ಕೊಲಂಬೊ: ನಿದಾಸ್ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾ ನಡುವಿನ ಪಂದ್ಯದ ವೇಳೆ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಡ್ರೆಸ್ಸಿಂಗ್ ರೂಮ್ ಗ್ಲಾಸ್ ಡೋರ್ ಒಡೆದಿದ್ದಾರೆ ಎಂದು ಶ್ರೀಲಂಕಾ ಮಾಧ್ಯಮವೊಂದು ವರದಿ ಮಾಡಿದೆ.
ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸಿದ್ದ ಕ್ರಿಸ್ ಬ್ರಾಡ್ ಪಂದ್ಯ ನಂತರ ಉಂಟಾದ ಅನುಚಿತ ವರ್ತನೆ ಕುರಿತು ಮೈದಾನದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಅಲ್ಲದೇ ಘಟನೆಯನ್ನು ಕಣ್ಣರೇ ಕಂಡಿದ್ದ ಕ್ರೀಂಡಾಗಣದ ಸಿಬ್ಬಂದಿ ಹೇಳಿಕೆ ಪಡೆದು, ಸಿಸಿಟಿವಿ ದೃಶ್ಯಗಳನ್ನು ಪರೀಶಿಲನೆ ನಡೆಸಲಾಗಿತ್ತು. ಈ ವೇಳೆ ಬಾಂಗ್ಲಾ ನಾಯಕ ಶಕೀಬ್ ಬದಲವಂತವಾಗಿ ರೂಮ್ ನ ಬಾಗಿಲನ್ನು ತಳ್ಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
Advertisement
ಪಂದ್ಯದ ವೇಳೆ ಮೈದಾನದಲ್ಲಿ ಅನುಚಿತ ವರ್ತನೆ ತೋರಿದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಹಾಗೂ ನುರುಲ್ ಹಸನ್‍ಗೆ ಐಸಿಸಿ ಪಂದ್ಯ ಶುಲ್ಕದಲ್ಲಿ ಶೇ.25ರಷ್ಟು ದಂಡ ಹಾಗೂ ಇಬ್ಬರು ಆಟಗಾರಿಗೂ ತಲಾ ಒಂದು ಡಿಮೆರಿಟ್ ಅಂಕ ನೀಡಿತ್ತು. ಇದನ್ನು ಓದಿ: ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!
Advertisement
ಪಂದ್ಯದ ಅಂತಿಮ ಓವರ್ ವೇಳೆ ಬಾಂಗ್ಲಾದ ಮಹಮದುಲ್ಲ ಮತ್ತು ಮುಸ್ತಫಿಜೂರ್ ರೆಹ್ಮಾನ್ ಜೋಡಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಲಂಕಾ ವೇಗಿ ಉದಾನ ಸತತ 2 ಬೌನ್ಸರ್ ಹಾಕಿದರು. 2ನೇ ಎಸೆತದಲ್ಲಿ ಮುಸ್ತಫಿಜೂರ್ ರನೌಟಾದರು. ಒಂದು ಓವರ್ ನಲ್ಲಿ ಒಂದು ಬೌನ್ಸರ್ ಗೆ ಮಾತ್ರ ಅಕಾಶವಿದ್ದರೂ 2ನೇ ಬೌನ್ಸರನ್ನು ಅಂಪೈರ್ ನೋಬಾಲ್ ಎಂದು ಪರಿಗಣಿಸಲಿಲ್ಲ. ಇದರಿಂದ ಸಿಟ್ಟಾದ ಬಾಂಗ್ಲಾ ಆಟಗಾರು ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಅಸಮಾಧಾನ ವ್ಯಕಪಡಿಸಿ ವಾಗ್ವಾದ ನಡೆಸಿದ್ದರು. ಇದನ್ನು ಓದಿ: ಬಾಂಗ್ಲಾ ಅಭಿಮಾನಿಗಳೇ ನನ್ನನ್ನು ಕ್ಷಮಿಸಿ: ಬೌಲರ್ ರುಬೆಲ್
Advertisement
NEWS: Shakib Al Hasan and Nurul Hasan have each been fined 25 per cent of their match fees and given one demerit point following Bangladesh's victory over Sri Lanka.
READ ➡️ https://t.co/PST0TcNbM3 pic.twitter.com/9qaYil7oqo
— ICC (@ICC) March 17, 2018
BREAKING: The @BCBtigers board have released a statement following yesterday's incident in their game against Sri Lanka, for which Shakib Al Hasan and Nurul hasan were punished.
READ ➡️ https://t.co/rwkZPnojEl pic.twitter.com/3BBNNvi91t
— ICC (@ICC) March 17, 2018