ಲಂಡನ್: ಶಕೀಬ್ ಅಲ್ ಹಸನ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಹತ್ವದ ಸಾಧನೆ ಮಾಡಿದ್ದು, ಬಾಂಗ್ಲಾದೇಶದ ಪರ ವಿಶ್ವಕಪ್ ಟೂರ್ನಿಯಲ್ಲಿ 1 ಸಾವಿರ ರನ್ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
32 ವರ್ಷದ ಶಕೀಬ್ ಅಘ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, ವಿಶ್ವಕಪ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 19ನೇ ಆಟಗಾರರಾಗಿದ್ದಾರೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 1 ಸಾವಿರ ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾ ತಂಡದ 5, ಆಸ್ಟ್ರೇಲಿಯಾದ ಹಾಗೂ ದಕ್ಷಿಣ ಆಫ್ರಿಕಾರ 3, ಭಾರತದ ಇಬ್ಬರು ಆಟಗಾರರು ಸೇರಿದಂತೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.
Advertisement
Shakib Al Hasan becomes the first Banglaldeshi batsman to pass 1,000 career World Cup runs and just the 19th man to reach the landmark overall ???? #CWC19 | #BANvAFG pic.twitter.com/UAXYSihXNk
— ICC Cricket World Cup (@cricketworldcup) June 24, 2019
Advertisement
ಅಂದಹಾಗೇ ಶಕೀಬ್ 2007 ರಿಂದ 2019ರ ಅವಧಿಯಲ್ಲಿ ನಡೆದ 4ನೇ ವಿಶ್ವಕಪ್ ಟೂರ್ನಿಗಳಲ್ಲಿ ಭಾವಹಿಸಿದ್ದಾರೆ. ತಮ್ಮ 27ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, 2019ರ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ದಕ್ಷಿಣ ಆಫ್ರಿಕಾ ವಿರುದ್ಧ 75, ನ್ಯೂಜಿಲೆಂಡ್ ವಿರುದ್ಧ 64 ರನ್ ಹಾಗೂ ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿದ್ದಾರೆ. ಅಲ್ಲದೇ ಅಫ್ಘಾನಿಸ್ತಾನದ ವಿರುದ್ಧ ಅರ್ಧ ಶತಕ ಸಿಡಿಸಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇದುವರೆಗೂ ಶಕೀಬ್ ಟೂರ್ನಿಯಲ್ಲಿ 476 ರನ್ ಗಳಿಸಿದ್ದು, ಆಸೀಸ್‍ನ ಡೇವಿಡ್ ವಾರ್ನರ್ 447 ರನ್, ಇಂಗ್ಲೆಂಡ್‍ನ ಜೋ ರೂಟ್ 424 ರನ್ ಗಳಿಸಿ ಟಾಪ್ 3 ಸ್ಥಾನದಲ್ಲಿ ಇದ್ದಾರೆ.
Advertisement
Shakib Al Hasan (124*) and Liton Das (94*) were the star men for Bangladesh as the Tigers went to their second victory of the tournament.#RiseOfTheTigers#WIvBAN | #CWC19 pic.twitter.com/NdHvzGvnAZ
— ICC (@ICC) June 17, 2019