ತನ್ನ ಬೋಲ್ಡ್ ಅವತಾರದಿಂದ ಬಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿರುವ ನಟಿ ರಿಚಾ ಚಡ್ಡಾ. ಇತ್ತೀಚೆಗಷ್ಟೇ ‘ಹೀರಾಮಂಡಿ’ (Hiramandi) ಚಿತ್ರದ ಮೂಲಕ ಸೌಂಡ್ ಮಾಡಿದ್ದ ನಟಿ. ಇದೀಗ ರಿಚಾ ಚಡ್ಡಾ (Richa Chadha) ತಾನು ಮಗುವಿಗೆ ಜನ್ಮ ನೀಡೋದ್ದಕ್ಕೂ ಮುನ್ನ ತೆಗೆಸಿಕೊಂಡ ವಿಭಿನ್ನ ಬೇಬಿ ಬಂಪ್ (Baby Bump) ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮಕ್ಕಳ ಜೊತೆ ಗ್ರೀಸ್‌ನಲ್ಲಿ ನಯನತಾರಾ ವೆಕೇಷನ್
ಇತ್ತೀಚೆಗೆ ಗರ್ಭಿಣಿ ನಟಿಯರು ತಮ್ಮದೇ ಆದ ಥೀಮ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸುವುದು ಸಾಮಾನ್ಯವಾಗಿದೆ. ಕೆಲ ನಟಿಯರು ಇನ್ನೂ ಮುಂದಕ್ಕೆ ಹೋಗಿ ಕ್ರಿಯೇಟಿವ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ. ಇದೀಗ ರಿಚಾ ಚಡ್ಡಾ ಇಂಥದ್ದೇ ಒಂದು ವಿಭಿನ್ನ ಪ್ರಯೋಗ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಹುಟ್ಟಿಸಿದ್ದಾರೆ. ತುಂಬು ಗರ್ಭಿಣಿಯಾಗಿದ್ದಾಗ ರಿಚಾ ಚಡ್ಡಾ ಹೊಟ್ಟೆ ಮೇಲೆ ಚಿತ್ತಾರ ಬಿಡಿಸಿಕೊಂಡು ಬೇಬಿ ಬಂಪ್ ಪ್ರದರ್ಶಿಸಿದ್ದಾರೆ.
View this post on Instagram
ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ರಿಚಾ ಚಡ್ಡಾ 9 ತಿಂಗಳ ಗರ್ಭಿಣಿಯಾಗಿದ್ದಾಗ ತಮ್ಮ ಎದೆಯಿಂದ ಹೊಟ್ಟೆಯವರೆಗೆ ವಿಭಿನ್ನ ಚಿತ್ರ ಬಿಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಿಚಾ ಚಡ್ಡಾ ತಾವು ಬಿಡಿಸಿಕೊಂಡ ಚಿತ್ರದ ವಿಶೇಷತೆಗಳನ್ನ ಹೇಳಿಕೊಂಡಿದ್ದಾರೆ. ಈ ರೇಖಾ ಚಿತ್ರವು ದೈವಿಕ ಸ್ತ್ರೀಲಿಂಗದ ಸಂಕೇತದ ಥೀಮ್‌ನಿಂದ ಚಿತ್ರಿಸಲಾಗಿದೆ ಎಂದಿದ್ದಾರೆ. ಜೊತೆಗೆ ತನ್ನ ಎಳೆ ಮಗುವಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಹ್ಯಾಪಿ ಡಾಟರ್ಸ್ ಡೇ ಮಗಳೇ ಒಂದಿನ ನಾವಿಬ್ಬರೂ ಒಟ್ಟಿಗೆ ಕುಳಿತು ಈ ಚಿತ್ರವನ್ನ ನೋಡುತ್ತೇವೆ ಎಂದು ಗೊತ್ತಿತ್ತು. ಆಗ ನೀನು ಹೊಟ್ಟೆಯೊಳಗೆ ಪೋಸ್ ನೀಡುತ್ತಿದ್ದರೆ ನಾನು ಹೊರಗಿನಿಂದ ಪ್ರಜ್ವಲಿಸುತ್ತಿದ್ದೆ, ಇದನ್ನು ಹೊರಗಿನವರು ನೋಡಬಹುದು ಆದರೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿ ಕಾಮೆಂಟ್ಸ್ ಆಫ್ ಮಾಡಿದ್ದಾರೆ.
ಅಂದಹಾಗೆ, ರಿಚಾ ಚಡ್ಡಾ 2022ರಲ್ಲಿ ಅಲಿ ಫಜಲ್ ಎಂಬುವರನ್ನ ಮದುವೆಯಾಗಿದರು. ತನ್ನ ನೇರಮಾತು, ಬೋಲ್ಡ್ ಅಭಿನಯದಿಂದ ರಿಚಾ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ, ಇದೀಗ ವಿಭಿನ್ನವಾಗಿ ಬೇಬಿ ಬಂಪ್ ಪ್ರದರ್ಶಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕುತೂಹಲ ಹುಟ್ಟಿಸಿದ್ದಾರೆ.