ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಶಾರುಖ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಹೆಸರಾಂತ ನಿರ್ದೇಶಕ ರಾಜ್ ಕುಮಾರ್ ಹಿರಾನಿ (Raj Kumar Hirani) ನಿರ್ದೇಶನದಲ್ಲಿ ತಯಾರಾಗುತ್ತಿರುವ ಡಂಕಿ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಈ ಸಿನಿಮಾದ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ.
Advertisement
ಡಂಕಿ ಸಿನಿಮಾವನ್ನು ನಿರ್ದೇಶಕರು ಕಾಶ್ಮೀರದಿಂದ (Kashmir) ಶುರು ಮಾಡಿದ್ದಾರೆ. ಈ ಭಾಗದ ಚಿತ್ರೀಕರಣಕ್ಕಾಗಿ ಶಾರುಖ್ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದಾರೆ. ಕಾಶ್ಮೀರದಲ್ಲಿ ತಮ್ಮ ನೆಚ್ಚಿನ ನಟ ಶಾರುಖ್ ಶೂಟಿಂಗ್ ನಲ್ಲಿ ಪಾಲ್ಗೊಂಡ ವಿಡಿಯೋವನ್ನು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Advertisement
Advertisement
ಹನ್ನೊಂದು ವರ್ಷದ ನಂತರ ಶಾರುಖ್ ಸಿನಿಮಾ ಕಾಶ್ಮೀರದಲ್ಲಿ ಚಿತ್ರೀಕರಣವಾಗುತ್ತಿದ್ದು, ಈ ಹಿಂದೆ ಜಬ್ ತಕ್ ಹೈ ಜಾನ್ ಸಿನಿಮಾದ ಶೂಟಿಂಗ್ ಅದೇ ಸ್ಥಳದಲ್ಲೇ ನಡೆದಿತ್ತು ಎಂದು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ. ಬರೋಬ್ಬರಿ 11 ವರ್ಷಗಳ ಬಳಿಕ ಆ ನೆಲದಲ್ಲಿ ಶಾರುಖ್ ಕಾಲಿಟ್ಟಿರುವುದು ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು
Advertisement
ಡಂಕಿ ಸಿನಿಮಾದಲ್ಲಿ ಶಾರುಖ್ ಜೊತೆ ತಾಪ್ಸಿ ಪನ್ನು(Taapsee Pannu) ಮತ್ತು ವಿಕ್ಕಿ ಕೌಶಲ್ (Vicky Kaushal) ನಟಿಸಿದ್ದು, ಸದ್ಯ ಕಾಶ್ಮೀರದ ಸೋನ್ ಮಾರ್ಗ್ ಪ್ರದೇಶದಲ್ಲಿ ಮಾತಿನ ಭಾಗದ ಚಿತ್ರೀಕರಣವನ್ನು ಮಾಡುತ್ತಿದ್ದಾರಂತೆ ನಿರ್ದೇಶಕ ರಾಜಕುಮಾರ್ ಹಿರಾನಿ.