ಶಕ್ತಿ ಯೋಜನೆ ಪರಿಣಾಮ – ರಾಜ್ಯದ ದೇವಾಲಯಗಳಿಗೆ ಡಬಲ್ ಆದಾಯ

Public TV
4 Min Read
chamundi Temple 3

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ಬಂದಿರುವುದು ಶಕ್ತಿ ಯೋಜನೆ. ಈ ಯೋಜನೆಗೆ ಅಭೂತಪೂರ್ವ ಮಹಿಳಾ ಬೆಂಬಲ ದೊರೆತಿದ್ದು ಉಚಿತ ಪ್ರಯಾಣದ ಕಾರಣದಿಂದ ದೇವಾಲಯಗಳ (Temple) ಆದಾಯವೂ ಹೆಚ್ಚಾಗಿದೆ. ಪ್ರವಾಸಿ ತಾಣಗಳು ಸಹ ರಶ್ ಆಗುತ್ತಿವೆ. ಶಕ್ತಿ ಯೋಜನೆಯಿಂದ (Shakti Scheme) ದೇವಾಲಯಗಳಿಗೆ ಹರಿದು ಬರುತ್ತಿರುವ ಆದಾಯ ದ್ವಿಗುಣಗೊಂಡಿದೆ.

ರಾಜ್ಯ ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಗೆ ಬಂದು ಮೂರು ತಿಂಗಳಾಗಿದೆ. ಸಾರಿಗೆ ನಿಗಮಗಳ ಬಸ್‌ನಲ್ಲಿ ಉಚಿತ ಪ್ರಯಾಣದ ಲಾಭವನ್ನ ಮಹಿಳೆಯರು ಬಹಳ ಸಂತೋಷದಿಂದ ಅನುಭವಿಸುತ್ತಿದ್ದಾರೆ. ಉಚಿತ ಪ್ರಯಾಣದಿಂದಾಗಿ ಸಾರಿಗೆ ನಿಗಮಕ್ಕೆ ಮಾತ್ರವಲ್ಲ ಪ್ರವಾಸಿ ತಾಣಗಳಿಗೂ ಲಾಭ ಶುರುವಾಗಿದೆ. ಇದನ್ನೂ ಓದಿ: ಹಾವೇರಿಯಲ್ಲಿ ಮಕ್ಕಳ ಬಿಸಿಯೂಟಕ್ಕೆ ರೇಷನ್ ವ್ಯತ್ಯಯ – ಸ್ವಂತ ಹಣ ಬಳಸಿ ಶಿಕ್ಷಕರಿಂದ ರೇಷನ್ ಖರೀದಿ

ckb hundi

ಶಕ್ತಿ ಯೋಜನೆಯಿಂದ ಭಗವಂತನ ಖಜಾನೆಗೆ ಕೋಟಿ ಕೋಟಿ ಕಾಸು ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಯಾಗಿ ಇದೇ ಮೊದಲ ಬಾರಿಗೆ ಹುಂಡಿ ಹಣ ಲೆಕ್ಕ ಹಾಕಲಾಗಿದೆ. ಅಲ್ಲದೆ ಜೂನ್ 11 ರಿಂದ ಜುಲೈ 15ರ ವರೆಗಿನ ತಮ್ಮ ವ್ಯಾಪ್ತಿಯ ದೇವಾಲಯಗಳ ಹುಂಡಿ ಹಣ ತುಲನೆ ಮಾಡಿದೆ ಮುಜರಾಯಿ ಇಲಾಖೆ. ಈ ವೇಳೆ 2022ರ ಇದೇ ಅವಧಿಗಿಂತ ಈ ಬಾರಿಯ ಅವಧಿಯಲ್ಲಿ ಹೆಚ್ಚು ಗಳಿಕೆಯಾಗಿರುವ ಮಾಹಿತಿ ಗೊತ್ತಾಗಿದೆ. 2022ರ ಜೂನ್ 11 – ಜುಲೈ 15ರ ಅವಧಿಯಲ್ಲಿ 29.68 (29,68,97,550) ಕೋಟಿ ರೂಪಾಯಿ ಆದಾಯ ಬಂದಿತ್ತು. ಆದರೆ ಈ ಬಾರಿಯ ಜೂನ್ 11 – ಜುಲೈ 15ರ ಅವಧಿಯಲ್ಲಿ 39.43 (39,43,60,764) ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹತ್ತು ಕೋಟಿ ಹೆಚ್ಚಿನ ಆದಾಯ ಸಂಗ್ರಹ ದೇವಾಲಯಗಳಲ್ಲಾಗಿದೆ.

ಜೊತೆಗೆ ಈ ಅವಧಿಯಲ್ಲಿ ಜನರ ಭೇಟಿ ಕೂಡ ಹೆಚ್ಚಳವಾಗಿದ್ದು, ಕಳೆದ ಬಾರಿಗಿಂತ 30% ಜನರ ಸಂಖ್ಯೆ ಏರಿಕೆ ಕಂಡಿದೆ. 2022 ಜೂನ್ 11 ರಿಂದ ಜುಲೈ 15ರ ವರೆಗೆ ರಾಜ್ಯದ ಮುಜರಾಯಿ ದೇವಸ್ಥಾನಗಳಿಗೆ 81.26 ಲಕ್ಷ ಭಕ್ತರು ಭೇಟಿ ಮಾಡಿದ್ದರೆ, 2023 ಜೂನ್ 11 ರಿಂದ ಜುಲೈ 15ರ ವರೆಗೆ 1.42 ಕೋಟಿ ಮಂದಿ ರಾಜ್ಯದ ಮುಜರಾಯಿ ವ್ಯಾಪ್ತಿಗೆ ಸೇರಿದ ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆದಿದ್ದಾರೆ. ಈ ಮೂಲಕ ಕೋಟ್ಯಂತರ ಆದಾಯ ಹರಿದು ಬಂದಿದೆ. ಇದನ್ನೂ ಓದಿ: ಮೈಸೂರಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ – ನಾಲ್ವರ ವಿರುದ್ಧ ಎಫ್‌ಐಆರ್

FREE BUS 1

ಯಾವ ದೇವಾಲಯಕ್ಕೆ ಎಷ್ಟು ಆದಾಯ?
ಶ್ರೀ ಭಗಂಡೇಶ್ವರ & ತಲಕಾವೇರಿ ದೇವಾಲಯ, ಭಾಗಮಂಡಲ, ಕೊಡಗು:
2022, ಜೂನ್ 11 ರಿಂದ ಜುಲೈ 15 – 6,13,94,492 ರೂ. ಆದಾಯ – 37,94,022 ಭಕ್ತರು.
2023, ಜೂನ್ 11 ರಿಂದ ಜುಲೈ 15 – 7,79,24,065 ರೂ. – 51,40,857 ಭಕ್ತರು.

ಚಾಮುಂಡೇಶ್ವರಿ ದೇವಾಲಯ, ಮೈಸೂರು:
2022, ಜೂನ್ 11 ರಿಂದ ಜುಲೈ 15 – 48,01,914 ರೂ. – 4,93,530 ಭಕ್ತರು.
2023, ಜೂನ್ 11 ರಿಂದ ಜುಲೈ 15 – 3,63,05,672 ರೂ. – 5,97,370 ಭಕ್ತರು.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ದಕ್ಷಿಣ ಕನ್ನಡ:
2022, ಜೂನ್ 11 ರಿಂದ ಜುಲೈ 15 – 11,13,92,705 ರೂ. – 6,95,800 ಭಕ್ತರು.
2023, ಜೂನ್ 11 ರಿಂದ ಜುಲೈ 15 – 11,66,40,265 ರೂ. – 9,68,450 ಭಕ್ತರು.

ಕಟ್ಟ ಬಸವೇಶ್ವರ ದೇವಸ್ಥಾನ, ಎತ್ತಿನಬೂದಿಹಾಳ, ಬಳ್ಳಾರಿ ಜಿಲ್ಲೆ:
2022, ಜೂನ್ 11 ರಿಂದ ಜುಲೈ 15 – 1,02,75,761 ರೂ. – 4,58,330 ಭಕ್ತರು.
2023, ಜೂನ್ 11 ರಿಂದ ಜುಲೈ 15 – 1,41,00,163 ರೂ. – 4,90,830 ಭಕ್ತರು.

ಘಾಟಿ ಸುಬ್ರಮಣ್ಯ ದೇವಾಲಯ, ದೊಡ್ಡಬಳ್ಳಾಪುರ:
2022, ಜೂನ್ 11 ರಿಂದ ಜುಲೈ 15 – 1,18,18,433 ರೂ. – 66,000 ಭಕ್ತರು.
2023, ಜೂನ್ 11 ರಿಂದ ಜುಲೈ 15 – 93,48,186 ರೂ. – 81,000 ಭಕ್ತರು.

ಬಪ್ಪನಾಡು ದೇವಸ್ಥಾನ, ಮುಲ್ಕಿ, ದಕ್ಷಿಣ ಕನ್ನಡ:
2022, ಜೂನ್ 11 ರಿಂದ ಜುಲೈ 15 – 1,62,07,103 ರೂ. – 25,000 ಭಕ್ತರು.
2023, ಜೂನ್ 11 ರಿಂದ ಜುಲೈ 15 – 1,86,06,514 ರೂ. – 30,000 ಭಕ್ತರು.

ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು, ಮೈಸೂರು:
2022, ಜೂನ್ 11 ರಿಂದ ಜುಲೈ 15 – 1,05,82,075 ರೂ. – 15,650 ಭಕ್ತರು.
2023, ಜೂನ್ 11 ರಿಂದ ಜುಲೈ 15 – 1,12,70,814 ರೂ. – 20,110 ಭಕ್ತರು.

ಶ್ರೀಬನಶಂಕರಿ ದೇವಾಲಯ ಬೆಂಗಳೂರು:
2022, ಜೂನ್ 11 ರಿಂದ ಜುಲೈ 15 – 65,28,526 ರೂ. – 75,000 ಭಕ್ತರು.
2023, ಜೂನ್ 11 ರಿಂದ ಜುಲೈ 15 – 83,64,052 ರೂ. – 1,00,000 ಭಕ್ತರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article