ಹುಟ್ಟುಹಬ್ಬದಂದೇ ಮಗಳ ಕಾನೂನುಬಾಹಿರ ಕೆಲಸದ ಬಗ್ಗೆ ರಿವೀಲ್ ಮಾಡಿದ್ರು ಶಾರೂಖ್!

Public TV
1 Min Read
SHAHRUKH KHAN SUHANA KHAN COLLAGE

ಮುಂಬೈ: ಮಗಳು ಸುಹಾನಾ ಖಾನ್ ಮಂಗಳವಾರ 18ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಶಾರೂಖ್ ಖಾನ್ ತನ್ನ ಮಗಳ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಶುಭಾಶಯ ಕೋರಿದ್ದಾರೆ.

ಶಾರೂಖ್ ಖಾನ್ ತನ್ನ ಮಗಳು ಗಾಳಿಯಲ್ಲಿ ಹಾರುತ್ತಿರುವ ಫೋಟೋವನ್ನು ಟ್ವಿಟ್ಟರ್ ಹಾಗೂ ಇನ್‍ ಸ್ಟಾಗ್ರಾಂನಲ್ಲಿ ಹಾಕಿ, ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದರು. ಆದರೆ ಶಾರೂಖ್ ಅವರ ಈ ಟ್ವೀಟ್ ಎಲ್ಲರಿಗೂ ಕುತೂಹಲ ಮೂಡಿಸಿದೆ.

“ಎಲ್ಲ ಹಣ್ಣು ಮಕ್ಕಳ ತರಹ ನೀನು ಕೂಡ ಹಾರಲು ಹುಟ್ಟಿದ್ದೀಯ. ಈಗ ನೀನು 16ನೇ ವಯಸ್ಸಿನಲ್ಲಿ ಮಾಡುತ್ತಿದ್ದ ಆ ಎಲ್ಲಾ ಕೆಲಸಗಳನ್ನು ಈಗ ಕಾನೂನು ಪ್ರಕಾರ ಮಾಡಬಹುದು. ಲವ್ ಯೂ” ಎಂದು ಶಾರೂಖ್ ಖಾನ್ ತಮ್ಮ ಟ್ವಿಟ್ಟರಿನಲ್ಲಿ ಹಾಗೂ ಇನ್ ಸ್ಟಾಗ್ರಾಂನಲ್ಲಿ ಸುಹಾನಾ ಗಾಳಿಯಲ್ಲಿ ಹಾರುತ್ತಿರುವ ಫೋಟೋವನ್ನು ಹಾಕಿ ಶುಭಾಶಯ ಕೋರಿದ್ದಾರೆ.

ಶಾರೂಖ್ ಖಾನ್ ತಮ್ಮ ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಂನಲ್ಲಿ ಹಾಕಿರುವ ಸ್ಟೇಟಸ್ ಎಲ್ಲರಿಗೂ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ. ಶಾರೂಖ್ ಪುತ್ರಿ ಸುಹಾನಾ 16ನೇ ವಯಸ್ಸಿನಲ್ಲಿ ಯಾವ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಳು ಎಂಬ ಕುತೂಹಲ ಈಗ ಎಲ್ಲರಿಗೂ ಮೂಡಿದೆ.

ಸದ್ಯ ಶಾರೂಖ್ ಖಾನ್ ‘ಝೀರೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರೂ ನಾಯಕಿಯರಿದ್ದು, ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ಶಾರೂಖ್ ಖಾನ್‍ಗೆ ನಾಯಕಿಯಾಗಿ ಕಾಣಿಸುಕೊಳ್ಳುತ್ತಿದ್ದಾರೆ. ಈ ಮೊದಲು ‘ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಈ ಮೂವರು ಕಲಾವಿದರು ಒಟ್ಟಿಗೆ ನಟಿಸಿದ್ದರು.

Share This Article