ಮುಂಬೈ: ಡ್ರಗ್ಸ್ ಕೇಸ್ ಸಂಬಂಧಿಸಿದಂತೆ ಬಂಧನಕಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ 22 ದಿನಗಳ ಜೈಲುವಾಸದ ಬಳಿಕ ಇಂದು ಜಾಮೀನು ಮಂಜೂರಾಗಿದೆ. ಆರ್ಯನ್ ಖಾನ್ ಬಿಡುಗಡೆಗಾಗಿ ಕೋರ್ಟ್‍ನಲ್ಲಿ ವಾದ ಮಂಡಿಸಿದ ವಕೀಲರ ತಂಡೊಂದಿಗೆ ಶಾರೂಖ್ ಖಾನ್ ಫೋಟೋಗೆ ಪೋಸ್ ನೀಡುವ ಮೂಲಕ ಸಂಭ್ರಮಿಸಿದ್ದಾರೆ.
Advertisement
ಡ್ರಗ್ಸ್ ಕೇಸ್‍ನಲ್ಲಿ ಎನ್‍ಸಿಬಿ ಬಲೆಗೆ ಬಿದ್ದಿದ್ದ ಆರ್ಯನ್ ಖಾನ್‍ಗೆ ಮುಂಬೈನ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿತ್ತು. ಬಳಿಕ ಆರ್ಯನ್ ಖಾನ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಆರ್ಯನ್ ಪರ ವಾದ ಮಂಡಿಸಿದ್ದರು. ಈ ವಾದವನ್ನು ಆಲಿಸಿದ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಜಾಮೀನು ಮಂಜೂರು
Advertisement
Advertisement
ಆರ್ಥರ್ ಜೈಲಿನಲ್ಲಿ ಕಂಬಿ ಎಣಿಸಿದ್ದ ಆರ್ಯನ್ ಖಾನ್‍ಗೆ 13 ಷರತ್ತು ವಿಧಿಸಿ ಬಾಂಬೆ ಹೈಕೋರ್ಟ್ ಬೇಲ್ ನೀಡಿದೆ. ನವೆಂಬರ್ 2ಕ್ಕೆ ಆರ್ಯನ್ ಖಾನ್ ಬರ್ತ್‍ಡೇ ಇದ್ದು, ಜಾಮೀನು ಸಿಗೋ ಮುನ್ನ ದೀಪಾವಳಿ ಗಿಫ್ಟ್ ಸಿಕ್ಕಿದ್ದು, ನಾಳೆ ಅಥವಾ ನಾಡಿದ್ದು ರಿಲೀಸ್ ಆಗಲಿದ್ದಾರೆ. ಆರ್ಯನ್‍ಗೆ ಇಂಟರ್ನ್ಯಾಷನಲ್ ಡ್ರಗ್ಸ್ ಪೆಡ್ಲರ್ ಗಳ ನಂಟಿದೆ. ಬೇಲ್ ಕೊಡಬಾರದು ಎಂದು ಎನ್‍ಸಿಬಿ ವಾದ ಮಾಡಿತ್ತು. ಆದರೆ, ಆರ್ಯನ್ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಎರಡು ದಿನಗಳ ಕಾಲ ಪ್ರಬಲ ವಾದ ಮಂಡಿಸಿದ್ದರು. ಆರ್ಯನ್ ಬಳಿ ಡ್ರಗ್ಸ್ ಸಿಕ್ಕಿಲ್ಲ, ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿಲ್ಲ, ವಾಟ್ಸಪ್ ಚಾಟ್ ಒಂದರ ಆಧಾರದ ಮೇಲೆ ಅರೆಸ್ಟ್ ಮಾಡುವ ಅವಕಾಶ ಇರಲಿಲ್ಲ ಅಂತ ವಾದಿಸಿದ್ದರು.
Advertisement
Maharashtra: Fans of actor Shah Rukh Khan celebrate outside his residence 'Mannat' in Mumbai after Bombay High Court granted bail to his son Aryan in the drugs-on-cruise case pic.twitter.com/QytqfgFYnH
— ANI (@ANI) October 28, 2021
ಕೋರ್ಟ್‍ನಲ್ಲಿ ಜಾಮೀನು ಮಂಜೂರಾದ ಬಳಿಕ ವಕೀಲರ ತಂಡದೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳುವ ಮೂಲಕ ಶಾರೂಖ್ ಖಾನ್ ಸಂಭ್ರಮಾಚರಣೆ ಮಾಡಿಕೊಂಡರೆ, ಶಾರೂಖ್ ಅಭಿಮಾನಿಗಳು ಪಟಾಕಿ ಸಿಡಿಸಿ ಆರ್ಯನ್ ಬಿಡುಗಡೆ ಸುದ್ದಿಯನ್ನು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ರಾಗಿಣಿ ಕೇಸ್ ಉಲ್ಲೇಖ, ಆರ್ಯನ್‍ಗೆ ಜಾಮೀನು ನೀಡಿ – ಮುಕುಲ್ ರೊಹ್ಟಗಿ ವಾದ