಂದಿದ್ದಾರೆ.
Advertisement
ಹೌದು, ಸದ್ಯ ಬಾಲಿವುಡ್ ನಲ್ಲಿ ಶ್ರದ್ಧಾರ ಮದುವೆ ವಿಚಾರ ಸುದ್ದಿಯಲ್ಲಿದೆ. ಖ್ಯಾತ ಫೋಟೋಗ್ರಾಫರ್ ರೋಹನ್ ಶ್ರೇಷ್ಠ ಜೊತೆಗೆ ಶ್ರದ್ಧಾ ಡೇಟಿಂಗ್ ಮಾಡುತ್ತಿದ್ದಾರೆ, 2020ರಲ್ಲಿ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.
Advertisement
Advertisement
ಈ ಬಗ್ಗೆ ಶಕ್ತಿ ಕಪೂರ್ ಪ್ರತಿಕ್ರಿಯಿಸಿ, “ನಿಜವೇ? ನನ್ನ ಮಗಳು ಮದುವೆಯಾಗುತ್ತಿದ್ದಾಳಾ? ಮದುವೆಗೆ ನನ್ನನ್ನು ಕರೆಯಲು ಮರೆಯಬೇಡಿ. ಮದುವೆ ಎಲ್ಲಿ ಎಂದು ಮೊದಲೇ ತಿಳಿಸಿ. ನಾನೂ ಬರುತ್ತೇನೆ. ನಾನು ಆಕೆಯ ತಂದೆಯಾಗಿದ್ದರೂ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿ ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ.
Advertisement
ಈ ಹಿಂದೆ ಕೂಡ ಶ್ರದ್ಧಾರ ಮದುವೆ ವಿಚಾರದ ಬಗ್ಗೆ ಶಕ್ತಿ ಕಪೂರ್ ಮಾತನಾಡಿ, ತಮ್ಮ ಮಗಳು ಒಳ್ಳೆಯ ಕುಟುಂಬಕ್ಕೆ ಸೊಸೆಯಾಗಿ ಹೋಗಬೇಕೆಂದು ಪ್ರತಿ ತಂದೆಗೂ ಆಸೆ ಇರುತ್ತದೆ. ನನಗೂ ಈ ಆಸೆ ಇದೆ. ಆದರೆ ಈಗ ನನ್ನ ಮಕ್ಕಳ ವಿಚಾರದಲ್ಲಿ ನಾನು ಮೂಗು ತೂರಿಸದಿರುವುದೇ ಒಳ್ಳೆಯದು. ಯಾಕೆಂದರೆ ತಂದೆ-ತಾಯಿ ತೋರಿಸಿದವರನ್ನು ಮಕ್ಕಳು ಮದುವೆಯಾಗುವ ಸ್ಥಿತಿ ಈಗಿಲ್ಲ. ಇಷ್ಟವಾದ ಹುಡುಗನನ್ನೇ ಶ್ರದ್ಧಾ ಮದುವೆಯಾಗಲಿ, ನನ್ನದೇನು ಅಡ್ಡಿಯಿಲ್ಲ ಎಂದು ಹೇಳಿಕೆ ನೀಡಿದರು.
ಇಷ್ಟೆಲ್ಲಾ ಗಾಸಿಪ್ ಹರಿದಾಡುತ್ತಿದ್ದರೂ ಕೂಡ ಶ್ರದ್ಧಾ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಸ್ಟ್ರೀಟ್ ಡ್ಯಾನ್ಸರ್ 3ಡಿ, ಬಾಘಿ 3 ಚಿತ್ರಗಳಲ್ಲಿ ಶ್ರದ್ಧಾ ಬ್ಯುಸಿಯಾಗಿದ್ದು, ಶ್ರದ್ಧಾ ನಟಿಸಿರುವ ಬಹುನಿರೀಕ್ಷಿತ ಸಿನಿಮಾ `ಸಾಹೋ’ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.